Home Blog Page 3250

ಪಡಿತರ ಅಕ್ಕಿ ಅಕ್ರಮ ಸಾಗಾಟ; ಮೂವರು ಬಂಧನ

ವಾಹನ ಸಮೇತ ವಶಕ್ಕೆ ಪಡೆದ ಪೊಲೀಸರು…..

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಸಾರ್ವಜನಿಕರಿಗೆ ವಿತರಿಸುವ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರನ್ನು ವಾಹನ ಸಮೇತ ಸೆರೆ ಹಿಡಿಯಲಾಗಿದೆ.

ಸೋಮವಾರ ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ತಾಲೂಕಿನ ತಂಗೋಡ ದಾಟಿ ಹೊಳೆಇಟಗಿ ಕಡೆಗೆ ಅಶೋಕ್ ಲೇಲ್ಯಾಂಡ್ ಕಂಪನಿಯ ದೋಸ್ತ್ ಪ್ಲಸ್ ಎಲ್.ಎಸ್ ಗೂಡ್ಸ್ ವಾಹನ ನಂಬರ್ ka26/b3123 ನೇದ್ದರ ಚಾಲಕ ಮುಂಡರಗಿ ತಾಲೂಕಿನ ಶಿಂಗಟಾಲೂರಿನ ನಾಗರಾಜ್ ತಂದೆ ಹನಮಂತಪ್ಪ ಸಣ್ಣಕಲ್ಲ, ಮುಂಡರಗಿ ಪಟ್ಟಣದ ಮಹಮ್ಮದ್ ಇರ್ಪಾನ್ ತಂದೆ ಭಾಷಾಸಾಬ ಲಕ್ಕುಂಡಿ ಹಾಗೂ ಮುಂಡರಗಿ ತಾಲೂಕಿನ ಹೆಸರೂರ ಗ್ರಾಮದ ಲಕ್ಷ್ಮಣ ತಂದೆ ಗರಡಪ್ಪ ಹರಿಜನ ಎಂಬ ಮೂವರು ಎಲ್ಲಂದಿಲೋ ಅಕ್ರಮವಾಗಿ ಅಕ್ಕಿ ಖರೀದಿಸಿ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದಾರೆ.

ಸುಮಾರು 83,300ರೂ.ಗಳ ಮೌಲ್ಯದ 24ಕ್ವಿಂಟಾಲ್ 50ಕೆಜಿ ತೂಕದ 49 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದರು.

ಈ ಕುರಿತು ಈ ಮೂವರು ಆರೋಪಿಗಳ ಮೇಲೆ ಕಲಂ:03 ಮತ್ತು 07. ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಕಲಂ:18 ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣಾ ಆದೇಶ 2016ರ ಪ್ರಕಾರ ಶಿರಹಟ್ಟಿ ಆಹಾರ ನಿರೀಕ್ಷಕರಾದ ಮಂಜುಳಾ ಈರಪ್ಪ ಆಕಳದ ದೂರು ನೀಡಿದ್ದು, c/no-0146/2023 ದಾಖಲಾಗಿದೆ.

ಗದಗ ಜಿಲ್ಲಾ ಪೊಲೀಸರ ವಿಶೇಷ ಕಾರ್ಯಾಚರಣೆ; 91 ದೋಷಪೂರಿತ ಸೈಲೆನ್ಸರ್ ನಾಶ, ಅಪ್ರಾಪ್ತರ ವಿರುದ್ಧ ಪ್ರಕರಣ

0

ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ; ಎಸ್ಪಿ ನೇಮಗೌಡ….

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ವಿವಿಧ ಭಾಗಗಳಲ್ಲಿ ಕರ್ಕಶವಾಗಿ, ಭಯಬೀಳುವಂತೆ ಶಬ್ಧ ಮಾಡುತ್ತ, ಸಾರ್ವಜನಿಕರಿಗೆ ಕಿರಿಕಿರಿ ಹುಟ್ಟಿಸುತ್ತಿದ್ದ ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಸಮ್ಮುಖದಲ್ಲಿ ಶನಿವಾರ ಪೊಲೀಸರು ನಾಶಪಡಿಸಿದರು.

