Home Blog Page 3296

ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ದುಷ್ಟರು!

ವಿಜಯಸಾಕ್ಷಿ ಸುದ್ದಿ, ರಾಮನಗರ

ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.  

ಈ ಘಟನೆ ಯಾವ ಗ್ರಾಮದಲ್ಲಿ ನಡೆದಿದೆ ಎಂಬ ಕುರಿತು ಇನ್ನೂ ತಿಳಿದು ಬಂದಿಲ್ಲ. ಆದರೆ, ಬಾಳೆ ತೋಟದಲ್ಲಿ 10 ವರ್ಷದೊಳಗಿನ 7 ಮಕ್ಕಳು ಬಾಡೂಟದ ಜೊತೆಗೆ ಮದ್ಯ ಕುಡಿಯುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಸಾಮಾಜಿಕ‌ ಜಾಲತಾಣ ಹುಡುಕಿ ನೋಡಿದಾಗ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮದ್ಯ ಕುಡಿದ ನಂತರ ಮಕ್ಕಳು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ.

ಬಾಲಕನೊಬ್ಬ ತನಗೆ ಮತ್ತಷ್ಟು ಮದ್ಯ ಬೇಕು‌ ಎಂದು ಕೂಗಾಡಿದ್ದಾನೆ.  ಈ ರೀತಿ ವಿಕೃತಿ ಮೆರೆದಿರುವ ಪ್ರಕರಣ ರಾಮನಗರ ಜಿಲ್ಲೆಯಲ್ಲಿ ನಡೆದಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಜಿಲ್ಲೆಯಲ್ಲಿ ಆತಂಕ ಹಾಗೂ ತಲ್ಲಣ ಮನೆ ಮಾಡಿದೆ.

ಮಕ್ಕಳಿಗೆ ಮದ್ಯ ಕುಡಿಸಿದ ಆರೋಪಿಗಳನ್ನು ಕೂಡಲೇ ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸಬೇಕು ಎಂಬ ಆಗ್ರಹ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಅಲ್ಲದೇ, ಈ ವಿಡಿಯೋಗಳನ್ನು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

100 ರ ಗಡಿ ದಾಟಿದ ಪೆಟ್ರೋಲ್, ಡೀಸೆಲ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶದ ಜನರು ಕೊರೊನಾ ಹಾಗೂ ಅದರ ನಿಯಂತ್ರಣಕ್ಕೆ ಜಾರಿಯಾಗಿರುವ ಲಾಕ್ ಡೌನ್ ನಿಂದಾಗಿ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ದಿನನಿತ್ಯದ ಬಳಕೆ ವಸ್ತುಗಳ ಬೆಲೆ ಏರಿಕೆಯ ಬಿಸಿ, ಮತ್ತೊಂದೆಡೆ ಇಂಧನ ಬೆಲೆ ಏರಿಕೆಯು ಜನಸಾಮಾನ್ಯರಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.

ಇಷ್ಟು ದಿನ ಬೇರೆ ಬೇರೆ ರಾಜ್ಯಗಳಲ್ಲಿ ಇಂಧನ ತೈಲ ಶತಕ ಬಾರಿಸುತ್ತಿರುವುದು ವರದಿಯನ್ನು ಓದುತ್ತಿದ್ದೇವು. ಆದರೆ ಇದೀಗ ರಾಜ್ಯದಲ್ಲೂ ಪೆಟ್ರೋಲ್ ದರ ಶತಕ ಬಾರಿಸಿ, ಮುನ್ನುಗ್ಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕೊಂಚ ಹೆಚ್ಚಾಗಿರುವುದು ಸತ್ಯವೇ ಆಗಿದ್ದರು, ಅದರ ಜೊತೆಗೆ ತೆರಿಗೆಗಳು ಹಾಗೂ ಇತರ ವೆಚ್ಚ ಗಳು ಸೇರಿ ಪ್ರತಿ ಲೀಟರ್ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ. ಮೇ 4ರಿಂದ ಇಲ್ಲಿಯವರೆಗೆ ಒಟ್ಟು 20 ಬಾರಿ ದರ ಏರಿಕೆ ಕಂಡುಬಂದಿದೆ.

