Home Blog Page 3248

ಅಯ್ಯೋ ದುರ್ವಿಧಿಯೇ, ಮೊಹರಂ ಹಬ್ಬದಲ್ಲಿ ಇಬ್ಬರ ದರ್ಮರಣ; ಹೆಜ್ಜೆ ಹಾಕುತ್ತಲೇ ಕುಸಿದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸಾವು, ಮತ್ತೊಬ್ಬ ಅಲಿದೇವರು ಹೊತ್ತಾಗಲೇ ಸಾವು…..

ಗ್ರಾಮದಲ್ಲಿ ಸೂತಕದ ಛಾಯೇ….

ವಿಜಯಸಾಕ್ಷಿ ಸುದ್ದಿ, ಗದಗ

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಮೊಹರಂ ಹಬ್ಬದಲ್ಲಿ ಪ್ರತ್ಯೇಕ ಗ್ರಾಮಗಳಲ್ಲಿ ಇಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ದಾರುಣ ಘಟನೆ ಇಂದು ಜರುಗಿದೆ.

ಇದನ್ನೂ ಓದಿ ಫಾರ್ಮ್ ನಂ.3 ವಿತರಣೆಯಲ್ಲಿ ಕರ್ತವ್ಯಲೋಪ; ನಗರಸಭೆ ಕಂದಾಯ ಅಧಿಕಾರಿ ಸಸ್ಪೆಂಡ್ ಮಾಡಿ ಡಿಸಿ ಆದೇಶ

ಇವತ್ತು ಮೊಹರಂ ಕೊನೆಯ ದಿನವಾಗಿದ್ದರಿಂದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಂಜಾಗಳ (ಅಲಿದೇವರು) ಮೆರವಣಿಗೆಯಲ್ಲಿ ಹೆಜ್ಜೆ ಮಜಲಿನಲ್ಲಿ ಹೆಜ್ಜೆ ಹಾಕುತ್ತಿದ್ದ ವ್ಯಕ್ತಿ ನೋಡುನೋಡುತ್ತಿದ್ದಂತೆಯೇ ಕುಸಿದುಬಿದ್ದ. ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಅಸುನಿಗಿದ್ದಾನೆ.

ಲಕ್ಕುಂಡಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಇಮಾಮ್ ಸಾಬ ನದಾಫ್ (55) ಮೃತಪಟ್ಟ ದುರ್ಧೈವಿಯಾಗಿದ್ದಾನೆ.

ಇನ್ನೊಂದು ಪ್ರಕರಣದಲ್ಲಿ ಅಲಿದೇವರು (ಪಂಜಾ) ಹೊತ್ತಿದ್ದ ವ್ಯಕ್ತಿ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಗದಗ ತಾಲೂಕಿನ ಹರ್ಲಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶರೀಫ್ ಮೂಲಿಮನಿ (40) ಮೃತಪಟ್ಟ ದುರ್ಧೈವಿ. ಮೊಹರಂ ಹಬ್ಬದ ಕೊನೆಯ ದಿನವೇ ಈ ಎರಡೂ ಘಟನೆ ನಡೆದಿದ್ದು, ಎರಡೂ ಗ್ರಾಮದಲ್ಲಿ ಸೂತಕರ ವಾತಾವರಣ ನಿರ್ಮಾಣವಾಗಿದೆ.

ಫಾರ್ಮ್ ನಂ.3 ವಿತರಣೆಯಲ್ಲಿ ಕರ್ತವ್ಯಲೋಪ; ನಗರಸಭೆ ಕಂದಾಯ ಅಧಿಕಾರಿ ಸಸ್ಪೆಂಡ್ ಮಾಡಿ ಡಿಸಿ ಆದೇಶ

0

ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರಪೇಕ್ಷಣಾ ಪತ್ರ ಇಲ್ಲದಿದ್ದರೂ ಫಾರ್ಮ್ ನಂ.3 ವಿತರಿಸಿದ್ದ ಕಂದಾಯ ಅಧಿಕಾರಿ…..

ವಿಜಯಸಾಕ್ಷಿ ಸುದ್ದಿ, ಗದಗ

ಫಾರ್ಮ್ ನಂ 3 ವಿತರಣೆಯಲ್ಲಿ ವಿಳಂಬ ಹಾಗೂ ಕರ್ತವ್ಯ ಲೋಪ ಎಸಗಿದ ನಗರಸಭೆ ಕಂದಾಯ ಅಧಿಕಾರಿ ಮಹೇಶ್ ಹಡಪದ ಅಮಾನತು ಆಗಿದ್ದಾರೆ.

