Home Blog Page 3349

ಮಂಗನ ಕಪಿಚೇಷ್ಟೆ ಕಂಡು ದಂಗಾದ ರೋಗಿಗಳು!

  • ಚಿಕ್ಕಮಕ್ಕಳು, ಬಾಣಂತಿಯರು ಇರುವ ವಾರ್ಡ್ ಗೆ ನುಗ್ಗಿದ ಕೋತಿ

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಕೆಸಿ ರಾಣಿ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯೊಳಗೆ ನುಗ್ಗಿದ ಮಂಗ ಬೆಡ್ ಗಳ ಮೇಲೆ ಓಡಾಡಿ ರೋಗಿಗಳಲ್ಲಿ ಭಯ ಹುಟ್ಟಿಸಿದ ಘಟನೆ ಭಾನುವಾರ ನಡೆದಿದೆ.

ಚಿಕ್ಕಮಕ್ಕಳು ಹಾಗೂ ಬಾಣಂತಿಯರಿರುವ ವಾರ್ಡ್ ಗೆ ಕೆಂಪು ಕೋತಿಯೊಂದು ಒಳಬಂದು ಬೆಡ್ ಗಳ ಮೇಲೆ ಓಡಾಡಿದೆ. ಕೋತಿ ಕಂಡು ಮಕ್ಕಳು, ಮಹಿಳೆಯರು ಭಯಗೊಂಡಿದ್ದರು.

ಕೋತಿ ಆಸ್ಪತ್ರೆಯಲ್ಲಿ ಕೆಲವು ಕ್ಷಣ ಭಯದ ವಾತಾವರಣ ನಿರ್ಮಿಸಿತ್ತು. ಇಷ್ಟೆಲ್ಲ ಆದರೂ ಕೋತಿಗಳನ್ನು ಓಡಿಸಲು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಇಲ್ಲದಿರುವುದು ರೋಗಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಈ ಕೋತಿಗಳ ದಂಡು ಹಲವಾರು ದಿವಸಗಳಿಂದ ಆಸ್ಪತ್ರೆ ಆವರಣದಲ್ಲೇ ಬಿಟ್ಟಿದೆ. ಆಗಾಗ ಆಸ್ಪತ್ರೆ ಒಳಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ಬಾಚಿಕೊಂಡು ಹೋಗುವುದು, ಹಸುಗೂಸುಗಳು ಇದ್ದಲ್ಲಿಗೆ ಬಂದು ಕಪಿಚೇಷ್ಟೆ ಮಾಡುವುದು, ರೋಗಿಗಳ
ಬೆಡ್ ಗಳ ಮೇಲೆ ಓಡಾಟ ನಡೆಸುತ್ತಿವೆ.

ಇಷ್ಟಾದರೂ ಮಂಗಗಳ ಕಪಿಚೇಷ್ಟೆ ತಡೆಯಲು ಆಸ್ಪತ್ರೆ ವೈದ್ಯರು ಯಾವುದೇ ಪ್ರಯತ್ನ ಮಾಡದಿರುವುದಕ್ಕೆ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಕಷ್ಟು ಬಾರಿ ಅರಣ್ಯ‌ ಇಲಾಖೆಗೆ ದೂರು‌ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಸಮುಜಾಯಿಸಿ ನೀಡಿದೆ.

ವಿಜಯಪುರದಲ್ಲಿ ಕೋವಿಡ್‌ಗೆ ಮೊದಲ ಮಗು ಸಾವು

0

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಕೊರೋನಾ ಸೋಂಕಿಗೆ ವಿಜಯಪುರದಲ್ಲಿ ಇದೇ ಮೊದಲ ಬಾರಿಗೆ 2 ವರ್ಷದ ಮಗುವೊಂದು ಸಾವನ್ನಪ್ಪಿರುವ ವರದಿಯಾಗಿದೆ.

ನಗರದ ಶಹ್ಪೇಟ್‌ನಲ್ಲಿ 2 ವರ್ಷದ ಮಗು ತೀವ್ರ ಜ್ವರದಿಂದ ಕೆಲ ದಿನಗಳ ಹಿಂದಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕಳೆದ ವಾರ ಮೃತಪಟ್ಟಿತ್ತು ಎಂದು ಹೇಳಲಾಗಿದೆ.