ದೇಶದ ಆರು ರಾಜ್ಯಗಳಲ್ಲಿ ರವಿವಾರದಿಂದ ಪ್ರತೀ ಲೀಟರ್‌ ಪೆಟ್ರೋಲ್‌ ದರ 100 ರೂ. ಗಡಿ ದಾಟಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಡಾಖ್‌ಗಳಲ್ಲಿ ಈ ಏರಿಕೆ ದಾಖಲಾಗಿದೆ. ರಾಜ್ಯದಲ್ಲಿ ಬಳ್ಳಾರಿಯಲ್ಲಿ ರವಿವಾರ ಪ್ರತೀ ಲೀಟರ್‌ ಪೆಟ್ರೋಲ್‌ ದರ 100.08 ರೂ., ಶಿರಸಿಯಲ್ಲಿ 100.29 ರೂ. ಇತ್ತು. ಇನ್ನು ಕೆಲವು ಜಿಲ್ಲೆಗಳಲ್ಲಿ ಶತಕದ ಸಮೀಪ ಇದೆ.

ಮತ್ತೆ ವಿವಾದ ಎಳೆದುಕೊಂಡ ನಟಿ ಕಂಗನಾ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ನಟಿ ಯಾಮಿ ಗೌತಮ್ ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾಮಿ, ಬಾಲಿವುಡ್ನ ಉರಿ ಚಿತ್ರದ ನಿರ್ದೇಶಕ ಆದಿತ್ಯ ಧಾರ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ವಿಚಾರವನ್ನು ಜಾಲತಾಣದಲ್ಲಿ ಅಧಿಕೃತವಾಗಿ ಹೇಳಿಕೊಂಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಕಿತ್ತಾಟವೊಂದು ನಡೆದಿದೆ. ಈ ಕಿರಿಕ್ ನಲ್ಲಿ ಕೂಡ ನಟಿ ಕಂಗನಾ ರಣಾವತ್ ಹೆಸರು ಕೇಳಿ ಬರುತ್ತಿದೆ . ಮದುವೆ ಫೋಟೋ ಹಂಚಿಕೊಂಡಿದ್ದ ಯಾಮಿ ಗೌತಮ್, ಆಶೀರ್ವಾದ ಕೋರಿದ್ದರು. ಕುಟುಂಬಸ್ಥರ ಆಶೀರ್ವಾದ ಪಡೆದು ಮದುವೆಯಾಗಿದ್ದೇವೆ. ಪ್ರೀತಿ ಹಾಗೂ ಸ್ನೇಹದ ನಮ್ಮ ಈ ಹೊಸ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದಿದ್ದರು.

ಈ ಫೋಟೋ ಕಂಡು ಸಾಕಷ್ಟು ಜನ ತಾರೆಯರು ಶುಭಾಶಯ ತಿಳಿಸಿದ್ದರು. ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ, ‘ರಾಧೆ ಮಾ ಅವರಂತೆ ಶುದ್ಧ ಮತ್ತು ಧರ್ಮನಿಷ್ಠರಾಗಿ ಕಾಣುತ್ತಿದ್ದೀರಿ ಎಂದು ಕಮೆಂಟ್ ಹಾಕಿದ್ದರು. ಈ ಕಮೆಂಟ್ ಗೆ ಸಿಟ್ಟಾಗಿರುವ ನಟಿ ಕಂಗನಾ, ‘ಈ ಜಿರಲೆ ಎಲ್ಲಿಂದ ಬಂತು? ಯಾರಾದರೂ ನನ್ನ ಚಪ್ಪಲಿ ತನ್ನಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಸದ್ಯ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಯಾಮಿ, ಹಿಂದಿಯ ‘ಭೂತ್ ಪೊಲೀಸ್’ ಸಿನಿಮಾದಲ್ಲಿ ಸದ್ಯ ನಟಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಅವರು ಕಾಲಿಟ್ಟಿದ್ದರು.

ವಿಶ್ವ ಚಾಂಪಿಯನ್ ಶಿಪ್ ಟ್ರೋಫಿ ಮುತ್ತಿಕ್ಕುವ ತವಕದಲ್ಲಿ ವಿರಾಟ್!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ನಡೆಯುವ ವಿಶ್ವ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಆಡಲು ಸಜ್ಜಾಗಿದೆ. ಭಾರತವು ಈ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಎದುರಿಸಲಿದೆ. ಹೀಗಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು, ಇತ್ತೀಚಿಗಷ್ಟೆ ಸೌತಾಂಪ್ಟನ್ ಕ್ರೀಡಾಂಗಣದ ಚಿತ್ರ ಹಂಚಿಕೊಳ್ಳುವುದರ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಉತ್ಸುಕತೆ ಬಗ್ಗೆ ಹೇಳಿದ್ದರು. ಈ ಪಂದ್ಯ ಗೆಲ್ಲುವುದರ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‍ ಆಗಿ ಹೊರಹೊಮ್ಮಿ ಮೊದಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಲು ವಿರಾಟ್ ತುದಿಗಾಲ ಮೇಲೆ ನಿಂತಿದ್ದಾರೆ.