ಈ ಕುರಿತು ಗದಗ ಡಿಸಿ ವೈಶಾಲಿ ಎಂ.ಎಲ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

01-04-2023ರಿಂದ 13-07-23. ರವರೆಗೆ ನಗರಸಭೆಯಿಂದ ಒಟ್ಟು 3148 ಫಾರ್ಮ್ ನಂ.3 ವಿವರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಅನ್ನಪೂರ್ಣ ಮುದಕಮ್ಮನವರ್ ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಮಯದಲ್ಲಿ ಪೌರಾಯುಕ್ತರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದರು.

ಆದರೆ ರಿ.ಸ.ನಂ 862+863-864 ವಸತಿ ವಿನ್ಯಾಸದಲ್ಲಿ 979 ಹಾಗೂ ಇನ್ನುಳಿದ ಬೇರೆ ಬೇರೆ ನಿವೇಶನ ಸೇರಿದಂತೆ ಒಟ್ಟು 1063 ಫಾರ್ಮ್ ನಂ.3 ವಿತರಣೆ ಮಾಡಲಾಗಿದೆ. ಆದರೆ ಇದರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪೂರ್ಣ ಪ್ರಮಾಣದ ನಿವೇಶನ ಅಭಿವೃದ್ಧಿ ಹೊಂದಿದ ಬಗ್ಗೆ ನಿರಪೇಕ್ಷಣಾ ಪತ್ರ ಪಡೆಯದೇ ಕಂದಾಯ ಅಧಿಕಾರಿ ಮಹೇಶ್ ಹಡಪದ ಫಾರ್ಮ್ ನಂ.3 ವಿತರಣೆ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖವಿದೆ.

ನಗರಸಭೆ ಸದಸ್ಯರಾದ ಬರಕತ್ ಅಲಿ ಮುಲ್ಲಾ ಹಾಗೂ ಲಕ್ಷ್ಮಿ ಅನಿಲಕುಮಾರ್ ಸಿದ್ದಮ್ಮನಹಳ್ಳಿ ಅವರ ದೂರಿನ ಮೇರೆಗೆ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ್ ತನಿಖೆ ಮಾಡಿ ವರದಿ ಸಲ್ಲಿಸಿದ್ದರು.

ಅಪರ ಜಿಲ್ಲಾಧಿಕಾರಿಗಳ ವರದಿ ಆಧಾರಿಸಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಬೀಗ ಮುರಿದು ನಗದು ಸೇರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ

ಪೊಲೀಸರ ಭೇಟಿ, ಪರಿಶೀಲನೆ….

ವಿಜಯಸಾಕ್ಷಿ ಸುದ್ದಿ, ಗದಗ

ಮನೆ ಬಾಗಲಿಗೆ ಹಾಕಿದ್ದ ಬೀಗ ಮೀಟಿ ಒಳಹೊಕ್ಕು ಕಳ್ಳರು ಮನೆಯಲ್ಲಿದ್ದ ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ.

ಗದಗ ತಾಲೂಕಿನ ಮುಂಡರಗಿ ರಸ್ತೆಯ ಪಾಪನಾಶಿ ಗ್ರಾಮದ ರೈತ ಕೊಟ್ರಯ್ಯ ಬಸಯ್ಯ ಶಿರೋಳ ಎಂಬುವರು ಮನೆಯೇ ಕಳ್ಳತನವಾಗಿದ್ದು, ಮನೆಯಲ್ಲಿದ್ದ ಟ್ರಜರಿಯ ಬಾಗಿಲು ಯಾವುದು ವಸ್ತುವಿನಿಂದ ಮುರಿದು ಅದರೊಳಗೆ ಇದ್ದ 2 ಲಕ್ಷ 25 ಸಾವಿರ ರೂ ಮೌಲ್ಯದ 45 ಗ್ರಾಮ ತೂಕದ ಬಂಗಾರದ ತಾಳಿ ಚೈನ್, 15 ಸಾವಿರ ರೂ. ಮೌಲ್ಯದ ಮೂರು ಗ್ರಾಮ ತೂಕದ ಬಂಗಾರದ ಗಟ್ಟಿ ಚೂರುಗಳು, 17,500 ರೂ. ಮೌಲ್ಯದ ಬೆಳ್ಳಿಯ ಆರತಿ ಸಟ್ಟು, 11,200 ರೂ. ಗಳ ಬೆಳ್ಳಿಯ ಕಾಲ್ ಚೈನ್, ಹಾಗೂ 53 ಸಾವಿರ ನಗದು ಹಣ ಸೇರಿದಂತೆ 3,21, 700 ರೂ, ಮೌಲ್ಯದ ವಸ್ತುಗಳನ್ನು
ಕಳವು ಮಾಡಲಾಗಿದೆ.