ಪೊಲೀಸ್ ಇಲಾಖೆಯ ತಪಾಸಣೆಯ ಸಮಯದಲ್ಲಿ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಪತ್ತೆಯಾದ ದೋಷಪೂರಿತ ಸೈಲೆನ್ಸರ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಹೀಗೆ ವಶಪಡಿಸಿಕೊಂಡ ಎಲ್ಲ ಸೈಲೆನ್ಸರ್‌ಗಳನ್ನು ರೋಡ್ ರೋಲರ್ ಮೂಲಕ ಸಂಚಾರ ಪೊಲೀಸ್ ಠಾಣೆಯ ಪಕ್ಕದಲ್ಲಿ ನಾಶ ಮಾಡಲಾಯಿತು.
ಈ ಕಾರ್ಯಾಚರಣೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ, ಜಿಲ್ಲೆಯಾದ್ಯಂತ ಸತತ ಮೂರು ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ, ದ್ವಿಚಕ್ರವಾಹನಗಳ ಗ್ಯಾರೇಜ್, ಅಟೋಮೊಬೈಲ್ ಅಂಗಡಿಗಳಲ್ಲಿನ ದೋಷಪೂರಿತ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಅಪ್ರಾಪ್ತ ವಯಸ್ಸಿನ ವಾಹನ ಚಾಲಕರ ವಿರುದ್ಧವೂ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.

ಜಿಲ್ಲೆಯಾದ್ಯಂತ ಒಟ್ಟು 27 ಕಡೆಗಳಲ್ಲಿ ತಪಾಸಣೆ ನಡೆಸಿ, 85 ದೋಷಪೂರಿತ ಸೈಲೆನ್ಸರ್‌ಗಳನ್ನು ಪತ್ತೆ ಮಾಡಲಾಗಿತ್ತು. ಕಾರ್ಯಾಚರಣೆಯ ವೇಳೆ 6 ಅಂಗಡಿಗಳಲ್ಲಿ ಇದ್ದ ದೋಷಪೂರಿತ ಸೈಲೆನ್ಸರ್‌ಗಳೂ ಸೇರಿದಂತೆ ಒಟ್ಟು 91 ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆಯಲಾಯಿತು. ಇದಲ್ಲದೆ, ಅಪ್ರಾಪ್ತ ಚಾಲಕರ ವಿರುದ್ಧ 11 ಪ್ರಕರಣಗಳು ದಾಖಲಾಗಿವೆ ಎಂದರು.

ಈ ವಿಶೇಷ ಕಾರ್ಯಾಚರಣೆ ಯಶಸ್ವಿಯಾಗಲು ಕಾರಣರಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿ, ಬಹುಮಾನವನ್ನೂ ನೀಡಲಾಗುವುದು. ಪೊಲೀಸರ ಕಾರ್ಯಾಚರಣೆಗೆ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ಇನ್ನೂ ಹಲವು ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ತಿಳಿಸಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಾತ್ರವಲ್ಲದೆ, ಜಿಲ್ಲೆಯಾದ್ಯಂತ ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಕೆಲ ಪ್ರಯೋಗಗಳನ್ನೂ ಕೈಗೊಳ್ಳಲಾಗಿದೆ. ಈ ಬಗ್ಗೆ ಸಾರ್ವಜನಿಕರ ಜೊತೆ ಸಭೆ ನಡೆಸಲಾಗಿದ್ದು, ಎಲ್ಲರಿಗೂ ಅನುಕೂಲ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

-ಬಿ.ಎಸ್. ನೇಮಗೌಡ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಗದಗ

ವಿದ್ಯುತ್ ಅವಘಡ; ಜಾನುವಾರಗಳ ಸಜೀವ ದಹನ

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ

ವಿದ್ಯುತ್ ಅವಘಡದಿಂದ ಎರಡು ಹಸು ಹಾಗೂ ನಾಲ್ಕು ಕರುಗಳು ಸಜೀವ ದಹನವಾದ ಘಟನೆ ಪಟ್ಟಣದ ಅಯ್ಯನಕೆರೆ ಬಳಿ ಶುಕ್ರವಾರ ಜರುಗಿದೆ.