ಆಗಸ್ಟ್ 14 ರಂದು ಹೆಣ್ಣು ಮಗುವಿನಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸೂಕ್ತ ಪ್ರತಿಕ್ರಿಯೆ ಸಿಗದೆ ಆಗಸ್ಟ್ 24 ರಂದು ಮಗು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯಪುರದಲ್ಲಿ ಈ ವರೆಗೆ ಸಾಕಷ್ಟು ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದೆ. ಆದರೆ, ಮಗುವೊಂದು ಸೋಂಕಿಗೆ ಬಲಿಯಾಗಿರುವುದು ಇದೇ ಮೊದಲಾಗಿದೆ.

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಚಿನ್ನದಂಥ ಸಾಧನೆ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಭಾರತದ ಕ್ರೀಡಾಕ್ಷೇತ್ರದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ. ಏಕೆಂದರೆ ಜಪಾನ್‌ನ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚು ಸೇರಿ ಒಟ್ಟು 19 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.

ಕ್ರೀಡಾಕೂಟದ ಕೊನೆಯ ದಿನವಾದ ಭಾನುವಾರ ಒಂದು ಚಿನ್ನ, ಒಂದು ಬೆಳ್ಳಿ ಪದಕ ಗೆದ್ದುಕೊಂಡಿರುವ ಭಾರತ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಿತು.

ಕ್ರೀಡಾಕೂಟದ ಕೊನೆಯ ದಿನವಾದ ಇಂದು ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಚ್6 ವಿಭಾಗದಲ್ಲಿ ಹಾಂಗ್‌ಕಾoಗ್ ಚು ಮಾನ್ ಕೈ ಅವರನ್ನು ಸೋಲಿಸಿದ ಭಾರತದ ಕೃಷ್ಣನಗರ್ ಚಿನ್ನದ ಪದಕ ಬಾಚಿಕೊಂಡರು.

ನಿನ್ನೆ ಫೈನಲ್ಸ್ ತಲುಪಿ ಪದಕದ ಭರವಸೆ ನೀಡಿದ್ದ ಕೃಷ್ಣನಗರ್ ಇಂದು ಬೆಳಿಗ್ಗೆ ನಡೆದ ಪಂದ್ಯದಲ್ಲಿ ಹಾಂಗ್‌ಕಾoಗ್ ಆಟಗಾರನ ವಿರುದ್ಧ ಅಧಿಕಾರಯುತ ಆಟವಾಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇದಕ್ಕೂ ಮುಂಚೆ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಲಾಳನಕೇರಿಯವರಾದ ಸುಹಾಸ ಯತಿರಾಜ್ ಸಧ್ಯ ಉತ್ತರ ಪ್ರದೇಶದ ನೋಯ್ಡಾ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ಯಾರಾಲಿಂಪಿಕ್ಸ್ ಇದು ಭಾರತದ ಅದ್ವಿತೀಯ ಸಾಧನೆಯಾಗಿದೆ. ಇಲ್ಲಿಯವರೆಗೆ ನಡೆದ ಎಲ್ಲ ಪ್ಯಾರಾಲಿಂಪಿಕ್ಸ್ ಪದಕಗಳನ್ನು ಸೇರಿಸಿದರೆ ಭಾರತದ ಖಾತೆಯಲ್ಲಿ 12 ಪದಕಗಳಿದ್ದವು. ಆದರೆ, ಈ ಬಾರಿಯ ಒಂದೇ ಕ್ರೀಡಾಕೂಟದಲ್ಲಿ 5 ಚಿನ್ನ ಸೇರಿ 19 ಪದಕ ಗೆಲ್ಲುವ ಮೂಲಕ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ.

