Home Blog Page 472

ನಾಳೆಯೇ BBK12 ಫಿನಾಲೆ: ಹಳೆಯ ವಿನ್ನರ್‌ಗಳ ಲಿಸ್ಟ್ ಇಲ್ಲಿದೆ ನೋಡಿ, ಈ ಬಾರಿ ಯಾರ ಕೈ ಸೇರಲಿದೆ ಟ್ರೋಫಿ?

‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಈ ಬಾರಿ ಟ್ರೋಫಿ ಯಾರ ಕೈ ಸೇರುತ್ತೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಪೀಕ್ ಮಟ್ಟ ತಲುಪಿದೆ. ಗಿಲ್ಲಿ ನಟ, ಕಾವ್ಯಾ ಶೈವ, ಅಶ್ವಿನಿ ಗೌಡ, ರಕ್ಷಿತಾ, ರಘು ಮತ್ತು ಧನುಶ್ — ಈ ಆರು ಮಂದಿ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ.

ಫಿನಾಲೆ ಹತ್ತಿರ ಬರುತ್ತಿದ್ದಂತೆ, ಹಳೆಯ ಸೀಸನ್‌ಗಳ ವಿನ್ನರ್‌ಗಳ ಚರ್ಚೆ ಮತ್ತೆ ಟ್ರೆಂಡ್ ಆಗಿದೆ. 2013ರಲ್ಲಿ ಆರಂಭವಾದ ಬಿಗ್ ಬಾಸ್ ಕನ್ನಡ ಮೊದಲ ಸೀಸನ್‌ನಲ್ಲಿ ವಿಜಯ್ ರಾಘವೇಂದ್ರ ವಿನ್ನರ್ ಆಗಿ ಇತಿಹಾಸ ಬರೆಯಿದ್ದರು. ಆ ಶೋ ಈಟಿವಿಯಲ್ಲಿ ಪ್ರಸಾರವಾಗಿ 98 ದಿನ ನಡೆದಿತ್ತು.

2014ರ ಸೀಸನ್ 2ರಲ್ಲಿ ಅಕುಲ್ ಬಾಲಾಜಿ ವಿನ್ನರ್ ಆಗಿ ಹೊರಹೊಮ್ಮಿದರು. 2015ರ ಸೀಸನ್ 3ರಲ್ಲಿ ಶ್ರುತಿ ವಿನ್ನರ್, ಚಂದನ್ ಕುಮಾರ್ ರನ್ನರ್ ಅಪ್ ಆಗಿದ್ದರು. ಸೀಸನ್ 4ರಲ್ಲಿ ಪ್ರಥಮ್ ವಿನ್ನರ್ ಆಗಿ ಭಾರಿ ಕ್ರೇಜ್ ಗಳಿಸಿಕೊಂಡರೆ, ಶೋ 112 ದಿನಗಳ ಕಾಲ ನಡೆದಿತ್ತು.

ಸೀಸನ್ 5ರಲ್ಲಿ ಚಂದನ್ ಶೆಟ್ಟಿ ವಿನ್ನರ್, ಸೀಸನ್ 6ರಲ್ಲಿ ಶಶಿಕುಮಾರ್ ವಿನ್ನರ್, ಸೀಸನ್ 7ರಲ್ಲಿ ಶೈನ್ ಶೆಟ್ಟಿ ವಿನ್ನರ್ ಆಗಿ ದಾಖಲೆ ಬರೆದರು. ಸೀಸನ್ 7 ಅನ್ನು ಬಿಗ್ ಬಾಸ್ ಇತಿಹಾಸದಲ್ಲೇ ಅತ್ಯುತ್ತಮ ಸೀಸನ್ ಎಂದು ಅಭಿಮಾನಿಗಳು ಇಂದಿಗೂ ನೆನಪಿಸುತ್ತಾರೆ.

ಸೀಸನ್ 8ರಲ್ಲಿ ಮಂಜು ಪಾವಗಡ ಟ್ರೋಫಿ ಗೆದ್ದರು. ಕೋವಿಡ್ ಕಾರಣದಿಂದ ಶೋ ಮಧ್ಯದಲ್ಲೇ ನಿಂತು ಮತ್ತೆ ಮುಂದುವರೆದದ್ದು ಇದೇ ಮೊದಲ ಬಾರಿ. ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ, ಸೀಸನ್ 10ರಲ್ಲಿ ಕಾರ್ತಿಕ್ ಮಹೇಶ್, ಸೀಸನ್ 11ರಲ್ಲಿ ಹನುಮಂತ — ಈ ಮೂವರು ತಲಾ ಸೀಸನ್‌ಗಳ ವಿನ್ನರ್ ಆಗಿದ್ದಾರೆ.

ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಒಟ್ಟು 112 ದಿನಗಳ ಪ್ರಯಾಣ ಮುಗಿಸುತ್ತಿದ್ದು, ಜನವರಿ 18ರಂದು ಗ್ರ್ಯಾಂಡ್ ಫಿನಾಲೆಯಲ್ಲಿ ಹೊಸ ವಿನ್ನರ್ ಹೆಸರು ಇತಿಹಾಸದಲ್ಲಿ ಸೇರಲಿದೆ.

BBK12 ಫಿನಾಲೆಗೆ ಟ್ವಿಸ್ಟ್: ಸುದೀಪ್ ಇಲ್ಲ, ಫ್ಯಾನ್ಸ್ ಶಾಕ್ – ವಿನ್ನರ್ ಘೋಷಣೆ ಭಾನುವಾರ ಮಾತ್ರ!

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆಗೂ ಮೊದಲುವೇ ಶಾಕ್ ಸಿಕ್ಕಿದೆ. ಜನವರಿ 17 ಹಾಗೂ 18ರಂದು ಎರಡು ದಿನ ನಡೆಯಬೇಕಿದ್ದ ಫಿನಾಲೆ, ಈಗ ಕೇವಲ ಭಾನುವಾರಕ್ಕೆ ಸೀಮಿತವಾಗಿದೆ. ಕಾರಣ – ನಿರೂಪಕ ಕಿಚ್ಚಾ ಸುದೀಪ್ ಇಂದು ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಾಗಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ ಶುರುವಾಗಿದೆ.