ಸೆನಾ ದೇಶಗಳಲ್ಲಿ ಅಂದರೆ, ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧ ಏಕದಿನ ಮತ್ತು ಟೆಸ್ಟ್ ಪಂದ್ಯಗಳೆರಡರಲ್ಲಿಯೂ ಹತ್ತಕ್ಕಿಂತ ಹೆಚ್ಚು ಶತಕ ಸಿಡಿಸಿದ ಆಟಗಾರರಾಗಿದ್ದಾರೆ., ಈ ದೇಶಗಳಲ್ಲಿ ವಿರಾಟ್ ಕೊಹ್ಲಿ 11 ಟೆಸ್ಟ್ ಶತಕಗಳು ಹಾಗೂ 10 ಏಕದಿನ ಶತಕಗಳನ್ನು ಗಳಿಸಿದ್ದಾರೆ. ಸೆನಾ ದೇಶಗಳಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಎರಡೂ ಮಾದರಿಗಳಲ್ಲೂ ಹತ್ತಕ್ಕಿಂತ ಹೆಚ್ಚು ಶತಕ ಬಾರಿಸಿರುವ ಏಕೈಕ ಏಷ್ಯಾ ಬ್ಯಾಟ್ಸಮನ್ ಆಗಿ ವಿರಾಟ್ ಹೊರ ಹೊಮ್ಮಿದ್ದು, ಈ ಸಾಧನೆ ಕೂಡ ಇವರ ಹೆಸರಿನಲ್ಲಿದೆ. ಹೀಗಾಗಿ ವಿರಾಟ್ ಪರ್ವದ ಮುಂದೆ ನ್ಯೂಜಿಲೆಂಡ್ ನೆಲ ಕಚ್ಚುವುದು ಶತ ಸಿದ್ಧ ಎಂದು ಆಟಗಾರರು ಮಾತನಾಡಿಕೊಳ್ಳುತ್ತಿದ್ದಾರೆ.

ನೂರು ಕೋಟಿ ಅಭಿಮಾನಿಗಳು ವಿರಾಟ್ ಪರ್ವ ಕಣ್ತುಂಬಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ. ಟೀಂ ಇಂಡಿಯಾಗೆ ಹಾರೈಸುತ್ತಿದ್ದಾರೆ.

ಭಾರತೀಯ ತಂಡದ ಈ ಆಟಗಾರನನ್ನು ಹಾಡಿ ಹೊಗಳಿದ ಇಂಗ್ಲೆಂಡ್ ನ ದಂತಕಥೆ!

ವಿಜಯಸಾಕ್ಷಿ ಸುದ್ದಿ, ಸೌತಾಂಪ್ಟನ್

ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಪ್ರತಿಭೆ ಉಳ್ಳವರು ಇದ್ದಾರೆ. ಆ ತಂಡದಲ್ಲಿ ಸ್ಫೋಟಕ ಬ್ಯಾಟ್ಸಮನ್ ಗಳು, ಉತ್ತಮ ಬೌಲರ್‌ ಗಳು ಸೇರಿದಂತೆ ವಿಶ್ವವೇ ತಿರುಗಿ ನೋಡುವಂತಹ ಆಲ್‌ ರೌಂಡರ್ ಇದ್ದಾರೆ. ರವೀಂದ್ರ ಜಡೇಜಾ ಇದಕ್ಕೆ ದೊಡ್ಡ ಉದಾಹರಣೆ. ಅವರನ್ನು ಇಂಗ್ಲೆಂಡ್ ಆಟಗಾರರು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕೇವಿನ್ ಪೀಟರ್ಸನ್ ಇಂಗ್ಲೆಂಡ್ ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ. ಅಲ್ಲದೇ, ಜಡ್ಡುನನ್ನು ಬಾಯಿ ತಂಬಾ ಕೊಂಡಾಡಿದ್ದಾರೆ.