ಗೌಳಿ ನಾಗಪ್ಪ ಅವರಿಗೆ ಸೇರಿದ್ದ ದನದ ಕೊಟ್ಟಿಗೆಯಲ್ಲಿಯ ಜಾನುವಾರುಗಳಿಗೆ ಎಂದಿನಂತೆ ಅವರ ಮಗ ಗೌಳಿ ನಿಂಗಪ್ಪ ಗುರುವಾರ ರಾತ್ರಿ ಮೇವು, ನೀರು ಹಾಕಿ ಮನೆಗೆ ಹೋಗಿದ್ದಾರೆ. ಬೆಳಿಗ್ಗೆ ಬಂದು ನೋಡಿದಾಗ ಎರಡು ಹಸುಗಳು ಹಾಗೂ ನಾಲ್ಕು ಕರುಗಳು ಮೃತಪಟ್ಟಿವೆ.

ಐದಾರು ಲಕ್ಷದ ರಾಸುಗಳು ವಿದ್ಯುತ್‌ನಿಂದ ಉಂಟಾದ ಅವಘಡಕ್ಕೆ ಬಲಿಯಾಗಿವೆ. ತಹಸೀಲ್ದಾರ ಡಾ.ಶಿವಕುಮಾರ ಬಿರಾದಾರ, ಪಶುವೈದ್ಯಾಧಿಕಾರಿ ಡಾ.ಶಿವಕುಮಾರ, ಬೆಸ್ಕಾಂ ಅಭಿಯಂತರರು ಹಾಗೂ ಪಿಎಸ್‌ಐ ಶಾಂತಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಿಯಕರನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ ಪತ್ನಿ; ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಪೊಲೀಸರ ಖೆಡ್ಡಾಗೆ ಬಿದ್ದ ಆರೋಪಿಗಳು…..

ಪ್ರಕರಣ ಭೇದಿಸಿದ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಪ್ರಶಂಸೆ…..

ವಿಜಯಸಾಕ್ಷಿ ಸುದ್ದಿ, ಗುರುಮಠಕಲ್

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಪ್ರಿಯಕರನ ಜೊತೆಗೆ ಸೇರಿ ಚಟ್ಟ ಕಟ್ಟಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಲು ಹೋಗಿದ್ದ ಪ್ರಕರಣವನ್ನು ಗುರುಮಠಕಲ್ ಪೊಲೀಸರು ಭೇದಿಸಿದ್ದಾರೆ.

ಪ್ರಕರಣದ ವಿವರ: 16-06-2023 ರಂದು
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೊಂಕಲ್ ಗ್ರಾಮದ ಜಮೀನೊಂದರ ಮರದಲ್ಲಿ ವ್ಯಕ್ತಿಯೊಬ್ಬನ ಶವ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತನನ್ನು ಅದೇ ಗ್ರಾಮದ ಕಾಶಪ್ಪ ತಂದೆ ನಾಗಪ್ಪ ಮಲ್ಲಪ್ಪೋಳ ಎಂದು ಗುರುತಿಸಲಾಗಿತ್ತು.

ಮೃತನ ಸಹೋದರಿ ಕಾಶಮ್ಮ ಮೃತ ಕಾಶಪ್ಪನ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