ಗೂಡ್ಸ್ ವಾಹನ ಡಿಕ್ಕಿ; ಇಂಜಿನಿಯರಿಂಗ್ ಕಾಲೇಜಿನ ನೌಕರ ಸ್ಥಳದಲ್ಲೇ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಕರ್ತವ್ಯಕ್ಕೆ ತೆರಳುತ್ತಿದ್ದ ಇಂಜಿನಿಯರಿಂಗ್ ಕಾಲೇಜಿನ ನೌಕರನ ಬೈಕ್ ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಶನಿವಾರ ರಾತ್ರಿ ನಡೆದಿದೆ.

ತಾಲೂಕಿನ ಹುಲಕೋಟಿ ಬಳಿ ನಡೆದ ಈ ದುರ್ಘಟನೆಯಲ್ಲಿ ರೂರಲ್ ಇಂಜನಿಯರಿಂಗ್ ಕಾಲೇಜಿನ ಅಡುಗೆ ಸಿಬ್ಬಂದಿ ರಾಘವೇಂದ್ರ ಜಂತ್ಲಿ (32) ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿ.

ಕಳೆದ ಮೂರು ತಿಂಗಳ ಹಿಂದೆ ಹುಲಕೋಟಿ ರೂರಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಡುಗೆ ಸಿಬ್ಬಂದಿಯಾಗಿ ರಾಘವೇಂದ್ರ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ.

ಸಮೀಪದ ಚಿಕ್ಕಹಂದಿಗೋಳ ಗ್ರಾಮದ ನಿವಾಸಿ ಆಗಿದ್ದ ರಾಘವೇಂದ್ರನಿಗೆ ಪತ್ನಿ, ಮಗು ಹಾಗೂ ಅಪಾರ ಬಂಧುಗಳಿದ್ದಾರೆ.

ಹುಲಕೋಟಿಯಿಂದ ಬೈಕ್ ಮೇಲೆ ಕಾಲೇಜಿಗೆ ಹೊರಟಾಗ ಎದುರಿಗೆ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡಿದಿದೆ.

ಘಟನೆಯ ಸುದ್ದಿ ತಿಳಿದ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ರವಿ ಕಪ್ಪತನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ ಬೆಟಗೇರಿ ನಗರಸಭೆ ಚುನಾವಣೆಗೆ ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟ

0

ವಿಜಯಸಾಕ್ಷಿ ಸುದ್ದಿ ಗದಗ
ಎರಡೂವರೆ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಗದಗ ಬೆಟಗೇರಿ ನಗರಸಭೆ ಚುನಾವಣೆಯ ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ.

ಈ ಕುರಿತು ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಅಧಿಕೃತ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು, ಪರಿಷ್ಕೃತ ಮೀಸಲಾತಿ ಪಟ್ಟಿ ಇಲ್ಲಿದೆ.

ಗದಗ ಬೆಟಗೇರಿ ನಗರಸಭೆ ಚುನಾವಣೆಗೆ ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟ

0

ವಿಜಯಸಾಕ್ಷಿ ಸುದ್ದಿ ಗದಗ
ಎರಡೂವರೆ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಗದಗ ಬೆಟಗೇರಿ ನಗರಸಭೆ ಚುನಾವಣೆಯ ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ.

ಈ ಕುರಿತು ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಅಧಿಕೃತ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು, ಪರಿಷ್ಕೃತ ಮೀಸಲಾತಿ ಪಟ್ಟಿ ಇಲ್ಲಿದೆ.

ಗದಗ ಬೆಟಗೇರಿ ನಗರಸಭೆ ಚುನಾವಣೆಗೆ ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟ

ವಿಜಯಸಾಕ್ಷಿ ಸುದ್ದಿ, ಗದಗ

ಎರಡೂವರೆ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಗದಗ ಬೆಟಗೇರಿ ನಗರಸಭೆ ಚುನಾವಣೆಯ ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ.

ಈ ಕುರಿತು ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಅಧಿಕೃತ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು, ಪರಿಷ್ಕೃತ ಮೀಸಲಾತಿ ಪಟ್ಟಿ ಇಲ್ಲಿದೆ.