ಈ ಕುರಿತು ಪಾಪನಾಶಿ ಗ್ರಾಮದ ಕೊಟ್ರಯ್ಯ ಬಸಯ್ಯ ಶಿರೋಳ ಎಂಬುವರು ಗದಗ ಗ್ರಾಮೀಣ ಠಾಣೆಗೆ ದೂರು ‌ನೀಡಿದ್ದು, ಕ್ರೈಮ್ ನಂಬರ್-0214/2023, IPC 1860(U/s-457,380) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಔಷಧಿ ಖರೀದಿ ನೆಪದಲ್ಲಿ ರೈತನ ಹಣ ಕಳ್ಳತನ; ಸಿಸಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯ ಸೆರೆ

ಅಂತರಾಜ್ಯದ ಖದೀಮರಿಂದ ಕೃತ್ಯದ ಶಂಕೆ…?

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ರಸಗೊಬ್ಬರ ಅಂಗಡಿಯಲ್ಲಿ ಕುಳಿತಿದ್ದ ರೈತನೋರ್ವನ ಕಿಸೆಯಿಂದ ಮೂವರು ಕಳ್ಳರು ೨೨೫೦೦ ರೂ ಕಳ್ಳತನ ಮಾಡಿ ಪರಾರಿಯಾದ ಘಟನೆ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತಾಲೂಕಿನ ರಣತೂರ ಗ್ರಾಮದ ರೈತ ಮುತ್ತಪ್ಪ ಬಸಪ್ಪ ಓಲಿ ಎಂಬುವರು ಪಟ್ಟಣದ ಗೊಬ್ಬರ ಅಂಗಡಿಯಲ್ಲಿ ಕಳೆನಾಶಕ ಔಷಧಿ ಖರೀದಿಗೆ ಬಂದಿದ್ದರು. ಇವರ ಶರ್ಟ್ ಮೇಲ್ಗಿಸೆಯಲ್ಲಿರುವ ದುಡ್ಡನ್ನು ಗಮನಿಸಿದ ಒರ್ವ ಮಹಿಳೆ ಇಬ್ಬರು ಪುರುಷರು ತರಕಾರಿ ಬೀಜ ಮತ್ತು ಕಳೆನಾಶಕ ಔಷಧ ಖರೀದಿ ನೆಪದಲ್ಲಿ ತಂತ್ರಮಾಡಿ ರೈತನ ಕಿಸೆಯಲ್ಲಿದ್ದ ೨೨೫೦೦ ರೂ ಯಾಮರಿಸಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ ವಾರ್ಡ್ ನಲ್ಲಿ ಅವ್ಯವಸ್ಥೆ, ಸಿಟ್ಟಿಗೆದ್ದ ಜನ್ರಿಂದ ನಗರಸಭೆಯ ಬಿಜೆಪಿ ಸದಸ್ಯನ‌ ಕೂಡಿ ಹಾಕಿ ಆಕ್ರೋಶ….

ದುಡ್ಡು ಕಳೆದುಕೊಂಡ ರೈತ ತೀವ್ರ ಆತಂಕ್ಕೀಡಾದುದನ್ನು ಮನಗಂಡ ಅಂಗಡಿ ಮಾಲೀಕರು ರೈತನನ್ನು ಸಮಾಧಾನಪಡಿಸಿ ಪೊಲೀಸರಿಗೆ ವಿಷಯ ತಲುಪಿಸಿದ್ದಾರೆ.

ಸ್ಥಳಕ್ಕೆ ಬೇಟಿ ನೀಡಿದ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿ ಕಳ್ಳರು ಆಂಧ್ರದ ಮೂಲದವರಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದು, ಶೀಘ್ರವಾಗಿ ಪತ್ತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡಕ್ಕೆ ಸದ್ಯಕ್ಕೆ ಯಾರೂ ಹೋಗಬೇಡಿ……..

ಕಳೆದ ಹಲವು ದಿನಗಳಿಂದ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶುಕ್ರವಾರ ಸಂತೆ ದಿನ, ಅಮವಾಸ್ಯೆ ವೇಳೆ ಕಳ್ಳತನದ ಘಟನೆಗಳು ನಡೆಯುತ್ತಲೇ ಇದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶುಕ್ರವಾರದ ಸಂತೆಗೆ ಲಕ್ಷಾಂತರ ಜನ ಸೇರುವುದನ್ನು ಅರಿತಿರುವ ಕಳ್ಳರ ತಂಡದಿಂದಲೇ ಈ ಕೃತ್ಯ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಶಿವಮೊಗ್ಗ, ಹಾನಗಲ್, ಹುಬ್ಬಳ್ಳಿ, ಗದಗದಿಂದ ಬರುವ ಕಳ್ಳರು ಬಸ್ ನಿಲ್ದಾಣ, ಆಭರಣದ ಅಂಗಡಿ, ಸಂತೆ ಗದ್ದಲದಲ್ಲಿ ಆಭರಣ, ಹಣ, ಮೊಬೈಲ್ ಇತರೆ ಬೆಲೆ ಬಾಳುವ ವಸ್ತುಗಳನ್ನು ಅಪಹರಿಸಿಕೊಂಡು ಪರಾರಿಯಾಗುತ್ತಿದ್ದಾರೆ. ಈ ಬಗ್ಗೆ ಆಗಾಗ್ಗೆ ಪೊಲೀಸರು ಕೆಲವರನ್ನು ಹಿಡಿದು ಬಿಸಿಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ.