ಸುದೀಪ್ ಅವರು ಕೆಲ ಸಂದರ್ಭಗಳಲ್ಲಿ ಎಪಿಸೋಡ್ ಮಿಸ್ ಮಾಡಿಕೊಂಡಿದ್ದರು. ಆದರೆ, ಫಿನಾಲೆ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಇದೇ ಮೊದಲ ಬಾರಿ. ಇದರೊಂದಿಗೆ ಎರಡು ದಿನಗಳ ಫಿನಾಲೆ ಸಂಪ್ರದಾಯಕ್ಕೂ ಈ ಬಾರಿ ಬ್ರೇಕ್ ಬಿದ್ದಿದೆ.

ಈ ಹಿಂದೆ ಸುದೀಪ್ ಗೈರುಗೊಳ್ಳಲು ಕಾರಣ ಸಿಸಿಎಲ್ ಬ್ಯುಸಿ ಶೆಡ್ಯೂಲ್. ಜನವರಿ 16ರಂದು ವಿಶಾಖಪಟ್ಟಣದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ‘ಪಂಜಾಬ್ ದೆ ಶೇರ್’ ವಿರುದ್ಧ ಗೆಲುವು ದಾಖಲಿಸಿದೆ. ಪಂದ್ಯ ಮುಗಿಸಿ ರಾತ್ರಿ ಪ್ರಯಾಣ ಮಾಡಿ ಬೆಳಿಗ್ಗೆ ಶೂಟಿಂಗ್ ನಡೆಸುವುದು ಅಸಾಧ್ಯವಾಗಿದ್ದರಿಂದ, ಸುದೀಪ್ ಒಂದು ದಿನ ಬಿಡುವು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇಂದು ಫಿನಾಲೆ ಬದಲಾಗಿ ಸಾಮಾನ್ಯ ಎಪಿಸೋಡ್ ಪ್ರಸಾರವಾಗಲಿದ್ದು, ವಿಶೇಷ ಡ್ಯಾನ್ಸ್ ಪರ್ಫಾರ್ಮನ್ಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಭಾನುವಾರ ಬೆಳಿಗ್ಗೆ 10 ಗಂಟೆವರೆಗೆ ವೋಟಿಂಗ್ ಅವಕಾಶ ಇರಲಿದ್ದು, ಆ ಬಳಿಕ ಫಿನಾಲೆ ಎಪಿಸೋಡ್‌ನಲ್ಲಿ ಆರು ಫೈನಲಿಸ್ಟ್‌ಗಳ ಪೈಕಿ ನಾಲ್ವರು ಎಲಿಮಿನೇಟ್, ಒಬ್ಬ ವಿನ್ನರ್ ಹಾಗೂ ರನ್ನರ್‌ಅಪ್ ಘೋಷಣೆ ನಡೆಯಲಿದೆ. ಫಿನಾಲೆ ಎಪಿಸೋಡ್ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

ತುಮಕೂರಿನಲ್ಲಿ ಹಾಕಿ ಸ್ಟೇಡಿಯಂ, ವಿಶ್ವದರ್ಜೆಯ ಈಜುಕೊಳ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

0

ತುಮಕೂರು:- ತುಮಕೂರಿನಲ್ಲಿ ಹಾಕಿ ಸ್ಟೇಡಿಯಂ ಹಾಗೂ ಈಜುಕೊಳ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ತುಮಕೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟ 2025-2026ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಜಿಲ್ಲೆಯಲ್ಲಿ ಹಾಕಿ ಸ್ಟೇಡಿಯಂ ಹಾಗೂ ವಿಶ್ವದರ್ಜೆಯ ಈಜುಕೊಳ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗುವುದು. ಕ್ರೀಡಾಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಹಣ ಮೀಸಲಿಡಲಿದೆ. ತುಮಕೂರಿನ ಯುವಜನತೆ ಈ ಸೌಲಭ್ಯಗಳ ಸದುಪಯೋಗ ಪಡೆದು ವಿಶ್ವಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದರು.

ತುಮಕೂರು ಜಿಲ್ಲೆಯಿಂದ ಉತ್ತಮ ಕ್ರೀಡಾಪಟುಗಳು ಹೊರಬಂದು ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸಲಿ. ಕ್ರೀಡೆಯಿಂದ ಜೀವನದಲ್ಲಿ ಶಿಸ್ತು, ಸಂಯಮ ಮತ್ತು ಸಮಯಪ್ರಜ್ಞೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದ ಸಿಎಂ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕ್ರೀಡಾಕೂಟಗಳ ರೂವಾರಿಯಾಗಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಬಡ್ಡಿ ಪಟುವಾಗಿದ್ದೆ; ಫುಟ್‌ಬಾಲ್ ಹಾಗೂ ಕ್ರಿಕೆಟ್ ಮೇಲೂ ಆಸಕ್ತಿ ಇತ್ತು. ಇಂದಿಗೂ ಏಕದಿನ, ಟಿ–20 ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಂದ್ಯಗಳನ್ನು ವೀಕ್ಷಿಸುತ್ತೇನೆ ಎಂದು ಹೇಳಿದರು.

ಕ್ರೀಡೆಯಲ್ಲಿ ಸೋಲು–ಗೆಲುವಿಗಿಂತ ಕ್ರೀಡಾಸ್ಪೂರ್ತಿ ಮುಖ್ಯ ಎಂದು ಒತ್ತಿ ಹೇಳಿದ ಅವರು, ಗುರಿ ಸಾಧಿಸಲು ಕಠಿಣ ಪರಿಶ್ರಮ ಮತ್ತು ಉತ್ತಮ ತರಬೇತಿ ಅಗತ್ಯವೆಂದರು. ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಸರ್ಕಾರ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಜಾರಿಗೊಳಿಸಿದೆ. ಪೊಲೀಸ್ ಇಲಾಖೆಯಲ್ಲಿ ಪೇದೆ ಹುದ್ದೆಯಿಂದ ಆರಕ್ಷಕ ಉಪಾಧೀಕ್ಷಕರ ಹುದ್ದೆಯವರೆಗೆ ಶೇ.3 ಮೀಸಲಾತಿ ನೀಡಲಾಗುತ್ತಿದೆ. ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್, ಏಷಿಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತರಾದ ಅಥವಾ ಭಾಗವಹಿಸಿದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ವಿವಿಧ ಇಲಾಖೆಗಳಲ್ಲಿಯೂ ಶೇ.2 ಮೀಸಲಾತಿ ಇದೆ. ಜೊತೆಗೆ ಒಲಂಪಿಕ್ಸ್‌ನಲ್ಲಿ ಪದಕ ವಿಜೇತರಿಗೆ ನಗದು ಬಹುಮಾನ ನೀಡಿ ಕ್ರೀಡಾಪಟುಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ಹಳ್ಳಿಗೆ ಚಹಾ ಅಂಗಡಿ ಅನಿವಾರ್ಯವೇ?