ರಜೆ ಮಂಜೂರು ಮಾಡಲು ಲಂಚದ ಬೇಡಿಕೆ ಇಟ್ಟ ಬಸ್ ಡಿಪೋ ಮ್ಯಾನೇಜರ್ ಎಸಿಬಿ ಬಲೆಗೆ

ವಿಜಯಸಾಕ್ಷಿ ಸುದ್ದಿ, ರೋಣ

ಸಾರಿಗೆ ಸಂಸ್ಥೆ ಚಾಲಕ/ನಿರ್ವಾಹಕರೊಬ್ಬರಿಗೆ ರಜೆ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಡಿಪೋ ಮ್ಯಾನೇಜರ್ ನನ್ನು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

ರೋಣ ಬಸ್ ಡಿಪೋ ಮ್ಯಾನೇಜರ್ ಬಿ.ಎಂ. ಗೆನ್ನೂರ ಎಸಿಬಿ ದಾಳಿಗೆ ಒಳಗಾದ ಅಧಿಕಾರಿ. ಸಂಸ್ಥೆಯ ನಿರ್ವಾಹಕರೊಬ್ಬರು, ತಾಯಿಗೆ ಹುಷಾರಿಲ್ಲದ ಕಾರಣ ರಜೆ ಕೇಳಿದ್ದರು. ರಜೆ ಮಂಜೂರು ಮಾಡಲು 2 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇಂದು ಹಣ ಕೊಡುವಾಗ ದಾಳಿ ನಡೆಸಿದ ಅಧಿಕಾರಿಗಳು ಡಿಪೋ ಮ್ಯಾನೇಜರನನ್ನು ಬಂಧಿಸಿದ್ದಾರೆ.

ಎಸಿಬಿ ಡಿವೈಎಸ್ಪಿ ಎಂ.ವಿ. ಮಲ್ಲಾಪುರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಆರ್.ಎಫ್. ದೇಸಾಯಿ, ಈರಣ್ಣ ಹಳ್ಳಿ, ಸಿಬ್ಬಂದಿಗಳಾದ ಎಂ.ಎಂ. ಅಯ್ಯನಗೌಡರ, ವೀರೇಶ ಜೋಳದ, ಎನ್.ಎಸ್. ತಾಯಣ್ಣವರ, ವೀರೇಶ ಬಿಸನಳ್ಳಿ, ಐ.ಸಿ. ಜಾಲಿಹಾಳ, ಶರೀಫ್ ಮುಲ್ಲಾ, ಮಂಜು ಮುಳಗುಂದ ಭಾಗವಹಿಸಿದ್ದರು.

2023ರ ಚುನಾವಣೆಯಲ್ಲಿ ಸ್ಪರ್ಧೆ: ಬಿ.ವೈ.ವಿಜಯೇಂದ್ರ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮುಂಬರುವ ಸಿಂಧಗಿ ಮತ್ತು ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧೆ ವದಂತಿಗೆ ತೆರೆ ಎಳೆದಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರವಿಲ್ಲ, 2023ರ ವಿಧಾನಸಭೆ ಚುನಾವಣೆವರೆಗೂ ಕಾಯುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ, 2023ರ ವಿಧಾನಸಭೆ ಚುನಾವಣೆಗೆ ಕೇವಲ 19 ತಿಂಗಳು ಮಾತ್ರ ಬಾಕಿಯಿದೆ. ನಾನೀಗ ತರಾತುರಿಯಲ್ಲಿ ಸ್ಪರ್ಧಿಸಿದರೆ, 2023 ರಲ್ಲಿ ನನ್ನ ಕ್ಷೇತ್ರ ಬದಲಾಯಿಸಬೇಕಾಗಬಹುದು. ನನ್ನ ಬೆಂಬಲಿಗರು ಶಾರ್ಟ್ಲಿಸ್ಟ್ ಮಾಡುವ ಕ್ಷೇತ್ರದಿಂದ 2023 ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.