08/2023 ಕಲಂ 174(ಸಿ) ಸಿ.ಆರ್. ಪಿ. ಸಿ ಅಡಿಯಲ್ಲಿ
ಪ್ರಕರಣ ದಾಖಲು ಮಾಡಿಕೊಂಡ ಗುರುಮಠಕಲ್ ಪೊಲೀಸರು, ಪ್ರಕರಣ ಭೇದಿಸಲು ತಂಡ ರಚಸಿ ತನಿಖೆ ಕೈಗೊಂಡ ಪೊಲೀಸರು, ಕೊಲೆಗೀಡಾದ ಕಾಶಪ್ಪನ ಪತ್ನಿ ಅನಿತಾ ಹಾಗೂ ಅವಳ ಪ್ರಿಯಕರ ನಾಗೇಶ್ ತಂದೆ ಮಲ್ಲಪ್ಪ ಹತ್ತಿಕುಣಿಯನ್ನು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ಅನಿತಾ ಹಾಗೂ ನಾಗೇಶ್ ಜೂನ್ 15 ರಂದು ರಾತ್ರಿ ಕಾಶಪ್ಪ ಮಲಗಿಕೊಂಡಾಗ ಆತನ ಕುತ್ತಿಗೆಗೆ ಹಗ್ಗ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಬೈಕಿನಲ್ಲಿ ಸಮೀಪದ ಜಮೀನೊಂದರಲ್ಲಿ ತೆಗೆದುಕೊಂಡು ಹೋಗಿ ಮರಕ್ಕೆ ಶವವನ್ನು ತೂಗು ಹಾಕಿ ಕಾಶಪ್ಪನೇ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಹೋಗಿದ್ದರು ಎನ್ನಲಾಗಿದೆ.

ಎಸ್ಪಿ ಹಾಗೂ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಗುರುಮಠಕಲ್ ಪೊಲೀಸ್ ಇನ್ಸ್‌ಪೆಕ್ಟರ್ ದೌಲತ್ ಎನ್. ಕೆ ಅವರ ನೇತೃತ್ವದಲ್ಲಿ ಪಿಎಸ್ಐ ಭೀಮರಾಯ ಹಾಗೂ ಸಿಬ್ಬಂದಿಗಳಾದ ನರಸಿಂಗರಾವ, ವಿಶ್ವನಾಥರೆಡ್ಡಿ, ದೇವೆಂದ್ರ, ನರೇಂದ್ರರೆಡ್ಡಿ, ರಹೀಮ್, ಮಹ್ಮದ ಶರೀಫ, ನರಸಿರೆಡ್ಡಿ ಸಾಹೇಬರೆಡ್ಡಿ, ಅಶೋಕ, ಹಾಗೂ ರಾಮಲಿಂಗಪ್ಪ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡ ಸ್ಥಳೀಯರಿಂದ ಹಾಗೂ ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಿ ಕೊಲೆ ಮಾಡಿದ್ದ ಕಾಶಪ್ಪನ ಪತ್ನಿ ಅನಿತಾ ಹಾಗೂ ಅವಳ ಪ್ರಿಯಕರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಲೆ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ತನಿಖಾ ತಂಡಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಪ್ರಾಪ್ತಳ ಮೇಲೆ ಅತ್ಯಾಚಾರ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತ ಬಾಲಕಿ ಮೇಲೆ ಹೊಡಿ-ಬಡಿ ಮಾಡಿ ಅತ್ಯಾಚಾರ ಮಾಡಿದ್ದ ಆರೋಪಿತನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಪ್ರಕರಣದ ಆರೋಪಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಡ್ಡದ ಮಲ್ಲಾಪೂರ ಗ್ರಾಮದ ಶಂಕರಗೌಡ ತಂದೆ ಶೇಖರಗೌಡ ಪಾಟೀಲ್ ಎಂಬಾತ ರೋಣ ಪೊಲೀಸ್ ಠಾಣಾ ವ್ಯಾಪ್ತಿಯ ಜಮೀನಿನಲ್ಲಿ 05-09-2019 ರಂದು ನೊಂದ ಬಾಲಕಿ ಕುಡಿಯಲು ನೀರು ತರಲು ಹೋಗುವಾಗ ಆರೋಪಿ ಶಂಕರಗೌಡ, ಬಾಲಕಿಯನ್ನು ಜಮೀನಿನ ಒಳಗಡೆ ಎಳೆದುಕೊಂಡು ಹೋಗಿ ಹೊಡಿ-ಬಡಿ ಮಾಡಿ ಅತ್ಯಾಚಾರ ಮಾಡಿದ್ದ.