ಇಂದಿನ ನಮ್ಮ ಬದುಕನ್ನು ಒಮ್ಮೆ ಶಾಂತವಾಗಿ ಗಮನಿಸಿದರೆ, ಚಹಾ ಇಲ್ಲದೆ ಒಂದು ದಿನವೂ ಪೂರ್ಣವಾಗುವುದಿಲ್ಲ ಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ. ಬೆಳಿಗ್ಗೆ ಕಣ್ಣು ತೆರೆದ ಕೂಡಲೇ ಮೊದಲು ಚಹಾ ಬೇಕು ಎನ್ನುವ ಮಾತು ಮನೆಮನೆಗಳಲ್ಲಿ ಕೇಳಿಬರುತ್ತದೆ. ಕೆಲಸಕ್ಕೆ ಹೊರಡುವ ಮೊದಲು ಒಂದು ಕಪ್ ಚಹಾ, ಮಧ್ಯಾಹ್ನ ಕೆಲಸದ ಒತ್ತಡದಲ್ಲಿ ಮತ್ತೊಂದು ಚಹಾ, ಸಂಜೆ ದಣಿವು ತೀರಿಸಿಕೊಳ್ಳಲು ಮತ್ತೆ ಚಹಾ, ಸ್ನೇಹಿತರು ಬಂದಾಗ ಚಹಾ, ಅತಿಥಿಗಳು ಬಂದಾಗ ಚಹಾ… ಹೀಗೆ ದಿನವಿಡೀ ಚಹಾ ನಮ್ಮ ಬದುಕಿನ ಜೊತೆಗೆ ನಡೆದುಕೊಳ್ಳುತ್ತದೆ. ಬಸ್ ನಿಲ್ದಾಣ, ಆಸ್ಪತ್ರೆ, ಕಚೇರಿ, ಶಾಲೆಯ ಬಳಿ, ಹಳ್ಳಿಯ ಬೀದಿ ಮೂಲೆಗೂ ಒಂದು ಚಹಾ ಅಂಗಡಿ ಇರಲೇಬೇಕು ಎಂಬ ಭಾವನೆ ನಮಗೆ ಸಹಜವಾಗಿದೆ. ಚಹಾ ಇಲ್ಲದ ಜಾಗವೊಂದನ್ನು ಊಹಿಸುವುದೇ ಕಷ್ಟವಾಗಿರುವ ಈ ಕಾಲದಲ್ಲಿ, ಒಂದು ಗ್ರಾಮದಲ್ಲಿ ಹೋಟೆಲ್‌ಗಳೇ ಇಲ್ಲ, ಸಾರ್ವಜನಿಕವಾಗಿ ಚಹಾ ಮಾರಾಟವೂ ಇಲ್ಲ ಎಂದರೆ ಅದು ನಂಬಲಾರದ ಕಥೆಯಂತೆ ತೋರುತ್ತದೆ. ಆದರೆ ಇಂತಹ ಅಸಾಧ್ಯವೆನಿಸುವ ವಾಸ್ತವವೇ ಸವದತ್ತಿ ತಾಲೂಕಿನ ಹಿರೇ ಉಳ್ಳಿಗೇರಿ ಗ್ರಾಮದಲ್ಲಿ ನೋಡಬಹುದು.

ಸವದತ್ತಿ ಪಟ್ಟಣದಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿರುವ ಹಿರೇ ಉಳ್ಳಿಗೇರಿ, ಧಾರವಾಡ ಸವದತ್ತಿ ಮುಖ್ಯ ರಸ್ತೆಗೆ ಹತ್ತಿಕೊಂಡೇ ಇರುವ ಗ್ರಾಮ. ರಸ್ತೆ ಸಂಪರ್ಕ ಉತ್ತಮವಾಗಿದೆ, ವಾಹನ ಸಂಚಾರ ನಿರಂತರವಾಗಿದೆ. ಸುತ್ತಮುತ್ತಲ ಹಳ್ಳಿಗಳು, ಪಟ್ಟಣಗಳ ಸಂಪರ್ಕವೂ ಇದೆ. ಇಷ್ಟೆಲ್ಲಾ ಅನುಕೂಲಗಳಿದ್ದರೂ, ಈ ಗ್ರಾಮದಲ್ಲಿ ಮಾತ್ರ ಒಂದೂ ಹೋಟೆಲ್ ಇಲ್ಲ. ಅದರೊಂದಿಗೆ, ಹೋಟೆಲ್ ಇಲ್ಲದ ಕಾರಣ ಮಾತ್ರವಲ್ಲ, ಸಾಮಾಜಿಕ ನಿರ್ಧಾರವಾಗಿ ಗ್ರಾಮದ ವ್ಯಾಪ್ತಿಯಲ್ಲಿ ಎಲ್ಲಿಯೂ ಚಹಾ ಮಾರಾಟ ನಡೆಯುವುದಿಲ್ಲ.

ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಹಿರೇ ಉಳ್ಳಿಗೇರಿ ಜನರು ಮನೆಗಳಲ್ಲಿ ಚಹಾ ಕುಡಿಯುತ್ತಾರೆ. ಅದು ನಿಷೇಧಿತವಲ್ಲ, ಅಪರಾಧವೂ ಅಲ್ಲ. ಆದರೆ ಗ್ರಾಮ ಮಟ್ಟದಲ್ಲಿ ಅಂದರೆ ಸಾರ್ವಜನಿಕವಾಗಿ ಚಹಾ ಅಂಗಡಿ ಅಥವಾ ಹೋಟೆಲ್ ತೆರೆಯುವುದು ಇಲ್ಲಿನ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಈ ಅಂತರವೇ ಹಿರೇ ಉಳ್ಳಿಗೇರಿಯನ್ನು ವಿಭಿನ್ನವಾಗಿಸುತ್ತದೆ.