ತಂದೆ ಯಡಿಯೂರಪ್ಪ, ಸಹೋದರ ಮತ್ತು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಮತ್ತು ಬೆಂಬಲಿಗರೊoದಿಗೆ ಚರ್ಚೆ ನಡೆಸಿ ಚುನಾವಣೆಗೆ ಆರು ತಿಂಗಳ ಮೊದಲು ಒಂದು ನಿರ್ಧಾರಕ್ಕೆ ಬರುವುದಾಗಿ ವಿಜಯೇಂದ್ರ ಹೇಳಿದ್ದಾರೆ.

ಕಳೆದ ಬಾರಿ, ನಾನು ವರುಣಾದಿಂದ ಸ್ಪರ್ಧಿಸಲು ಬಯಸಿದ್ದೆ, ಆದರೆ ಪಕ್ಷ ಅವಕಾಶ ನೀಡಲಿಲ್ಲ. ಈ ಬಾರಿ ಅಂತಹ ಮುಜುಗರ ಆಗುವುದು ಬೇಡ. ಹೀಗಾಗಿ ಮುಂಚಿತವಾಗಿಯೇ ಪಕ್ಷದ ವರಿಷ್ಠರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಯಡಿಯೂರಪ್ಪ ರಾಜ್ಯ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಬಿಜೆಪಿ ನಾಯಕರೊಂದಿಗೆ ಸಮಾಲೋಚಿಸಿ ರಾಜ್ಯವ್ಯಾಪಿ ಪ್ರವಾಸ ಯೋಜಿಸಲಾಗಿದೆ. ರಾಜ್ಯ ಬಿಜೆಪಿ ನಾಯಕರು ಯಡಿಯೂರಪ್ಪ ಅವರ ಜೊತೆಗೆ ಸದಾ ಇರಲಿದ್ದಾರೆ ಎಂದರು.

ಮುಂದಿನ ಚುನಾವಣೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಅಮಿತ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಬೊಮ್ಮಾಯಿ ಸಿಎಂ ಆಗಿದ್ದಾರೆ. ಹೀಗಾಗಿ ಅವರನ್ನು ಮುಂದಿನ ನಾಯಕ ಎಂದು ಪ್ರೊಜೆಕ್ಟ್ ಮಾಡಬೇಕು, ಅವರೊಂದಿಗೆ ನಾನು ಉತ್ತಮ ಸಂಬoಧ ಹೊಂದಿದ್ದೇನೆ ಎಂದು ಹೇಳಿದರು.