ಆದರೂ ಕಳ್ಳರ ಕೈ ಚಳಕ ಮುಂದುವರೆದಿದೆ. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಅದೇಷ್ಟೋ ಅಮಾಯಕರು ಸಂಕಷ್ಟಕ್ಕೆ ಸಿಲುಕಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರಿನಲ್ಲಿ ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ: ಕಾರ್ ಸಮೇತ ಅಕ್ಕಿ ಜಪ್ತಿ

ನಿಲ್ಲದ ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಾಟ ದಂಧೆ….

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಸಾರ್ವಜನಿಕರಿಗೆ ವಿತರಿಸುವ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಕಾರ್ ಸಮೇತ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.

ಮುಂಡರಗಿ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಸಂಗ್ರಹಿಸಿ, ತನ್ನ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಗದಗ ನಗರದ ಖಾನತೋಟ, ನಾಗಲಿಂಗ ನಗರದ ಜನತಾ ಕಾಲೋನಿಯ ಶಬ್ಬೀರ ಅಹ್ಮದ್ ತಂದೆ ಅಬ್ದುಲ್ ಸಾಬ ಮುಲ್ಲಾ ಎಂಬಾತ ಸಿಕ್ಕಿ ಬಿದ್ದಿದ್ದಾನೆ.

ka25/c 7230 ನಂಬರಿನ ಕಾರಿನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು.

ಗದಗ ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದ ಆರೋಪಿ ಶಬ್ಬೀರ ಅಹ್ಮದ್ ಮುಲ್ಲಾ ಎಂಬಾತನನ್ನು ಸಾರ್ವಜನಿಕರು ಕಾರ್ ಸಮೇತ ಪೊಲೀಸರಿಗೆ ಒಪ್ಪಿಸಿದ್ದರು.

ಸುಮಾರು 11,220 ರೂ.ಗಳ ಮೌಲ್ಯದ 330ಕೆಜಿ ತೂಕದ 13 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ.

ಈ ಕುರಿತು ಆರೋಪಿ ಶಬ್ಬೀರ ಅಹ್ಮದ್ ಮೇಲೆ ಕಲಂ:03 ಮತ್ತು 07. ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಕಲಂ:18 ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣಾ ಆದೇಶ 2016ರ ಪ್ರಕಾರ ಮುಂಡರಗಿ ಆಹಾರ ನಿರೀಕ್ಷಕರಾದ ಜಗದೀಶ್ ಅಮಾತಿ ದೂರು ನೀಡಿದ್ದು, c/no-0114/2023 ದಾಖಲಾಗಿದೆ.

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡಕ್ಕೆ ಸದ್ಯಕ್ಕೆ ಯಾರೂ ಹೋಗಬೇಡಿ……..

0

ಕಪ್ಪತಗುಡ್ಡದ ಪರಿಸರಕ್ಕೆ ಹಾನಿ: ಗುಡ್ಡದ ತುಂಬ ಪ್ಲಾಸ್ಟಿಕ್ ತ್ಯಾಜ್ಯ…..ಪ್ರವಾಸಿಗರಿಗೆ ಕಪ್ಪತಗುಡ್ಡ ಪ್ರವೇಶಕ್ಕೆ ನಿರ್ಬಂಧ…..

ವಿಜಯಸಾಕ್ಷಿ ಸುದ್ದಿ, ಗದಗ

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಸಿದ್ಧವಾಗಿರುವ ಕಪ್ಪತಗುಡ್ಡದ ಪರಿಸರಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರಿಂದ ಸಾಕಷ್ಟು ಹಾನಿಯಾಗುತ್ತಿದ್ದು, ಕಪ್ಪತಗುಡ್ಡಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಕಪ್ಪತಗುಡ್ಡ ಪರಿಸರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಈ ತಾಣ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಗುಡ್ಡದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗದಿಂದ ನಿಸರ್ಗ ಪ್ರಿಯರು ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ; ನೂಕು-ನುಗ್ಗಲು, ಗಲಾಟೆ, ಚುನಾವಣೆ ಮುಂದೂಡಿಕೆ