ಗ್ರಾಮದಲ್ಲಿ ಸುಮಾರು 350ರಿಂದ 400 ಮನೆಗಳು ಇವೆ. ಜನಸಂಖ್ಯೆ ಸುಮಾರು 3 ಸಾವಿರಕ್ಕೂ ಹೆಚ್ಚು. ಇಷ್ಟು ದೊಡ್ಡ ಗ್ರಾಮದಲ್ಲಿ ಸಾಮಾನ್ಯವಾಗಿ ಎರಡು ಮೂರು ಹೋಟೆಲ್‌ಗಳು, ಚಹಾ ಅಂಗಡಿಗಳು, ಉಪಹಾರ ಕೇಂದ್ರಗಳು ಇರುವುದು ಸಹಜ. ಆದರೆ ಹಿರೇ ಉಳ್ಳಿಗೇರಿಯಲ್ಲಿ ಕಿರಾಣಿ ಅಂಗಡಿಗಳಿವೆ, ಡಬ್ಬಿ ಅಂಗಡಿಗಳಿವೆ, ದಿನಸಿ ವಸ್ತುಗಳ ವ್ಯಾಪಾರ ನಡೆಯುತ್ತದೆ, ಆದರೆ ಚಹಾ ಮಾರುವುದಿಲ್ಲ.

ಗ್ರಾಮದ ಹಿರಿಯರನ್ನು ಕೇಳಿದರೆ, ಈ ಸಂಪ್ರದಾಯದ ಬೇರುಗಳು ತುಂಬಾ ಆಳದಲ್ಲಿವೆ ಎಂಬುದು ತಿಳಿಯುತ್ತದೆ. ನಮಗೆ ಬುದ್ಧಿ ಬಂದಾಗಿನಿಂದಲೂ ಈ ಗ್ರಾಮದಲ್ಲಿ ಹೋಟೆಲ್‌ಗಳೇ ಇಲ್ಲ. ನಮ್ಮ ಅಜ್ಜಂದಿರ ಕಾಲದಲ್ಲೂ ಹೀಗೆಯೇ ಇತ್ತು. ಆಗಲೂ ಯಾರೂ ಇಲ್ಲಿ ಚಹಾ ಮಾರಾಟ ಮಾಡಿರಲಿಲ್ಲ ಎಂದು ಅವರು ಹೇಳುತ್ತಾರೆ. ಇದು ಯಾವುದೇ ಲಿಖಿತ ನಿಯಮವಲ್ಲ, ಪಂಚಾಯತ್ ನಿರ್ಣಯವೂ ಅಲ್ಲ. ಇದು ಪೀಳಿಗೆಯಿಂದ ಪೀಳಿಗೆ ಸಾಗಿಬಂದ ಒಂದು ಸಾಂಪ್ರದಾಯವೇ ಎನ್ನಬಹುದು.

ಒಮ್ಮೆ ಯಾರಾದರೂ ಹೊಸದಾಗಿ ಹೋಟೆಲ್ ತೆರೆಯಬೇಕು ಎಂದು ಯೋಚಿಸಿದರೂ, ಅದು ಯಶಸ್ವಿಯಾಗುವುದಿಲ್ಲ ಎಂಬ ನಂಬಿಕೆ ಇಲ್ಲಿದೆ. ಕಾರಣ, ಗ್ರಾಮಸ್ಥರು ಅಲ್ಲಿ ಹೋಗಿ ಚಹಾ ಕುಡಿಯುವುದೇ ಇಲ್ಲ. ವ್ಯಾಪಾರ ನಡೆಯದ ಜಾಗದಲ್ಲಿ ಹೋಟೆಲ್ ಉಳಿಯುವುದು ಸಾಧ್ಯವಿಲ್ಲ. ಹೀಗಾಗಿ ಈ ಗ್ರಾಮದಲ್ಲಿ ಹೋಟೆಲ್‌ಗಳ ಸ್ಥಾಪನೆಯ ಪ್ರಯತ್ನಗಳೇ ನಡೆದಿಲ್ಲ ಎಂಬ ಮಾತು ಕೇಳಿಬರುತ್ತದೆ.

ಇಂದಿನ ಯುವಜನತೆ ಈ ಸಂಪ್ರದಾಯವನ್ನು ಹೇಗೆ ನೋಡುತ್ತದೆ ಎಂಬುದು ಕೂಡ ಗಮನಾರ್ಹ. ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನ ಎಲ್ಲ ಪದ್ಧತಿಗಳ ಪರಿಚಯ ಇದ್ದರೂ, ಹಿರೇ ಉಳ್ಳಿಗೇರಿಯ ಯುವಕರು ಕೂಡ ಈ ಗ್ರಾಮಪದ್ಧತಿಯನ್ನು ಸಹಜವಾಗಿ ಒಪ್ಪಿಕೊಂಡಿದ್ದಾರೆ. ಹೊರಗಿನ ಊರುಗಳಿಗೆ ಹೋದಾಗ ಚಹಾ ಕುಡಿಯಬಹುದು, ಆದರೆ ತಮ್ಮ ಗ್ರಾಮದಲ್ಲಿ ಸಾರ್ವಜನಿಕವಾಗಿ ಚಹಾ ವ್ಯಾಪಾರ ನಡೆಯಬಾರದು ಎಂಬ ಅಲಿಖಿತ ನಿಯಮವನ್ನು ಅವರು ಪಾಲಿಸುತ್ತಾರೆ.

ಇದರ ಪರಿಣಾಮವಾಗಿ ಗ್ರಾಮದಲ್ಲಿ ಜೀವನಶೈಲಿ ಸ್ವಲ್ಪ ವಿಭಿನ್ನವಾಗಿದೆ. ಬೆಳಿಗ್ಗೆ ಹೊಲಕ್ಕೆ ಹೋಗುವ ಮುನ್ನ ಹಾಲು, ಮಜ್ಜಿಗೆ ಅಥವಾ ನೀರು ಕುಡಿಯುವುದು ಸಾಮಾನ್ಯ. ಸಂಜೆ ವೇಳೆ ಮನೆಗಳಲ್ಲಿ ಚಹಾ ಮಾಡಿಕೊಳ್ಳುತ್ತಾರೆ, ಆದರೆ ಚಹಾ ಕುಡಿಯಲು ಹೊರಗೆ ಹೋಗುವುದು ಎಂಬ ಕಲ್ಪನೆ ಇಲ್ಲ. ಅತಿಥಿಗಳು ಬಂದರೂ, ಮನೆಯೊಳಗೇ ಆತಿಥ್ಯ ನೀಡಲಾಗುತ್ತದೆ. ಹೀಗಾಗಿ ಹೋಟೆಲ್‌ಗಳ ಅವಶ್ಯಕತೆಯೇ ಉಂಟಾಗಿಲ್ಲ.