ಸಂಸದ ಕರಡಿ ಸಂಗಣ್ಣ ಉಡಾಫೆ ಹೇಳಿಕೆ ಖಂಡನೀಯ: ಹಿಟ್ನಾಳ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯ ಸಂಗಣ್ಣ ಕರಡಿ ಅವರು ಇತ್ತೀಚೆಗೆ ಒಂದು ಹೇಳಿಕೆ ನೀಡಿದ್ದನ್ನು ತಾವು ಗಮನಿಸಿರಬಹುದು , ತೈಲ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಗೆ ಸಂಬಂಧಿಸಿದಂತೆ , ‘ ಅಪ್ಪನ ಸಾಲವನ್ನು ಮಗ ತೀರಿಸಬೇಕಲ್ವೆ ? ‘ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ಇದು ಖಂಡನೀಯ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರಕಾರವೇ ಕಾರಣ ಎಂದು ಸಂಸದರು ಆರೋಪಿಸಿದ್ದಾರೆ . ಜನರು ಬೆಲೆ ಏರಿಕೆ ಭಾರದಲ್ಲಿ ನಲುಗಿ ಹೋಗುತ್ತಿರುವಾಗ , ಸಂಸದರ ಈ ಹೇಳಿಕೆ ಆಘಾತಕಾರಿಯಷ್ಟೇ ಅಲ್ಲ , ಸಾಕಷ್ಟು ತಪ್ಪು ಮಾಹಿತಿಯನ್ನು ಒಳಗೊಂಡಿದೆ ಎಂದು ಸಂಸದರ ಹೇಳಿಕೆಯನ್ನು ಖಂಡಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 2014 ರ ಮಾರ್ಚ್‌ವರೆಗೆ ತನ್ನ 67 ವರ್ಷಗಳ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ನೇತೃತ್ವದ ಸರಕಾರಗಳು ಮಾಡಿದ ಒಟ್ಟು ಸಾಲ ರೂ .53.11 ಲಕ್ಷ ಕೋಟಿ , ಆದರೆ , ಜೂನ್ 2014 ರಿಂದ 2021 ರವರೆಗೆ ಬಿಜೆಪಿ ಸರಕಾರ ಮಾಡಿರುವ ಒಟ್ಟು ಸಾಲ 82.7 ಲಕ್ಷ ಕೋಟಿಗಳು . ಈ ಎರಡೂ ಪಕ್ಷಗಳ ನೇತೃತ್ವದ ಸರಕಾರ ಮಾಡಿರುವ ಒಟ್ಟು ಸಾಲ ರೂ .135.87 ಲಕ್ಷ ಕೋಟಿ ಅಗುತ್ತದೆ‌. ಬಿಜೆಪಿ ಸರಕಾರ ತಾನು ಮಾಡಿರುವ ಅಪಾರ ಸಾಲದ ಜೊತೆಗೆ , ಅದಾನಿ ಮುಂತಾದ ಕಾರ್ಪೊರೇಟ್ ಸಂಸ್ಥೆಗಳ ಅಂದಾಜು ರೂ .11 ಲಕ್ಷ ಕೋಟಿ ಸಾಲವನ್ನು ಎನ್‌ಪಿಎ ( ವಸೂಲಾಗದ ಸಾಲ – ಅನುತ್ಪಾದಕ ಸಾಲ ) ಎಂದು ಘೋಷಿಸಿದೆ . ಅಂದರೆ , ಕಾರ್ಪೊರೇಟ್ ಸಂಸ್ಥೆಗಳ ಈ ರೂ .11 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದಂತೆ . ಇದರ ಜೊತೆಗೆ ಕಳೆದ ನಾಲ್ಕು ವರ್ಷಗಳಲ್ಲಿ ರೂ .7 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತವನ್ನು ಮನ್ನಾ ( ಲೈಟ್ ಆಫ್ ಮಾಡಿದೆ 3.ಅನುತ್ಪಾದಕ ಸಾಲ ಪದ ಇಪಿ ನರಕಾರ ಘೋಷಿಸಿರುವ ರೂ . 11 ಲಕ್ಷ ಕೋಟಿ ಮೊತ್ತದಲ್ಲಿ ಪ್ರಧಾನಿ ಆಗಿ ಅವರ ಪರಮಾಪ್ತ ಉದ್ಯಮಿ ಅದಾನಿಯ ಸಾಲದ ಪ್ರಮಾಣವೇ ರೂ .4.5 ಲಕ್ಷ ಕೋಟಿಯಷ್ಟಿದೆ ಎಂದು ಬಿಜೆಪಿಯವರೇ ಆಗಿರುವ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ . ಇಷ್ಟೊಂದು ಸಾಲ ಮಾಡಿದ್ದರೂ ಅದಾನಿ ಅವರ ಆದಾಯ 2016 ರಿಂದ ಗುಣವಾಗುತ್ತಿರುವುದು ಹೇಗೆ ? ಇಷ್ಟೊಂದು ಸಾಲ ಇರುವ ವ್ಯಕ್ತಿಯ ಸಾಲವನ್ನು ಮನ್ನಾ ಮಾಡಿದ್ದಾದರೂ ಏಕೆ? ಈ ಅಂಶ ಸನ್ಮಾನ್ಯ ಸಂಸದ ಸಂಗಣ್ಣ ಕರಡಿ ಅವರಿಗೆ ಗೊತ್ತಿಲ್ಲವೆ? ಎಂದು ಹಿಟ್ನಾಳ ಪ್ರಶ್ನಿಸಿದರು.