ಹೀಗೆ ಭೇಟಿ ನೀಡುವ ಪ್ರವಾಸಿಗರು ಹದ್ದು ಮೀರಿ ವರ್ತಿಸುತ್ತಿದ್ದಾರೆ. ಮದ್ಯಪಾನ ಮಾಡಿ ಅರಣ್ಯ ಪ್ರದೇಶಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ. ಬೈಕ್, ಜೀಪ್‌ಗಳಲ್ಲಿ ತಂಡೋಪತAಡವಾಗಿ ಆಗಮಿಸಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಕಪ್ಪತಗುಡ್ಡದ ಪರಿಸರವನ್ನು ಹಾಳು ಮಾಡುತ್ತಿದ್ದಾರೆ.

ಪ್ರವಾಸಿಗರ ವರ್ತನೆ ಪ್ರಾಣಿ-ಪಕ್ಷಿಗಳ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಕಪ್ಪತಗುಡ್ಡ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ ವಾರ್ಡ್ ನಲ್ಲಿ ಅವ್ಯವಸ್ಥೆ, ಸಿಟ್ಟಿಗೆದ್ದ ಜನ್ರಿಂದ ನಗರಸಭೆಯ ಬಿಜೆಪಿ ಸದಸ್ಯನ‌ ಕೂಡಿ ಹಾಕಿ ಆಕ್ರೋಶ….

ಕಪ್ಪತಗುಡ್ಡ ವನ್ಯಜೀವಿ ಧಾಮವೂ ಆಗಿರುವುದಿರಂದ, ಅರಣ್ಯ ಪ್ರದೇಶದೊಳಗೆ ಪೂರ್ವಾನುಮತಿ ಪಡೆಯದೆ ಪ್ರವೇಶ ಮಾಡುವುದು ನಿಷಿದ್ಧ.

ಆದರೂ ನಿಸರ್ಗಾಸಕ್ತರು, ಪ್ರವಾಸಿಗರು ಕಪ್ಪತಗುಡ್ಡವನ್ನು ನೋಡಿ ಆನಂದಿಸಲಿ ಎಂದು ಒಂದಷ್ಟು ವಿನಾಯಿತಿ ನೀಡಲಾಗಿತ್ತು. ಇದರಿಂದ ಗುಡ್ಡದ ಪರಿಸರಕ್ಕೆ ಹಾನಿ ಆಗುತ್ತಿರುವುದರಿಂದ ಮತ್ತು ಅತಿಯಾದ ಮಳೆಯಿಂದ ಗುಡ್ಡದ ಮಣ್ಣು ಕುಸಿಯುತ್ತಿರುವುದರಿಂದ ಮುಂದಿನ ಆದೇಶದವರೆಗೆ ಡೋಣಿ ಮಾರ್ಗವಾಗಿ ಕಪ್ಪತ್ತಗುಡ್ಡ ಗಾಳಿಗುಂಡಿಗೆ ಹೋಗುವ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಕಪ್ಪತಹಿಲ್ಸ್ ವಲಯ ಅರಣ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ; ನೂಕು-ನುಗ್ಗಲು, ಗಲಾಟೆ, ಚುನಾವಣೆ ಮುಂದೂಡಿಕೆ

ಪೊಲೀಸರ ಜೊತೆಗೆ ವಾಗ್ವಾದ…..

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧಿಕಾರಿಗಳ ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದು ಚುನಾವಣೆ ಮುಂದೂಡಿದ ಘಟನೆ ನಡೆದಿದೆ.

ತಾಲ್ಲೂಕು ಬಿದರಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿ ಆಗಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಅಭ್ಯರ್ಥಿಯ ಜಾತಿಯ ಪ್ರಮಾಣಪತ್ರದ ಕುರಿತು ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಚುನಾವಣಾ ಕರ್ತವ್ಯಕ್ಕೆ ಬಂದಿದ್ದ ಪೊಲೀಸರ ಜೊತೆಗೂ ಕೆಲ ಗ್ರಾಮಸ್ಥರು ವಾಗ್ವಾದ ನಡೆಸಿದರು.

ಚುನಾವಣಾ ಪ್ರಕ್ರಿಯೆ ನಡೆಯುವ ಕಚೇರಿಗೂ ನುಗ್ಗಲು ಮುಂದಾದ ಗ್ರಾಮಸ್ಥರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಕೆಲವರು ಪೇದೆಯೊಬ್ಬನ್ನನ್ನು ಎಳೆದಾಡಿದ್ದಾರೆ. ಇದರಿಂದಾಗಿ ಇಡೀ ಗ್ರಾಮ ಪಂಚಾಯತಿ ಆವರಣ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೆಲವರು ಚುನಾವಣಾ ಮುಂದೂಡಲು ಒತ್ತಾಯಿಸಿ ಪ್ರತಿಭಟಿಸಿದರು.