ಅಬ್ಬಾ, ಇಂತಹ ಗ್ರಾಮವೂ ಇದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆದರೆ ಹಿರೇ ಉಳ್ಳಿಗೇರಿ ನಮಗೆ ಒಂದು ಮಹತ್ವದ ಪಾಠ ಕಲಿಸುತ್ತದೆ. ನಾವು ಅನಿವಾರ್ಯ ಎಂದು ಭಾವಿಸುವ ಅನೇಕ ಅಭ್ಯಾಸಗಳು ವಾಸ್ತವದಲ್ಲಿ ಆಯ್ಕೆಯ ವಿಷಯವಾಗಿವೆ. ಚಹಾ ಇಲ್ಲದೆ ಸಾರ್ವಜನಿಕ ಬದುಕು ಸಾಗಲಾರದು ಎಂಬ ನಮ್ಮ ಕಲ್ಪನೆಯನ್ನು ಈ ಗ್ರಾಮ ಮೌನವಾಗಿ ಪ್ರಶ್ನಿಸುತ್ತದೆ.

ಇಂದು ಜಗತ್ತು ಒಂದೇ ರೀತಿಯ ಸಂಸ್ಕೃತಿಯತ್ತ ಸಾಗುತ್ತಿರುವಾಗ, ಹಿರೇ ಉಳ್ಳಿಗೇರಿಯಂತಹ ಗ್ರಾಮಗಳು ನಮ್ಮ ವೈವಿಧ್ಯತೆಯನ್ನು ನೆನಪಿಸುತ್ತವೆ. ಇದು ಹಿಂದುಳಿದತನದ ಸಂಕೇತವಲ್ಲ; ಬದಲಾಗಿ ತಮ್ಮದೇ ಆದ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕುವ ಆತ್ಮವಿಶ್ವಾಸದ ಉದಾಹರಣೆ. ಹಿರೇ ಉಳ್ಳಿಗೇರಿ ಕೇವಲ ಚಹಾ ಇಲ್ಲದ ಗ್ರಾಮ ಅಲ್ಲ. ಅದು ಹೋಟೆಲ್ ಸಂಸ್ಕೃತಿಗೆ ಹೊರತಾಗಿ ಬದುಕುವ ಒಂದು ಸಮಾಜ, ಮತ್ತು ನಮ್ಮ ದಿನನಿತ್ಯದ ಅಭ್ಯಾಸಗಳ ಬಗ್ಗೆ ಮರುಚಿಂತನೆ ಮಾಡಲು ಪ್ರೇರೇಪಿಸುವ ಒಂದು ಅಪರೂಪದ ಗ್ರಾಮೀಣ ಕಥೆ.

  • ಮನೋಜ ಮಸನಿ
    ಪ್ರಶಿಕ್ಷಣಾರ್ಥಿ,
    ವಾರ್ತಾ ಇಲಾಖೆ ಧಾರವಾಡ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫುಟ್‌ಪಾತ್ ಗಿರಾಕಿಗಳು; ಛಲವಾದಿ ನಾರಾಯಣಸ್ವಾಮಿ

0

ಬೆಂಗಳೂರು:- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಫುಟ್‌ಪಾತ್ ಗಿರಾಕಿಗಳು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಫುಟ್‌ಪಾತ್ ಗಿರಾಕಿಗಳು, ಅದಕ್ಕೆ ರಾಹುಲ್ ಗಾಂಧಿ ಫುಟ್‌ಪಾತ್‌ನಲ್ಲಿ ನಿಲ್ಲಿಸಿ ಮಾತಾಡಿಸಿದ್ದಾರೆ. ದಲಿತ ಪರ ಸಂಘಟನೆ, ಮೊದಲ ಟಾರ್ಗೆಟ್ ದಲಿತ, ರೈತರು ಮತ್ತು ಕನ್ನಡ ಪರ‌ ಹೋರಾಟದ ಜೊತೆಗೆ ವಿರೋಧ ಪಕ್ಷದ ಧ್ವನಿ ಹತ್ತಿಕ್ಕಲು ರಾಜ್ಯ ಸರ್ಕಾರ ದ್ವೇಷ ಭಾಷಣ ವಿರೋಧಿ ಕಾಯ್ದೆ ಜಾರಿಗೆ ಮುಂದಾಗಿದೆ. ಇದು ಗೂಂಡಾ ಮತ್ತು ಹಿಟ್ಲರ್ ಸರ್ಕಾರ. ಹೋರಾಟಗಾರರು ಮತ್ತು ವಿರೋದ ಪಕ್ಷಗಳನ್ನು ಹದ್ದುಬಸ್ತಿನಲ್ಲಿ ಇಡುವುದು ಸರ್ಕಾರದ ಮುಖ್ಯ ಉದ್ದೇಶ.

ಈ ಮೂಲಕ ಸಂವಿಧಾನದ ಕಲಂ 19ರಡಿ ನೀಡಿರುವ ವಾಕ್ ಸ್ವಾತಂತ್ರ್ಯಕ್ಕೆ ನೇರವಾಗಿ ಪೆಟ್ಟು ಕೊಡುತ್ತಿರುವ ರಾಜ್ಯ ಸರ್ಕಾರ ಹಿಟ್ಲರ್ ಸರ್ಕಾರದಂತೆ ವರ್ತನೆ ಮಾಡುತ್ತಿದೆ. ವಿರೋಧ ಪಕ್ಷದ ಕಾರ್ಯಕರ್ತರು ಒಂದು ಟ್ವೀಟ್ ಮಾಡಿದರೆ, ಯಾವುದಾದರೂ ಅಭಿಪ್ರಾಯ ಫಾರ್ವರ್ಡ್ ಮಾಡಿದರೂ ಜೈಲಿಗೆ ಹಾಕುತ್ತಿದ್ದಾರೆ. ಆದರೆ, ಅದೇ ತಮ್ಮ ಪಕ್ಷದ ಕಾರ್ಯಕರ್ತರು ‌ಸರ್ಕಾರಿ ಅಧಿಕಾರಿಗಳ ಮೇಲೆ ‌ದೌರ್ಜನ್ಯ, ಗೂಂಡಾಗಿರಿ ಮಾಡಿದರೂ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ‌ ಎಂಬಾತ ಒಬ್ಬ ಮಹಿಳಾ ಅಧಿಕಾರಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಬೀದರ್ ನಲ್ಲಿ ಎಂಎಲ್ಸಿ ಒಬ್ಬ ಬಿಜೆಪಿ ಶಾಸಕನ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲೇ ಹಲ್ಲೆ‌ ಮಾಡಿದ್ದಾನೆ. ಬಳ್ಳಾರಿಯಲ್ಲಿ ನಡೆದಿದ್ದು ಏನು? ಭರತ್ ರೆಡ್ಡಿ ಒಬ್ಬ ಶಾಸಕನಾಗಿ, ಐದು ನಿಮಿಷದಲ್ಲಿ ಜನಾರ್ದನ ರೆಡ್ಡಿ ಮನೆ ಸುಟ್ಟು ಹಾಕುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾನೆ. ಇದನ್ನೆಲ್ಲ ನೋಡಿದರೆ ಇದು ಗೂಂಡಾಗಿರಿ ಸರ್ಕಾರ ಎಂದು ಹೇಳಬಹುದು ಎಂದಿದ್ದಾರೆ.