ಐಪಿಎಲ್, ಅಂತಾರಾಷ್ಟ್ರೀಯ ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಸೇರಿದಂತೆ ಎಲ್ಲ ಮಾದರಿಯಲ್ಲಿಯೂ ರವೀಂದ್ರ ಜಡೇಜಾ ಮಿಂಚಿದ್ದಾರೆ. ಅವರು ಎಲ್ಲ ಬಗೆಯ ಆಟದಲ್ಲಿ ಗೆಲುವು ಸಾಧಿಸಿದ್ದಾರೆಯೇ ಹೊರತು, ವಿಫಲರಾಗಿಲ್ಲ. ಆಡಿರುವ ಬಹುತೇಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿ ರವೀಂದ್ರ ಜಡೇಜಾ ಉಳಿದಿದ್ದಾರೆ ಎಂದು ಪೀಟರ್ಸನ್ ಹೊಗಳಿದ್ದಾರೆ.

ಜೀವನದಲ್ಲಿ ಕ್ರಿಕೆಟರ್ ಆಗಬೇಕು ಎಂಬ ಗುರಿ ಹೊಂದಿರುವ ಆಟಗಾರರು, ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಕಾಲಿಡುವ ಕ್ರಿಕೆಟರ್ಸ್, ಕೌಂಟಿ ಕ್ರಿಕೆಟಿಗರು ಸೇರಿದಂತೆ ಯಾರೇ ಆದರೂ ರವೀಂದ್ರ ಜಡೇಜಾ ಅವರನ್ನು ಅನುಸರಿಸಬೇಕು. ಜಡೇಜಾ ಅವರ ಆಟದ ರೀತಿ ಗಮನಿಸಿ ಆ ಶೈಲಿ ಪಾಲಿಸಬೇಕು. ಅವರೊಬ್ಬ ಯಂಗ್ ಕ್ರಿಕೆಟರ್ ಗೆ ನಿಜವಾದ ಸೂಪರ್ ಸ್ಟಾರ್ ಎಂದು ಹೊಗಳಿದ್ದಾರೆ.

ರವೀಂದ್ರ ಜಡೇಜಾ ಅವರ ರೀತಿಯ ಎಡಗೈ ಆಲ್ ರೌಂಡರ್ ಇಷ್ಟು ವರ್ಷದ ಇತಿಹಾಸದಲ್ಲಿ ಇಂಗ್ಲೆಂಡ್ ತಂಡಕ್ಕೆ ಸಿಕ್ಕಿಯೇ ಇಲ್ಲ. ಆ ಕೊರಗು ಕೂಡ ನನ್ನೊಂದಿಗೆ ನನ್ನ ತಂಡಕ್ಕೂ ಇದೆ ಎಂದು ಬಣ್ಣಿಸಿದ್ದಾರೆ.
ಪೀಟರ್ಸನ್ ಅವರ ಮಾತನ್ನು ಕೂಡ ಅಲ್ಲಗಳೆಯುವಂತಿಲ್ಲ. ಜಡ್ಡುನ ಆಟವೇ ಅಂಥದ್ದು, ಅವರೊಬ್ಬ ಭಾರತ ಕಂಡ ಉತ್ತಮ ಆಟಗಾರ. ಜಡೇಜಾ ಫಿಟ್ ಆಗಿದ್ದರೆ, ಭಾರತೀಯ ಕ್ರಿಕೆಟ್ ತಂಡದ ಆಟದ ಮುಂದೆ ಬೇರೆ ಆಟಗಾರರ ಆಯ್ಕೆಯೇ ಇರುವುದಿಲ್ಲ. ಜಡೇಜಾ ಗಾಯಗೊಂಡರೆ ಮಾತ್ರ ಬೇರೆ ಆಲ್ ರೌಂಡರ್ ಗಾಗಿ ಆಯ್ಕೆ ತಂಡ ಹುಡುಕಾಟ ನಡೆಸುತ್ತದೆಯೇ ಹೊರತು, ಜಡೇಜಾ ಅವರನ್ನು ಮಾತ್ರ ಮಾತೇ ಇಲ್ಲ.