ಕೊನೆಗೆ ಚುನಾವಣೆ ಮುಂದೂಡಲಾಗಿದೆ ಎಂದು ಚುನಾವಣಾ ಅಧಿಕಾರಿ ವಿಶ್ವನಾಥ ಅವರು ಘೋಷಿಸಿದಾಗ ಪ್ರತಿಭಟನೆ, ಆಕ್ರೋಶ ತಣ್ಣಗಾಯಿತು.

ವಾರ್ಡ್ ನಲ್ಲಿ ಅವ್ಯವಸ್ಥೆ, ಸಿಟ್ಟಿಗೆದ್ದ ಜನ್ರಿಂದ ನಗರಸಭೆಯ ಬಿಜೆಪಿ ಸದಸ್ಯನ‌ ಕೂಡಿ ಹಾಕಿ ಆಕ್ರೋಶ….

ಸ್ಥಳೀಯರ ಮನವೊಲಿಸಿ ಹೊರ ತಂದ ಪೊಲೀಸರು…..

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹದಗೆಟ್ಟ ರಸ್ತೆಯಿಂದ ಆಕ್ರೋಶಗೊಂಡ ಜನರು ನಗರಸಭೆ ಸದಸ್ಯರೊಬ್ಬರನ್ನು ಕೂಡಿ ಹಾಕಿದ ಘಟನೆ ಬೆಟಗೇರಿಯ ಬಣ್ಣದನಗರದಲ್ಲಿ ಜರುಗಿದೆ.

ಬೆಟಗೇರಿಯ ಮೂರನೇ ವಾರ್ಡ್ ನಲ್ಲಿ ಈ ಘಟನೆ ಜರುಗಿದ್ದು, ನಗರಸಭೆಯ ಬಿಜೆಪಿ ಸದಸ್ಯ ಮಾಧುಸಾ ಮೆಹರವಾಡೆ ಅವರನ್ನು ಸಮಸ್ಯೆ ಆಲಿಸಿಲು ಕರೆಸಿಕೊಂಡು ಸಾರ್ವಜನಿಕರು ಕೂಡಿ ಹಾಕಿದ್ದಾರೆ.

ಈಶ್ವರ ಸೇವಾ ಟ್ರಸ್ಟ್ ಕಮಿಟಿ ಕಛೇರಿಯಲ್ಲಿ ಮುಂಜಾನೆ 10-30ರ ಸುಮಾರಿಗೆ ಕೂಡಿ ಹಾಕಿದ್ದಾರೆ. ಕೂಡಿ ಹಾಕಿ‌ ಮೂರು ಗಂಟೆಯಾದರೂ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆ ಸದಸ್ಯ ಮಾಧುಸಾ ಅವರು, ನಗರಸಭೆ ಆಯುಕ್ತರಿಗೆ ಫೋನ್ ಮಾಡಿದ್ರೂ ಅವರು ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

ವಾರ್ಡ್ ನಲ್ಲಿ ಚರಂಡಿ, ಕುಡಿಯುವ ನೀರು, ಬೀದಿ ದೀಪ, ರಸ್ತೆ ಹದಗೆಟ್ಟಿವೆ. ಈ ಕುರಿತು ಸದಸ್ಯನಿಗೆ ಹಲವಾರು ಬಾರಿ‌ ಮನವಿ ಮಾಡಿದ್ರೂ ಅವರು ಸ್ಪಂದಿಸುವ ಗೋಜಿಗೆ ಹೋಗಿಲ್ಲ ಎಂಬ ಮಾತುಗಳು ಕೇಳಿ ಬಂದವು.

ಹೀಗಾಗಿ ಇವತ್ತು ವಾರ್ಡ್ ಗೆ ಕರೆಸಿ ಕೂಡಿ ಹಾಕಿ ಸಾರ್ವಜನಿಕರು ಬಿಸಿ ತಟ್ಟಿಸಿದ್ದಾರೆ.

ಸುದ್ದಿ ತಿಳಿದ ಬೆಟಗೇರಿ ಪೊಲೀಸರು ಭೇಟಿ ನೀಡಿ, ಸ್ಥಳೀಯರ ಮನವೊಲಿಸಿ ನಗರಸಭೆ ಸದಸ್ಯ ಮಾಧುಸಾ ಮೆಹರವಾಡೆ ಅವರನ್ನು ಈಶ್ವರ ಸೇವಾ ಟ್ರಸ್ಟ್ ಕಚೇರಿಯಿಂದ ಹೊರತಂದಿದ್ದಾರೆ.