ಹಿಂದೂ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಾರತೀಯರಾದ ನಾವೆಲ್ಲ ಒಂದೇ ಎಂಬ ಮನೋಭಾವನೆ ಪ್ರತಿಯೊಬ್ಬರ ಅಂತರಾಳದ ಮಾತಾಗಬೇಕು. ಅಂದಾಗ ಮಾತ್ರ ಸುಭದ್ರ-ಸಂಘಟಿತ ಭಾರತ ಕಟ್ಟಲು ಸಾಧ್ಯ. ಅಂತಹ ಅಂತರಾಳವು ಹಿಂದೂ ಸಮ್ಮೇಳನಗಳ ಸಂಘಟನೆಯಿಂದ ಆಗಲಿದೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಹಿರೇಮಠದ ಸಭಾಭವನದಲ್ಲಿ ನರೇಗಲ್ಲ ಹೋಬಳಿ ಮಟ್ಟದ ಹಿಂದೂ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರಾಷ್ಟಿçÃಯ ಸ್ವಯಂ ಸೇವಕ ಸಂಘ ಸ್ಥಾಪನೆಗೊಂಡು ಕಳೆದ 2025ರ ವಿಜಯದಶಮಿಗೆ ನೂರು ವರ್ಷಗಳು ಗತಿಸಿದ್ದು, ಅದರ ದ್ಯೋತಕವಾಗಿ ಒಂದು ವರ್ಷಗಳ ಪರ್ಯಂತ ಸಾರ್ವಜನಿಕರ ಸಹಯೋಗದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಈ ನಾಡಿನ ಉದ್ದಗಲಕ್ಕೂ ಹಿಂದೂ ಜಾಗೃತಿ ಮಾಡುತ್ತ ರಾಷ್ಟçಪ್ರೇಮ ಮೂಡಿಸುತ್ತಿರುವುದು ದೇಶದ ಏಕತೆಯನ್ನು ಸಾರುತ್ತಿದೆ ಎಂದರು.

ಭಾರತ ಸನಾತನ ಹಿಂದೂ ಧರ್ಮವನ್ನು ಹೊಂದಿದ್ದು, ಇಲ್ಲಿನ ಕಲೆ-ಸಾಹಿತ್ಯ-ಸಂಸ್ಕೃತಿ, ಆಚಾರ-ವಿಚಾರಗಳು ವೈಶಿಷ್ಠö್ಯತೆಯಿಂದ ಕೂಡಿವೆ. ರಾಷ್ಟçದ ಏಕತೆಗಾಗಿ ಇಂತಹ ಸಮ್ಮೇಳನಗಳು ಮೇಲಿಂದ ಮೇಲೆ ನಡೆಯುವದರಿಂದ ಯುವ ಪೀಳಿಗೆಗೆ ಹಿಂದೂ ಸಂಸ್ಕೃತಿಯನ್ನು ಪರಿಚಯಿಸಿದಂತಾಗುತ್ತದೆ. ಜ. 24ರಂದು ನರೇಗಲ್ಲ ಹೋಬಳಿ ಮಟ್ಟದ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸೋಣ ಇದಕ್ಕೆ ನಮ್ಮ ಸಲಹೆ, ಸಹಕಾರ ಸದಾ ಇದ್ದೇ ಇರುತ್ತದೆ ಎಂದರು.

ಸಮ್ಮೇಳನದ ಅಧ್ಯಕ್ಷ ಬಸವರಾಜ ವಂಕಲಕುಂಟಿ ಮಾತನಾಡಿ, ಸಮ್ಮೇಳನದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ನರೇಗಲ್ಲ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಗ್ರಾಮಗಳಿಗೆ ಸಂಚರಿಸಿ ಜನರಲ್ಲಿ ಸಮ್ಮೇಳನದ ರೂಪುರೇಷೆಗಳನ್ನು ತಿಳಿಸಲಾಗಿದೆ. ಇನ್ನು ತಮ್ಮ ಮಾರ್ಗದರ್ಶನದೊಂದಿಗೆ ಸಮ್ಮೇಳನದ ಯಶಸ್ಸಿಗೆ ಶ್ರಮವಹಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಆನಂದ ಕುಲಕರ್ಣಿ, ಜಗದೀಶ ಸಂಕನಗೌಡ್ರ, ಡಾ. ಆರ್.ಕೆ. ಗಚ್ಚಿಮಠ, ಉಮೇಶ ಪಾಟೀಲ, ರಘುನಾಥ ಕೊಂಡಿ, ಮಂಜುನಾಥ ಹೆಗಡೆ, ಎಸ್.ಕೆ. ಪಾಟೀಲ, ಮಲ್ಲನಗೌಡ ಪಾಟೀಲ, ಶಿವಕುಮಾರ ಮಾವಿನಕಾಯಿ, ಚನ್ನಬಸಪ್ಪ ಕುಷ್ಟಗಿ, ರವಿ ಮ್ಯಾಗೇರಿ, ಮಹೇಶ ಜೋಳದ, ಸುರೇಖಾ ರಾಯಬಾಗಿ, ಸೀಮಾ ಕೊಂಡಿ, ನಿರ್ಮಲಾ ಹಿರೇಮಠ ಹಾಗೂ ಅರ್ಚನಾ ಕುಲಕರ್ಣಿ ಉಪಸ್ಥಿತರಿದ್ದರು.