ಅಭಿಮಾನಿಗಳು ಕೂಡ ಜಡೇಜಾ ಗ್ರೌಂಡ್ ನಲ್ಲಿದ್ದರೆ, ಭಾರತ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯೊಂದಿಗೆ ಕುಳಿತುಕೊಂಡಿರುತ್ತದೆ. ನಮ್ಮ ಜಡ್ಡು ಅಂದ್ರೆ ಸುಮ್ನೆನಾ?

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೇಗಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಇಳಿಕೆ ಕಾಣುತ್ತಿದೆ. ಇಂದು ರಾಜ್ಯದಲ್ಲಿ 12,209 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 320 ಜನ ಬಲಿಯಾಗಿದ್ದಾರೆ. ಸೋಂಕು ಹರಡುವಿಕೆ ಪ್ರಮಾಣ ಶೇ. 7.71ಕ್ಕೆ ಇಳಿಕೆಯಾಗಿದೆ.

ಇಂದು 320 ಜನ ಬಲಿಯಾಗಿರುವುದರಿಂದಾಗಿ 31,580 ಜನ ಒಟ್ಟಾರೆಯಾಗಿ ಸಾವನ್ನಪ್ಪಿದಂತಾಗಿದೆ.

ಬೆಂಗಳೂರಿನಲ್ಲಿ ಇಂದು ಕೂಡ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಇಂದು ಬೆಂಗಳೂರಿನಲ್ಲಿ 2,944 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಇಂದು 187 ಜನ ಸೋಂಕಿಗೆ ಬಲಿಯಾಗಿದ್ದಾರೆ.

ಇನ್ನುಳಿದಂತೆ ಇಂದು ಬಾಗಲಕೋಟೆ 166, ಬಳ್ಳಾರಿ 285, ಬೆಳಗಾವಿ 418, ಬೆಂಗಳೂರು ಗ್ರಾಮಾಂತರ 277, ಬೆಂಗಳೂರು ನಗರ 2,944, ಬೀದರ್ 7, ಚಾಮರಾಜನಗರ 247, ಚಿಕ್ಕಬಳ್ಳಾಪುರ 348, ಚಿಕ್ಕಮಗಳೂರು 416, ಚಿತ್ರದುರ್ಗ 266, ದಕ್ಷಿಣ ಕನ್ನಡ 609, ದಾವಣಗೆರೆ 143, ಧಾರವಾಡ 262,

ಗದಗ 133, ಹಾಸನ 655, ಹಾವೇರಿ 138, ಕಲಬುರಗಿ 60, ಕೊಡಗು 162, ಕೋಲಾರ 257, ಕೊಪ್ಪಳ 212, ಮಂಡ್ಯ 571, ಮೈಸೂರು 1,237, ರಾಯಚೂರು 104, ರಾಮನಗರ 60, ಶಿವಮೊಗ್ಗ 456, ತುಮಕೂರು 698, ಉಡುಪಿ 494, ಉತ್ತರ ಕನ್ನಡ 360, ವಿಜಯಪುರ 190 ಮತ್ತು ಯಾದಗಿರಿಯಲ್ಲಿ 34 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕಲ್ಪತರು ಸೇವಾ ಸಂಘದಿಂದ ಪರಿಸರ ದಿನಾಚರಣೆ

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ 35ನೇ ವಾರ್ಡ್ ನ ಕುರ್ತಕೋಟಿ ಬಸಪ್ಪನಗರದಲ್ಲಿ ಕಲ್ಪತರು ಸೇವಾ ಸಂಘದಿಂದ ಪರಿಸರ ದಿನಾಚರಣೆ ಆಚರಿಸಲಾಯಿತು. ಪಾರ್ವತಿ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು.

ನಂತರ ಕೊರೊನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ, ಪೌರಕಾರ್ಮಿಕರು, ನಿರ್ಗತಿಕರಿಗೆ, ಬೀದಿ ದನಕರುಗಳಿಗೆ, ಆಹಾರ ವ್ಯವಸ್ಥೆ ಮಾಡಲಾಯಿತು. ಹಣ್ಣು ಬಿಸ್ಕೆಟ್ ನೀರಿನ ಬಾಟಲ್ ಗಳನ್ನು ವ್ಯವಸ್ಥೆ ಮಾಡಿದ ದಾನಿಗಳಾದ ಆಶೀಸ್ ಖಂಡಪ್ಪಗೌಡರ, ಸಿದ್ದು ಕಲಾಬಾಗ್ಲಿಮಠ, ಶಂಕರಗೌಡ್ರ ಪಾಟೀಲ್ ಇವರಿಗೆ ಕಲ್ಪತರು ಸೇವಾ ಸಂಘದ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಸಾರ್ವಜನಿಕರು ಮೆಚ್ಚುವಂತೆ ಸರಳ ಮದುವೆಯಾದ ಜೋಡಿ!