2013-14ರಲ್ಲಿ ಭಾರತದ ರಷ್ಟು ಆದಾಯ ರೂ .25.52 ಲಕ್ಷ ಕೋಟಿ ಇದ್ದದ್ದು ಮೋದಿ ಕಾಲದ 2019-2020ರ ವೇಳೆಗೆ ರೂ .23.02 ಲಕ್ಷ ಕೋಟಿಗೆ ಇಳಿದಿದೆ . ಹಾಗಾದರೆ ” ಮೇಕ್ ಇನ್ ಇಂಡಿಯಾ ” ಎಲ್ಲಿ ಹೋಯ್ತು? ದೇಶದ ಜನ ಕಳೆದ 70 ವರ್ಷಗಳಲ್ಲಿ ಸೃಷ್ಟಿಸಿದ 6 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಮೋದಿಯವರು ಈ ದೇಶದ ಜನರ ಅನುಮತಿ , ಒಪ್ಪಿಗೆ ಪಡೆದಿದ್ದಾರಾ ? ಅಸ್ತಿ ನಗದೀಕರಣ ಹೆಸರಿನಲ್ಲಿ ಭಾರತದ ರಸ್ತೆಗಳು , ಏರ್‌ಪೋರ್ಟ್‌ಗಳು , ರೈಲು ನಿಲ್ದಾಣಗಳು ಸೇರಿ ಪ್ರತಿಯೊಂದನ್ನೂ ಖಾಸಗಿಯವರಿಗೆ ಒಪ್ಪಿಸಲಾಗುತ್ತಿದೆ . ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಮೋದಿ ಅವರು ಮಾರಾಟ ಮಾಡುತ್ತಿರುವುದು ಯಾರು ಮಾಡಿಟ್ಟ ಆಸ್ತಿಯನ್ನು ? ಇದಕ್ಕೆ ಸಂಸದ ಸಂಗಣ್ಣ ಕರಡಿ ಏನು ಹೇಳುತ್ತಾರೆ? ಎಂದು ಶಾಸಕರು ಕಿಡಿ ಕಾರಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಮನೆಗಳ ಆಸ್ತಿ ತೆರಿಗೆ ವಿಪರೀತ ಹೆಚ್ಚಾಗಿರುವುದು ಮಾತ್ರವಲ್ಲದೆ ಖಾಲಿ ಜಾಗಗಳಿಗೂ ತೆರಿಗೆ ವಿಧಿಸುತ್ತಿದ್ದಾರೆ . ಕಬ್ಬಿಣ , ಸಿಮೆಂಟ್ ಸೇರಿ ದಿನನಿತ್ಯ ಬಳಕೆಯ ಎಲ್ಲಾ ಸ್ಥಳ ಬೆಲೆಯೂ ಆಕಾಶ ಮುಟ್ಟುತ್ತಿದೆ . ಅಚ್ಛೆ ದಿನ್ ಅಂದರೆ ಇದೇನಾ? ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ಜನರ ಬದುಕು ನರಕವಾಗಿದೆ . ವಿದ್ಯುಚ್ಛಕ್ತಿ ಬಿಲ್ ಶೇ , 30 ರಷ್ಟು ಹೆಚ್ಚಾಗಿದೆ . ಪೆಟ್ರೋಲ್ , ಡೀಸೆಲ್ , ಅಡುಗೆ ಅನಿಲದ ಬೆಲೆ ಏರಿಕೆಯಂತೂ ನಿರಂತರವಾಗಿ ಸಾಗಿದೆ . ಬಹುಶಃ ಮೋದಿ ಅವರು ಪ್ರಧಾನಿ ಆಗಿರುವವರೆಗೂ ಈ ಬೆಳೆಗೆಸಿ ಇಳಿಯುವಂತೆ ಕಾಣುತ್ತಿಲ್ಲ . ಹೇಳುತ್ತ ಹೋದರೆ ಬಿಜೆಪಿ ಸರಕಾರ ಬಿನದಿಗೆ ಮಾಡಿರುವ ಹಾಗೂ ಮಾಡುತ್ತಿರುವ ದ್ರೋಹಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ . ಅಪ್ಪ ಮಾಡಿಟ್ಟ ಕಾಲವನ್ನು ಮಗ ತೀರಿಸಬೇಕಲ್ವೆ ? ಎಂದು ಸಂಸದ ಸಂಗಣ್ಣ ಕರಡಿ ಉಡಾಫೆಯಿಂದ ಪ್ರಶ್ನಿಸಿದ್ದಾರೆ , ಅಂದರೆ , ಕಾಂಗ್ರೆಸ್ ಅಪ್ಪ ಅದಂತಾಯ್ತು? ಎಂದು ಅವರು ಸಂಸದರ ಹೇಳಿಕೆಗೆ ಟಾಂಗ್ ನೀಡಿದರು.