ಹಿರಿಯರ ಮಾರ್ಗದರ್ಶನದ ಅಗತ್ಯವಿದೆ

0

ವಿಜಯಸಾಕ್ಷಿ ಸುದ್ದಿ, ಗದಗ: ಭಕ್ತಿ, ಸೇವೆ, ಶಿಕ್ಷಣ ರಂಗದಲ್ಲಿ ಬಸವಣ್ಣವರ ತತ್ವ-ಸಿದ್ಧಾಂತಗಳನ್ನು ಸಮುದಾಯವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಆದಾಯ ತೆರಿಗೆ ಇಲಾಖೆಯ ಡೆಪ್ಯೂಟಿ ಕಮೀಷನರ್ ಜಗದೀಶ ಬಳಗಾನೂರ ಹೇಳಿದರು.

ಅವರು ನಗರದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು, ತಾಲೂಕು ಘಟಕ, ಮಹಿಳಾ ಘಟಕ, ಯುವ ಘಟಕ ಹಾಗೂ ಬಸವ ಭವನ ಕಟ್ಟಡ ಸಮಿತಿ ಆಶ್ರಯದಲ್ಲಿ ಜರುಗಿದ ಬಣಜಿಗ ಸಂಕ್ರಾತಿ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೌಶಲ್ಯತೆ ಬಣಜಿಗರಲ್ಲಿ ಸಾಕಷ್ಟು ಇದೆ. ಆದರೆ ಮಾರ್ಗದರ್ಶನದ ಕೊರತೆಯಿಂದ ಸಮುದಾಯದ ಯುವಕರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸಮುದಾಯದ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರು.

ಶಿಕ್ಷಕಿ ಶಿವಗಂಗಾ ದೂದಗಿ (ರಂಜನಗಿ) ಮಾತನಾಡಿ, ಬಣಜಿಗ ಸಮಾಜಕ್ಕೆ ಶ್ರೀಮಂತ ಇತಿಹಾಸ ಇದೆ. ಎಳ್ಳು ಗಾಣಿಗ ಬಲ್ಲ, ಸುಳ್ಳು ಸಿಂಪಿಗ ಬಲ್ಲ, ಕಳ್ಳರನ್ನು ಬಲ್ಲ ತಳವಾರ ಬಣಜಿಗ ಎಲ್ಲವನು ಬಲ್ಲ ಸರ್ವಜ್ಞ ಎನ್ನುವಂತೆ ಎಲ್ಲಾ ಕೌಶಲ್ಯಗಳು ಇವೆ. ಏಳು ಮುಖ್ಯಮಂತ್ರಿಗಳನ್ನು ಕೊಟ್ಟ ಸಮಾಜ, ಅನೇಕ ರಾಜಕಾರಣಿಗಳು ಇದ್ದಾರೆ. ಕೊಡುಗೈ ದಾನಿಗಳು ತೋಟದ ಎಲೆ ಮಲ್ಲಪ್ಪ ಶೆಟ್ಟರ, ಸಕ್ಕರೆ ಕರಡೀಶ ಯುವಕರ ಸ್ಫೂರ್ತಿ ವಿಜಯ ಸಂಕೇಶ್ವರ ಹೀಗೆ ಅನೇಕರು ನಮ್ಮ ಸಮಾಜದಲ್ಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಐ.ಬಿ. ಕೊಟ್ಟೂರಶಟ್ಟರ, ವೀರಣ್ಣ ಮಳಗಿ, ಕಿರಣ ಭೂಮಾ, ನಾಗೇಶ ಸವಡಿ, ಬಿ.ಬಿ. ಅಸೂಟಿ, ಸುರೇಶ ಬಿ.ಅಂಗಡಿ, ರಾಜಣ್ಣ ಕುರಡಗಿ, ಚೇತನ ಅಂಗಡಿ, ಯಳಮಲಿ, ಸಿ.ಎಸ್. ಗದಗ ಬಸವರಾಜ ಶಿ.ಅಂಗಡಿ, ರವಿಕುಮಾರ ಪಟ್ಟಣಶೆಟ್ಟಿ, ಈಶ್ವರ ಸಿ.ಮುನವಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಮುದಾಯದ ಸಾಧಕರಿಗೆ ಸನ್ಮಾನಿಸಲಾಯಿತು. ಸಿ.ವಾಯ್.ಸಿ.ಡಿ ಹರ್ಲಾಪೂರದ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

`ಗಣಿತ ಬಾಲಭಾಸ್ಕರ’ ತಾಲೂಕು ಮಟ್ಟದ ಪರೀಕ್ಷೆ 17ಕ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಪಂ. ಭೀಮಸೇನ ಜೋಷಿ ರಂಗಮಂದಿರದಲ್ಲಿ ಎಚ್.ಕೆ. ಪಾಟೀಲ ಪ್ರತಿಷ್ಠಾನ ಹಾಗೂ ಜಿಎನ್‌ಟಿಟಿಎಫ್, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗಣಿತ ಬಾಲಭಾಸ್ಕರ ತಾಲೂಕು ಮಟ್ಟದ ಪರೀಕ್ಷೆಯ ಉದ್ಘಾಟನಾ ಕಾರ್ಯಕ್ರಮ ಜ. 17ರಂದು ಬೆಳಿಗ್ಗೆ 9.30ಕ್ಕೆ ಜರುಗಲಿದೆ ಎಂದು ಜಿ.ಎನ್.ಟಿ.ಟಿ.ಎಫ್ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಗಣಿತ ಬಾಲಭಾಸ್ಕರ ತಾಲೂಕು ಮಟ್ಟದ ಪರೀಕ್ಷೆ ಕಾರ್ಯಕ್ರಮವನ್ನು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು.

ಗಣಿತದ ಮೂಲ ಬೇರುಗಳು ಭಾರತದಲ್ಲಿಯೇ ಜನಿಸಿದ್ದು, ಆರ್ಯಭಟ, ಭಾಸ್ಕರರಂತಹ ಗಣಿತ ಪಂಡಿತರ ಜನ್ಮಭೂಮಿಯೂ ಭಾರತವಾಗಿದೆ. ಇಂತಹ ಗಣಿತ ಕೌಶಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಎಚ್.ಕೆ. ಪಾಟೀಲ ಪ್ರತಿಷ್ಠಾನ ಹಾಗೂ ಜಿ.ಎನ್.ಟಿ.ಟಿ.ಎಫ್, ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕಳೆದ ಜ. 10ರಂದು ಗದಗ ತಾಲೂಕಾ ಶಹರ ಮತ್ತು ಗ್ರಾಮೀಣ ಭಾಗದ 140 ಶಾಲೆಗಳ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಬಾಲಭಾಸ್ಕರ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪರೀಕ್ಷೆಯಲ್ಲಿ ಸುಮಾರು 13 ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ಅದರಲ್ಲಿ ಸುಮಾರು 1,500ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಜ. 17ರಂದು ಜಿ.ಎನ್.ಟಿ.ಟಿ.ಎಫ್. ಕ್ಯಾಂಪಸ್‌ನಲ್ಲಿ ನಡೆಯುವ ಎರಡನೇ ಹಂತದ ತಾಲೂಕಾ ಮಟ್ಟದ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.