ಈ ಕುರಿತು ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.129/2019 ಕಲಂ 323-376(2 (ಐ), 376(3)-504-506 IPC ಕಲಂ 4&6ಪೋಕ್ಸೋ ಕಾಯ್ದೆ 2012 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣದಲ್ಲಿ ಅಂದಿನ ಸಿಪಿಐ ಎಮ್. ಐ. ನಡುವಿನಮನಿ ಅವರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ದಿ. 22-10-2019 ರಂದು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ಸಾಕ್ಷಿ ವಿಚಾರಣೆ ನಡೆದು ಆರೋಪಿ ಮಾಡಿದ ಅಪರಾಧ ರುಜುವಾತಾಗಿರುವುದರಿಂದ ಸದರಿ ಆರೋಪಿ ಶಂಕರಗೌಡನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಮಾನ್ಯ ಅಪರ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಅವರು ಆದೇಶ ಹೊರಡಿಸಿದ್ದಾರೆ.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಅಮರೇಶ ಉಮಾಪತಿ ಹಿರೇಮಠ ಅವರು ವಾದ ಮಂಡಿಸಿದ್ದರು.

ಮನೆ ಬೀಗ ಮುರಿದು ನಗದು ಸೇರಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಲೂಟಿ

ನಗದು ಸೇರಿ 14ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ…..

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಮನೆ ಬಾಗಿಲಿಗೆ ಹಾಕಿದ್ದ ಬೀಗವನ್ನು ಮೀಟಿ ಒಳಹೊಕ್ಕ ಖದೀಮರು, ಮನೆಯಲ್ಲಿ ಇದ್ದ ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೆಟಗೇರಿಯ ಕೃಷ್ಣಾ ಲೇಔಟ್ ನಲ್ಲಿ ಇರುವ ವಿವೇಕಾನಂದ ತಂದೆ ಭವನಸಾ ಕಬಾಡಿ ಇವರ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದು ವಸ್ತುವಿನಿಂದ ಮೀಟಿ‌ ಒಳಹೊಕ್ಕು ಮನೆಯ ಕೆಳ ಅಂತಸ್ತಿನ ಬೆಡ್ ರೂಂ ಹಾಗೂ ಮೇಲಿನ ಅಂತಸ್ತಿನ ಬೆಡ್ ರೂಂಗಳಲ್ಲಿದ್ದ ಟ್ರೇಜರಿಗಳನ್ನು ಕೀಲಿಯಿಂದ ತಗೆದು ಒಳಗಿನ ಲಾಕರ್ ನಲ್ಲಿ ಇದ್ದ ಸುಮಾರು 13‌.02000 ಲಕ್ಷ ರೂ.ಗಳ ಮೌಲ್ಯದ ಬಂಗಾರದ ಆಭರಣಗಳು, 25 ಸಾವಿರ ರೂ.ಮೌಲ್ಯದ 250 ಗ್ರಾಮ ತೂಕದ ಬೆಳ್ಳಿಯ ಆಭರಣಗಳು, 20 ಸಾವಿರ ರೂ. ಮೌಲ್ಯದ ,06 ರಿಸ್ಟ್ ವಾಚಗಳು ಹಾಗೂ ನಗದು 60 ಸಾವಿರ ಸೇರಿದಂತೆ ಒಟ್ಟು 14 ಲಕ್ಷ, 07000/ ರೂ ಕಳ್ಳತನವಾಗಿದೆ.

ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ 0048/2023 ರಂತೆ ಕಲಂ 454,380 ipc ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಹಟ್ಟಿ ಪೊಲೀಸರ ಕಾರ್ಯಾಚರಣೆ; ಟ್ರ್ಯಾಕ್ಟರ್ ಕಳ್ಳನ ಬಂಧನ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಕಳೆದ 2022 ಡಿಸೆಂಬರ್ 10 ರಂದು ತಾಲೂಕಿನ ಹಂಗನಕಟ್ಟಿ ಗ್ರಾಮದ ಮಂಜಪ್ಪ ನೀಲಪ್ಪ ನಾಯಕವಾಡಿ ಎಂಬುವರು ಜಲ್ಲಿಗೇರಿ ಹದ್ದಿಯ ತೋಟದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರನ್ನು 15-11-2022 ರಂದು ರಾತ್ರಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಗದಗ ಡಿಎಸ್‌ಪಿ ಎಸ್ ಬಿ ಸಂಕದ, ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಟ್ರ್ಯಾಕ್ಟರ್ ಕಳ್ಳನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಹಂಗನಕಟ್ಟಿ ಗ್ರಾಮದ ಮಹಾಲಿಂಗೇಶ್ ಅಲಿಯಾಸ್ ಮಹಾಲಿಂಗಪ್ಪ ತಂದೆ ರಾಮಪ್ಪ ಕಿತ್ತಲಿ ಎಂದು ಗುರುತಿಸಲಾಗಿದೆ. ಬಂಧಿತನಿಂದ ಟ್ರ್ಯಾಕ್ಟರ್‌ನ್ನು ವಶಪಡಿಸಿಕೊಂಡಿದ್ದಾರೆ.

ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ವಿಜಯಕುಮಾರ ತಳವಾರ ಮತ್ತು ಸಿಬ್ಬಂದಿಗಳಾದ ಮಾಬು ವಡ್ಡಟ್ಟಿ, ಹನುಮಂತ ದೊಡ್ಡಮನಿ, ಆರ್.ಎಚ್.ಮುಲ್ಲಾ, ಸೋಮು ರಾಮಗಿರಿ, ಟಿ ಎನ್ ಕಾರಭಾರಿ, ರಾಜೇಶ ವಿರಾಪೂರ, ಫಕ್ಕೀರೇಶ ಲಮಾಣಿ, ಗಂಗಾದರ ಕರಿಲಿಂಗಣ್ಣವರ ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

ಬಿಯರ್ ಬಾಟಲ್ ನಿಂದ ಯುವಕನ ಮೇಲೆ ಹಲ್ಲೆ; ತಲೆಯಿಂದ ಸುರಿದ ರಕ್ತ, ರಕ್ತದಲ್ಲೇ ಮುಖ ತೊಳೆದಕೊಂಡ ಯುವಕ…!

ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ……

ವಿಜಯಸಾಕ್ಷಿ ಸುದ್ದಿ, ಗದಗ

ಕುಡಿದ ಅಮಲಿನಲ್ಲಿ ಯುವಕನೊಬ್ಬನ ತಲೆಗೆ ಬಿಯರ್‌ ಬಾಟಲ್ ನಿಂದ ತಲೆಗೆ ಹಲ್ಲೆ ಮಾಡಿದ್ದರಿಂದ ತೀವ್ರ ಗಾಯಗೊಂಡ ಘಟನೆ ಮೊನ್ನೆ ನಡೆದಿದೆ.

ಇಲ್ಲಿನ ಹಳೆ ಡಿಸಿ ಕಚೇರಿ ಬಳಿ ಇರುವ ಬಾರವೊಂದರಲ್ಲಿ ಈ ಘಟನೆ ನಡೆದಿದ್ದು, ಆರು ಸೆಕೆಂಡ್ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ ಪಾರ್ವತಿ ಪೆಟ್ರೋಲಿಯಂ ಮಾಲೀಕರ ಮೇಲೆ ಚೀಟಿಂಗ್ ಕೇಸ್ ; ತಪ್ಪಾಗಿ ಜಮಾ ಆದ ಹಣ ಮರಳಿಸದೇ ವಂಚನೆ ಆರೋಪ….

ರವಿವಾರ ಸಮುದ್ರ ಬಾರನಲ್ಲಿ ಕುಳಿತಿದ್ದ ಯುವಕರ ಮಧ್ಯೆ ಜೋರಾದ ಗಲಾಟೆ ನಡೆದಿದೆ. ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ ಸದ್ದಿಗೆ ಅಕ್ಕಪಕ್ಕದಲ್ಲಿ ಕುಳಿತಿದ್ದ ಗ್ರಾಹಕರು ಕಂಗಾಲಾಗಿದ್ದಾರೆ.