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ಕೊರೊನಾ ಹಾವಳಿ ವಿಪರೀತವಾಗಿದೆ. ಇನ್ನು ಹತೋಟಿಗೆ ಬಂದಿಲ್ಲ. ಹೀಗಾಗಿ ಲಾಕ್ ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ದಂಪತಿಗಳು ಸರಳ ಮದುವೆಗೆ ಸಾಕ್ಷಿಯಾಗಿದ್ದಾರೆ.

ನಗರದ ನೌಕರರ ಭವನ ಸಮೀಪದ ನಿವಾಸದಲ್ಲಿ ಜೋಡಿಯೊಂದು ಸರಳ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗಾಂಜಿ ಕುಟುಂಬಸ್ಥರು ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಳ ಮದುವೆ ಮಾಡಿಕೊಂಡಿದ್ದಾರೆ.
ಮಂಜುನಾಥ ಹಾಗೂ ಸವಿತಾ ಎಂಬುವವರು ಈ ರೀತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೇ, ಕೊರೊನಾ ಜಾಗೃತಿ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ವೇದಿಕೆ ಮೇಲೆ ಮಾಸ್ಕ್ ಹಾಕಿಕೊಳ್ಳುವ ಮೂಲಕ ಆರತಕ್ಷತೆಗೆ ಸಾಕ್ಷಿಯಾಗಿದ್ದಾರೆ.

ವಧು – ವರರು ಪರಸ್ಪರ ಮಾಸ್ಕ್ ಹಾಕಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸರಳ ಮದುವೆಯಲ್ಲಿ ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಕೋವಿಡ್ ನಿಯಮದಂತೆ ಹೆಚ್ಚಿನ ಜನರನ್ನು ಮದುವೆಗೆ ಸೇರಿಸಿರಲಿಲ್ಲ. ಸರಳವಾಗಿಯೇ ಮದುವೆ ಮಾಡಿಕೊಳ್ಳಲಾಗಿದೆ. ಈ ಸರಳ ಮದುವೆ ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ; ಗದಗ ಜಿಲ್ಲೆಯ ಜನರಿಗೆ ಭಾನುವಾರವೂ ಶುಭ ಸುದ್ದಿ!

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ಜನರಿಗೆ ಸತತ ಮೂರನೇ ದಿನವೂ ಶುಭ ಸುದ್ದಿ ಸಿಕ್ಕಿದೆ. ಹೌದು ಶುಕ್ರವಾರದಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಮುಖದತ್ತ ಸಾಗಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಇದ್ದ ಆತಂಕ ದೂರಾಗಿದ್ದು, ನೆಮ್ಮದಿಯ ‌ನಿಟ್ಟುಸಿರು ಬಿಡುವಂತಾಗಿದೆ.

ಇಂದು 133 ಜನರಿಗೆ ಸೋಂಕು ತಗುಲಿದೆ. ಇಂದು ಜಿಲ್ಲಾಡಳಿತದ ಮಾಹಿತಿ ಪ್ರಕಾರ ನಾಲ್ವರು ಮೃತಪಟ್ಟಿದ್ದಾರೆ.

ಇಂದಿನ 133 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 24793 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -60, ಮುಂಡರಗಿ-12, ನರಗುಂದ-12, ರೋಣ-25, ಶಿರಹಟ್ಟಿ-22, ಹೊರಜಿಲ್ಲೆಯ-02 ಸೇರಿದಂತೆ 133 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 273 ಕ್ಕೇರಿದೆ.

ಗದಗ ಶಹರದ ನಂದಿಶ್ವರ ನಗರದ ನಿವಾಸಿ 62 ವರ್ಷದ ವ್ಯಕ್ತಿ ಜೂನ್- 04 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -06 ರಂದು ಮೃತಪಟ್ಟಿದ್ದಾರೆ.