ಬಿಜೆಪಿಯಂತಹ ಜನವಿರೋಧಿ , ಪ್ರಗತಿವಿರೋಧಿ ಮಗನನ್ನು ಹೊಂದಲು ಕಾಂಗ್ರೆಸ್ ಎಂದಿಗೂ ಬಯಸುವುದಿಲ್ಲ , ಅಂಕಿಅಂಶಗಳು ಸುಳ್ಳು ಹೇಳುವುದಿಲ್ಲ , ಖುದ್ದು ಕೇಂದ್ರ ಸರಕಾರವೇ ಬಿಡುಗಡೆ ಮಾಡಿರುವ ಅಂಕಿಅಂಶಗಳು ಸತ್ಯವನ್ನು ಸ್ಪಷ್ಟವಾಗಿ ಹೇಳುತ್ತಿವೆ , ಜನವಿರೋಧಿ ಸರಕಾರ ಯಾರದು ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ , ದೇಶಭಕ್ತಿಯ ಹೆಸರಿನಲ್ಲಿ , ಅತ್ಮನಿರ್ಭರ ಹೆಸರಿನಲ್ಲಿ ಜನರ ಬದುಕನ್ನು ದುರ್ಭರವಾಗಿಸಿರುವ ಬಿಜೆಪಿ ಸರಕಾರ , ಕೊರೊನಾದಂತಹ ಸಂಕಷ್ಟ ಕಾಲದಲ್ಲಿಯೂ ಜನರ ರಕ್ತ ಹೀರುವುದನ್ನು ಬಿಟ್ಟಿಲ್ಲ . ತರಿಗೆ ಹೆಸರಿನಲ್ಲಿ , ಸ್ವಾವಲಂಬಿ ಭಾರತದ ಹೆಸರಿನಲ್ಲಿ ಜನರ ಜೇಬಿನಿಂದ ದುಡ್ಡು ಕಿತ್ತುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಮಾಡಿಲ್ಲ . ಅಂತಹ ನೀಚ ಕೆಲಸ ಮಾಡುತ್ತಿರುವುದು ಬಿಜೆಪಿ ಸರಕಾರ , ವಿದ್ಯುತ್ , ನೀರು , ಇಂಧನ ಆಹಾರ ಮುಂತಾದವು ಜನರ ಮೂಲಭೂತ ಅವಶ್ಯಕತೆಗಳೇ ಹೊರತು ಆಡಂಬರವಲ್ಲ . ಇಂತಹ ಕನಿಷ್ಠ ಸೌಕರ್ಯಗಳಿಗೂ ಅಪಾರ ತೆರಿಗೆ ಪಡೆಯುತ್ತಿರುವುದು ಜನವಿರೋಧಿ ಕೆಲಸವಾಗುತ್ತದೆ . ಅಂತಹ ನೀಚ ಕೆಲಸವನ್ನು ಬಿಜೆಪಿ ಮಾಡುತ್ತ ಬಂದಿದೆ . ಆದರೆ , ತಮ್ಮ ಪಾಪದ ಕೆಲಸವನ್ನು ಕಾಂಗ್ರೆಸ್ ಪಕ್ಷದ ತಲೆಗೆ ಕಟ್ಟುವ ದುರ್ಬುದ್ಧಿ ತೋರಿಸುತ್ತಿದೆ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜುಲ್ಲು ಖಾದ್ರಿ, ಎಸ್. ಬಿ.ನಾಗರಳ್ಳಿ, ಪ್ರಸನ್ನ ಗಡಾದ, ರವಿ ಕುರಗೋಡ ಮತ್ತಿತರರು ಇದ್ದರು.

error: Content is protected !!