ಅಂದರ್-ಬಾಹರ್ ಜೂಜಾಟ; ಆರು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಆರು ಜನರ ತಂಡದ ಮೇಲೆ ಬೆಟಗೇರಿ ಬಡಾವಣೆ ಪೊಲೀಸರು ದಾಳಿ ಬಂಧಿಸಿದ್ದಾರೆ.

ಬಂಧಿತರನ್ನು ಪಂಚಾಕ್ಷರಿ ನಗರದ ಮೌನೇಶ್ ಗುರುಸಿದ್ದಪ್ಪ ಬಡಿಗೇರ, ಪಿ ಆಂಡ್ ಟಿ ಕ್ವಾರ್ಟರ್ಸ್ ನ ಸುಮಂತಕುಮಾರ್ ಮಂಜುನಾಥ್ ವಾಲ್ಮೀಕಿ, ವಿವೇಕಾನಂದ ನಗರದ ಪರಶುರಾಮ ಹನಮಂತಪ್ಪ ಸಂಗಟಿ, ಹಮಾಲರ ಪ್ಲಾಟ್ ನ ಮರ್ದಾನಸಾಬ ಖಾದರಸಾಬ ಕಾತರಕಿ, ನಿಸರ್ಗ ಬಡಾವಣೆಯ ರಾಜು ಗವಿಸಿದ್ದಪ್ಪ ಹಂಸನೂರ ಹಾಗೂ ರಮೇಶ್ ಹಾಲಸಿದ್ದಪ್ಪ ಅಳಗುಂಡಿ ಎಂದು ಗುರುತಿಸಲಾಗಿದೆ.

ಬಂಧಿತರು ಹಾತಲಗೇರಿ ರಿಂಗ್ ರೋಡ್, ಪಿಪಿಜಿ ಕಾಲೇಜ್ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಬಡಾವಣೆ ಠಾಣೆಯ ಪಿಎಸ್ಐ ವಗ್ಗರ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.

ಬಂಧಿತರಿಂದ ನಗದು 4800 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಕ್ರೈಮ್ ನಂಬರ್-0055/2023 ಕರ್ನಾಟಕ ಪೊಲೀಸ್ ಆಕ್ಟ್‌ 1963(U/s-87) ಎನ್.ಸಿ ನಂ.14/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶಿಕ್ಷಕರ ಸಹಾಯಹಸ್ತ; ನವೀಕರಗೊಂಡ ಸಮೂಹ ಸಂಪನ್ಮೂಲ ಕೇಂದ್ರ ಉದ್ಘಾಟನೆ ಇಂದು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಶಿಥಿಲಾವಸ್ಥೆ ತಲುಪಿದ್ದ ಸಮೂಹ ಸಂಪನ್ಮೂಲ ಕೇಂದ್ರಗಳನ್ನು ಆಯಾ ಕ್ಲಸ್ಟರ್ ಮಟ್ಟದ ಶಿಕ್ಷಕ ಸಮೂಹವೇ ಸ್ವಯಂ ಪ್ರೇರಣೆಯಿಂದ ಲಕ್ಷಾಂತರ ರೂ ಖುರ್ಚು ಮಾಡಿ ನವೀಕರಣಗೊಳಿಸುವ ಕಾರ್ಯ ಮಾಡುತ್ತಿದ್ದು ಜು.27 ರಂದು ಗುರುವಾರ ನವೀಕರಣಗೊಂಡ ದೊಡ್ಡೂರಿನಲ್ಲಿನ ಸಮೂಹ ಸಂಪನ್ಮೂಲ ಕೇಂದ್ರದ ಉದ್ಘಾಟನೆ ಜರುಗಲಿದೆ.

ಆಯಾ ಕ್ಲಸ್ಟರ್ ಮಟ್ಟದ ಶಿಕ್ಷಕರ ತರಬೇತಿ, ಕಾರ್ಯಾಗಾರ, ಸಭೆ ಸೇರಿ ಇಲಾಖೆಯ ಇತರೆಲ್ಲ ಕಾರ್ಯಕ್ರಮಗಳ ಅನಕೂಲಕ್ಕಾಗಿ ತಾಲೂಕಿನ ದೊಡ್ಡೂರ, ಲಕ್ಷ್ಮೇಶ್ವರ, ಪು.ಬಡ್ನಿ, ಸೂರಣಗಿ, ಶಿಗ್ಲಿ ಒಟ್ಟು 5 ಕ್ಲಸ್ಟರ್ ವಿಭಾಗದಲ್ಲಿ 1997 ರಲ್ಲಿ ಡಿಪಿಇಪಿ ಯೋಜನೆಯಡಿ ಈ ಕಟ್ಟಡಗಳು ನಿರ್ಮಾಣಗೊಂಡಿದ್ದವು.