ನರಗುಂದ ತಾಲೂಕಿನ ಶಿರೋಳ ನಿವಾಸಿ 75 ವರ್ಷದ ವ್ಯಕ್ತಿ ಜೂನ್-03 ರಂದು ನರಗುಂದ ತಾಲೂಕು ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಜೂನ್ 03 ರಂದೇ ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಯತ್ತಿನಹಳ್ಳಿ‌ ನಿವಾಸಿ 72 ವರ್ಷದ ವ್ಯಕ್ತಿ ಮೇ-29 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಜೂನ್ -04 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಹುಲಕೋಟಿ ನಿವಾಸಿ 56 ವರ್ಷದ ವ್ಯಕ್ತಿ ಜೂನ್ -04 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್- 05 ರಂದು ಮೃತಪಟ್ಟಿದ್ದಾರೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 316 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 22805 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1715 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 155 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಯಡಿಯೂರಪ್ಪ ಬೇಕು ಅಂತಾರೆ – ಆದರೆ ಎಲ್ಲರೂ ಸೂಟು, ಬೂಟು ಹೊಲಿಸಿಕೊಂಡಿದ್ದಾರೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಿಎಂ ಯಡಿಯೂರಪ್ಪ ಅವರದ್ದು ಯಾರಿಗೂ ಬಗ್ಗುವ ವ್ಯಕ್ತಿ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳಲ್ಲಿ ಹಲವಾರು ತಂತ್ರಗಳು ಇರುತ್ತವೆ. ಇದರೊಂದಿಗೆ ರಾಜಕಾರಣದಲ್ಲಿ ಹೇಳುವುದೊಂದು, ಮಾಡುವುದೊಂದು ಎಂಬ ನೀತಿ ಅನುಸರಿಸುತ್ತಿರುತ್ತಾರೆ. ರಾಜಕಾರಣದಲ್ಲಿ ಯಡಿಯೂರಪ್ಪ ತಂತ್ರ ಬೇರೆ. ಇರುವುದರಲ್ಲಿ ಗಟ್ಟಿ ಮನುಷ್ಯ ಎಂದು ಹೇಳಿದ್ದಾರೆ.

ಯಡಿಯೂರಪ್ಪ ನಾಯಕತ್ವದಲ್ಲಿ 104 ಸೀಟ್ ಬಂದಿವೆ. ಅವರ ನಾಯಕತ್ವದಡಿಯಲ್ಲಿಯೇ ನಮ್ಮ ಸ್ನೇಹಿತರು ಕೂಡ ಹೋಗಿದ್ದಾರೆ. ಈಗ ಸುಮ್ಮನೆ ಅವರನ್ನು ತಗೆದು ಹಾಕುವ ಮಾತು ಕೇಳಿ ಬರುತ್ತಿದೆ. ಆದರೆ, ಇದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಆದರೆ, ಗಟ್ಟಿ ಮನುಷ್ಯನ ಮುಂದೆ ಈ ತಂತ್ರ ಸುಲಭವಾಗಿ ಜಗ್ಗಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದೆ ಎಲ್ಲರೂ ಯಡಿಯೂರಪ್ಪ ಬೇಕು ಅಂತಾರೆ. ಹಿಂದೆ ಎಲ್ಲರೂ ಸೂಟು – ಬೂಟು ಹೊಲಿಸಿಕೊಂಡು ಸಿದ್ಧರಾಗಿದ್ದಾರೆ.. ನನ್ನಂತಹ ವ್ಯಕ್ತಿಯಾಗಿದ್ದರೆ, ನಮ್ಮ ಪಕ್ಷ ಆಗಿದ್ದರೆ ಇಂತಹ ವ್ಯಕ್ತಿಗಳನ್ನು ಇರುವುದಕ್ಕೆ ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ, ಯಡಿಯೂರಪ್ಪ ತಂತ್ರವನ್ನು ಮೂರು ರೀತಿಯಲ್ಲಿ ವಿಶ್ಲೇಷಣೆ ಮಾಡಬಹುದು. ನನ್ನನ್ನ ಮುಟ್ಟಿ ನೋಡಿ ಎನ್ನಬಹುದು. ಪಕ್ಷದ ಶಿಸ್ತಿನ ಸಿಪಾಯಿ ಎನ್ನಬಹುದು. ನೀವೆ ಎಲ್ಲ ವಿಶ್ಲೇಷಣೆ ಮಾಡಿ ಎಂದಿರಬಹುದು ಎಂದು ಹೇಳಿದ್ದಾರೆ.

error: Content is protected !!