ನಂತರ ಯುವಕನೊಬ್ಬ ತಲೆ ಹಿಡಿದುಕೊಂಡು ಹೊರ ಬಂದಿದ್ದಾನೆ. ಆಗ ಅವನ ತಲೆಯಿಂದ ರಕ್ತ ಸುರಿದಿದೆ. ಕೈಯಿಂದ ತಲೆ ಒರೆಸಿಕೊಂಡು ಕೈಗೆ ಮೆತ್ತಿದ ರಕ್ತದಿಂದಲೇ ಮುಖಕ್ಕೂ ಸವರಿಕೊಂಡಿದ್ದಾನೆ. ಈ ದೃಶ್ಯದ ಆರು ಸೆಕೆಂಡ್ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಅದೀಗ ವೈರಲ್ ಆಗಿದೆ.

ಈ ಬಗ್ಗೆ ಸಮುದ್ರ ಬಾರ ಮ್ಯಾನೇಜರ್ ಸಿದ್ದಪ್ಪ ತಂದೆ ಯಲ್ಲಪ್ಪ ಹೊಂಬಳ ಎಂಬುವರು ಶಹರ ಪೊಲೀಸರಿಗೆ ದೂರು ನೀಡಿದ್ದು, ಶಹರ ಪೊಲೀಸ್ ಠಾಣೆಯಲ್ಲಿ IPC 1860(U/s-160)0094/2023ರಂತೆ ಪ್ರಕರಣ ದಾಖಲಾಗಿದೆ.

ಅಕ್ರಮ ಅನ್ನಭಾಗ್ಯ ಅಕ್ಕಿ ಸಂಗ್ರಹ; ಮಾಲೀಕ ತಿಮ್ಮಯ್ಯ ಕೊಂಗಾಟಿ ಮೇಲೆ ಕೇಸ್

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಸಮೀಪದ ನರಸಾಪೂರ ಕೆ.ಐ.ಡಿ.ಬಿ ಪ್ಲಾಟ್ ನ ಗುದಾಮವೊಂದರಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿದ ‌ಆರೋಪದಲ್ಲಿ ಬೆಟಗೇರಿಯ ತಿಮ್ಮಯ್ಯ ತಂದೆ ವೀರಣ್ಣ ಕೊಂಗಾಟಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಿಗೆ ವಿತರಣೆ ಮಾಡಿದ ಪಡಿತರ ಅಕ್ಕಿಯನ್ನು ಮನೆ ಮನೆಗೆ ತೆರಳಿ ಖರೀದಿಸಿ ಬೇರೆ ಬೇರೆ ಚೀಲಗಳಲ್ಲಿ ಸಂಗ್ರಹಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಿ ಅಧಿಕ ಲಾಭ ಗಳಿಸುವ ಉದ್ದೇಶ ಆರೋಪಿ ತಿಮ್ಮಯ್ಯ ಹೊಂದಿದ್ದನು.

ಇದನ್ನೂ ಓದಿ ಪಾರ್ವತಿ ಪೆಟ್ರೋಲಿಯಂ ಮಾಲೀಕರ ಮೇಲೆ ಚೀಟಿಂಗ್ ಕೇಸ್ ; ತಪ್ಪಾಗಿ ಜಮಾ ಆದ ಹಣ ಮರಳಿಸದೇ ವಂಚನೆ ಆರೋಪ….

ಸುಮಾರು 2 ಲಕ್ಷ 64 ಸಾವಿರದ 316 ರೂಪಾಯಿಗಳ ಮೌಲ್ಯದ 77ಕ್ವಿಂಟಾಲ್ 74 ಕೆ.ಜಿ ಅಕ್ಕಿ ಜಪ್ತಿ ಮಾಡಲಾಗಿದೆ.