ಆದರೆ ಇವುಗಳ ನಿರ್ವಹಣೆ, ದುರಸ್ಥಿಗಾಗಿ ಯಾವುದೇ ಅನುದಾನ ಇಲ್ಲದ್ದರಿಂದ ಕಾಲಕ್ರಮೇಣ ಈ ಕಟ್ಟಡಗಳು ಶಿಥಿಲಗೊಂಡು ನಿರುಪಯುಕ್ತ ಮತ್ತು ದುರುಪಯೋಗವಾಗಿದ್ದವು. ಹಾಳಾಗುತ್ತಿರುವ ಕಟ್ಟಡಗಳನ್ನು ದುರಸ್ಥಿಪಡಿಸುವ ಬಗ್ಗೆ ಆಸಕ್ತಿ ತೋರಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಪಿಗಳು ನೀಡಿದ ಸಲಹೆ-ಸೂಚನೆ ಹಿನ್ನಲೆ ಪ್ರೇರಿತರಾದ ಆಯಾ ಕ್ಲಸ್ಟರ್ ಸಿಆರ್‌ಪಿಗಳು ಸ್ಥಳೀಯ ಗ್ರಾಪಂ, ಸಂಬಂಧಿತ ಮುಖ್ಯ ಶಿಕ್ಷಕರು, ಶಿಕ್ಷಕರ ಸಹಾಯ-ಸಹಕಾರದಿಂದ ಈ ಕಟ್ಟಡಗಳಿಗೆ ಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ದೊಡ್ಡೂರಿನಲ್ಲಿನ ಸಿಆರ್‌ಸಿ ಕೇಂದ್ರವನ್ನು ಸಿಆರ್‌ಪಿ ಆರ್.ಎಚ್ ರಾಜೂರ ಅವರ ನೇತೃತ್ವದಲ್ಲಿ ಎಲ್ಲರ ಸಹಕಾರದಿಂದ 1 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಿ ನವೀಕರಣಗೊಳಿಸಿದ್ದಾರೆ. ಪು.ಬಡ್ನಿಯಲ್ಲಿ ಹಾಳಾಗಿದ್ದ ಕಟ್ಟಡವನ್ನು ಸಿಆರ್‌ಪಿ ಗಿರೀಶ ನೇಕಾರ 1.5 ಲಕ್ಷ ರೂ ವೆಚ್ಚದಲ್ಲಿ ನವೀಕರಣಗೊಳಿಸಿದ್ದಾರೆ. ಶಿಗ್ಲಿಯಲ್ಲಿ ಜ್ಯೋತಿ ಗಾಯಕವಾಡ, ಲಕ್ಷ್ಮೇಶ್ವರದಲ್ಲಿ ಉಮೇಶ ನೇಕಾರ, ಸೂರಣಗಿಯಲ್ಲಿನ ಕಟ್ಟಡವನ್ನು ಲೊಕೇಶ ಮಠದ ನೇತೃತ್ವದಲ್ಲಿ ನವೀಕರಣಕ್ಕೆ ಅಣಿಯಾಗಿರುವುದು ಶ್ಲಾಘನೀಯ.

ಶಾಲೆಯನ್ನೇ ದೇವಾಲಯವೆಂದು, ಮಕ್ಕಳನ್ನೇ ದೇವರೆಂದು ಪೂಜ್ಯನೀಯ ಭಾವನೆಯಿಂದ ಶಿಕ್ಷಣ ಸೇವೆ ಮಾಡುವ ಶಿಕ್ಷಕರು ತಮ್ಮ ಒಂದು ಸಲಹೆಯನ್ನು ಅತ್ಯಂತ ಆಸಕ್ತಿಯಿಂದ ಸ್ವೀಕರಿಸಿ ಕ್ಷೇತ್ರವ್ಯಾಪ್ತಿಯಲ್ಲಿ ಶಿಥಿಲಗೊಳ್ಳುತ್ತಿರುವ ಸಿಆರ್‌ಸಿ ಕಟ್ಟಡಗಳನ್ನು ತಮ್ಮ ಸ್ವಂತದ ಮತ್ತು ಅಲ್ಪ ದಾನಿಗಳ ಸಹಾಯದಿಂದ ಅಭಿವೃದ್ಧಿಗೊಳಿಸುವ ಮೂಲಕ ಇಲಾಖೆಯ ಅಳಿಲು ಸೇವೆ ಮಾಡಿರುವುದು ಖುಷಿ ತಂದಿದೆ. ಪಾಲುದಾರ ಎಲ್ಲ ಸಿಆರ್‌ಪಿ ಮತ್ತು ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸುವೆ.

-ಜಿ.ಎಂ. ಮುಂದಿನಮನಿ, ಬಿಇಓ
error: Content is protected !!