ಈ ಕುರಿತು ಆಹಾರ ಇಲಾಖೆಯ ಅಧಿಕಾರಿ ಸುವರ್ಣ ಮುಕ್ಕಣ್ಣ ಜಮ್ಮನಕಟ್ಟಿ ಬೆಟಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, (ಅಗತ್ಯ ಸರಕುಗಳ ಕಾಯ್ದೆ) ESSENTIAL COMMODITIES ACT, 1955(U/s-7,3): PDS CONTROLLING ORDER , 1992 (U/s-18(2)) ಅಡಿಯಲ್ಲಿ
0049/2023ರಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾರ್ವತಿ ಪೆಟ್ರೋಲಿಯಂ ಮಾಲೀಕರ ಮೇಲೆ ಚೀಟಿಂಗ್ ಕೇಸ್ ; ತಪ್ಪಾಗಿ ಜಮಾ ಆದ ಹಣ ಮರಳಿಸದೇ ವಂಚನೆ ಆರೋಪ….

ಸಾರಿಗೆ ಸಂಸ್ಥೆಯ ಅಧಿಕಾರಿಯಿಂದ ಕೇಸ್…

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ರೋಣದ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು, ಇಂಧನ ಖರೀದಿಸಿದ ಇನ್ ವೈಸ್ ನಂ.14486 ದಿ. 02/05/2022 ಮೊತ್ತ 4.68.402.48ರೂ. ಹಾಗೂ ಇನ್ ವೈಸ್ ನಂ. 14507 ದಿ.04/05/2022 ಮೊತ್ತ 3.86.427.28ರೂ. ಗಳಿಗೆ ಸಂಬಂಧಿಸಿದಂತೆ ಬಿಲ್ ಪಾವತಿಸುವಂತೆ ದಿ.09/05/2022 ರಂದು ಗದಗ ಸಹಾಯಕ ಅಕೌಂಟೆಂಟ್ ಕಚೇರಿಗೆ ಕಳುಹಿಸಿದ್ದರು.

ಆ ಪ್ರಕಾರ ಸದರಿ ಬಿಲ್ ಗಳ ಮೊತ್ತವನ್ನು ಡಿಸ್ಕೌಂಟ್ ಮತ್ತು ಟಿ.ಡಿ.ಎಸ್ ಕಡಿತ ಮಾಡಿ ಅವುಗಳ ಒಟ್ಟು ಮೊತ್ತ 8.50.799=00 ರೂ. ಮೊತ್ತವನ್ನು ಚೆಕ್ ನಂ.[ಧನಾದೇಶ ಸಂಖ್ಯೆ] 22223 ಚೆಕ್ ಮೂಲಕ ನಜರ್ ಚೂಕಿನಿಂದ ಪಾರ್ವತಿ ಪೆಟ್ರೋಲಿಯಂ ಗದಗ ಇವರ ಖಾತೆ ಸಂಖ್ಯೆ : 30314766975 , ಐ.ಎಫ್ ಎಸ್.ಸಿ ಕೋಡ್ ; ಎಸ್.ಬಿ. ಐ.ಎನ್ 0000838ನೇದ್ದಕ್ಕೆ ಆರ್ ಟಿ ಜಿ ಎಸ್ ಮೂಲಕ ಜಮಾ ಮಾಡಲಾಗಿದೆ.

ಆದರೆ ತಪ್ಪಾಗಿ ಜಮಾ ಮಾಡಿದ ಹಣವನ್ನು ಮರು ಸಂದಾಯ ಮಾಡುವಂತೆ ಗದಗ ಪಾರ್ವತಿ ಪೆಟ್ರೋಲಿಯಂ ಮಾಲೀಕರಾದ ಈಶ್ವರಸಾ ಮೆಹರವಾಡೆ ಇವರನ್ನು ಹಲವು ಬಾರಿ ಕೇಳಿಕೊಂಡರು ಕೂಡ ಸಾರಿಗೆ ಇಲಾಖೆಗೆ ಮರು ಸಂದಾಯ ಮಾಡದೇ ವಂಚಿಸಿದ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ
ಸಾರಿಗೆ ಇಲಾಖೆಯ ಅಧಿಕಾರಿ ನೂರ ಅಹ್ಮದ್ ದಾದಾಪೀರ್ ಗೋಲಾಂದಜ್ ಎಂಬುವರು ದೂರು ನೀಡಿದ್ದು, 0092/2023 ಐಪಿಸಿ 1860 (U/s-420) ಪ್ರಕರಣ ದಾಖಲಾಗಿದೆ.

error: Content is protected !!