ಜ. 17ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ 8ನೇ ತರಗತಿ ಹಾಗೂ ಮಧ್ಯಾಹ್ನ 12ರಿಂದ 1ರವರೆಗೆ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು. ಜ. 24ರಂದು ಜಿ.ಎನ್.ಟಿ.ಟಿ.ಎಫ್ ಕ್ಯಾಂಪಸ್‌ನಲ್ಲಿ ಫೈನಲ್ ಪರೀಕ್ಷೆ ನಡೆಯುವುದು. ಈ ಕಾರ್ಯಕ್ರಮಕ್ಕೆ ಗದಗ ತಾಲೂಕಿನ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಟಗೇರಿ ಬಸ್ ನಿಲ್ದಾಣದಿಂದ ಗದಗ ಹಳೇ ಬಸ್ ನಿಲ್ದಾಣ ಹಾಗೂ ಮುಳಗುಂದ ನಾಕಾದಿಂದ ಜಿ.ಎನ್.ಟಿ.ಟಿ.ಎಫ್ ಕ್ಯಾಂಪಸ್‌ಗೆ ಬರಲು ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ.

ಪರೀಕ್ಷಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಜಿ.ಎನ್.ಟಿ.ಟಿ.ಎಫ್ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ತಿಳಿಸಿದ್ದಾರೆ.

ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ತೀವ್ರ ಆಕ್ಷೇಪ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರವು ನಗರಾಭಿವೃದ್ಧಿ ಇಲಾಖೆಯ ಮೂಲಕ ಜಾರಿಗೆ ತಂದಿರುವ ಯುಐಒಎಸ್ (ಯುನಿಫೈಡ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್) ತಂತ್ರಾಂಶವು ಗದಗ-ಬೆಟಗೇರಿ ನಗರಸಭಾ ವ್ಯಾಪ್ತಿಯಲ್ಲಿ ಗಂಭೀರ ತಾಂತ್ರಿಕ ದೋಷಗಳಿಂದ ಕೂಡಿದ್ದು, ಇದರ ಪರಿಣಾಮವಾಗಿ ಕಟ್ಟಡ ಅನುಮತಿ (ಬಿಲ್ಡಿಂಗ್ ಪರ್ಮಿಷನ್) ಪ್ರಕ್ರಿಯೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ ಎಂದು ಗದಗ ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಯುಐಒಎಸ್ ತಂತ್ರಾಂಶದಲ್ಲಿ ನಿರಂತರವಾಗಿ ಲಾಗಿನ್ ಸಮಸ್ಯೆ, ದಾಖಲೆಗಳ ಅಪ್‌ಲೋಡ್ ವಿಫಲತೆ, ಸಿಸ್ಟಮ್ ಎರರ್‌ಗಳು ಹಾಗೂ ತಾಂತ್ರಿಕ ವೈಫಲ್ಯಗಳು ಎದುರಾಗುತ್ತಿದ್ದು, ಸಾರ್ವಜನಿಕರು ಮತ್ತು ವೃತ್ತಿಪರ ಇಂಜಿನಿಯರ್‌ಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಕಟ್ಟಡ ಅನುಮತಿ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ಉಂಟಾಗಿ ನಾಗರಿಕರ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿದೆ.

ಯುಐಒಎಸ್ ತಂತ್ರಾಂಶದಲ್ಲಿ ಡಿಪ್ಲೋಮಾ ಸಿವಿಲ್ ಇಂಜಿನಿಯರ್‌ಗಳನ್ನು “ಸೂಪರ್ವೈಸರ್” ಎಂದು ಉಲ್ಲೇಖಿಸಿರುವುದು. ಇದು ಅವರ ಶೈಕ್ಷಣಿಕ ಅರ್ಹತೆ, ವೃತ್ತಿಪರ ಹೊಣೆಗಾರಿಕೆ ಹಾಗೂ ತಾಂತ್ರಿಕ ಸ್ಥಾನಮಾನಕ್ಕೆ ಮಾಡಿದ ಸ್ಪಷ್ಟ ಅವಮಾನವಾಗಿದ್ದು, ಇದನ್ನು ಅಸೋಸಿಯೇಷನ್ ತೀವ್ರವಾಗಿ ಖಂಡಿಸುತ್ತದೆ. ಆದ್ದರಿಂದ “ಸೂಪರ್ವೈಸರ್” ಎಂಬ ಪದವನ್ನು ತಕ್ಷಣವೇ ತೆಗೆದುಹಾಕಿ, ಅದರ ಬದಲಿಗೆ “ಆಥರೈಸ್‌ಡ್ ಸಿವಿಲ್ ಇಂಜಿನಿಯರ್” ಎಂಬ ಸರಿಯಾದ ಹಾಗೂ ಗೌರವಯುತ ಪದನಾಮವನ್ನು ಬಳಸಬೇಕು ಎಂದು ಆಗ್ರಹಿಸಲಾಗಿದೆ.

ಯುಐಒಎಸ್ ತಂತ್ರಾಂಶದಲ್ಲಿ ಡಿಪ್ಲೋಮಾ ಸಿವಿಲ್ ಇಂಜಿನಿಯರ್‌ಗಳ ಕಾರ್ಯ ವ್ಯಾಪ್ತಿಯನ್ನು ಕೇವಲ 100 ಚದರ ಮೀಟರ್‌ಗಳಿಗೆ (100 Sq.m) ಸೀಮಿತಗೊಳಿಸಿರುವುದು ಸಂಪೂರ್ಣ ಅಸಮಂಜಸವಾಗಿದೆ. ಈ ಹಿಂದೆ ನಿರ್ಮಾಣ-2 (ಬಿಲ್ಡಿಂಗ್-2) ತಂತ್ರಾಂಶದಲ್ಲಿ ಡಿಪ್ಲೋಮಾ ಸಿವಿಲ್ ಇಂಜಿನಿಯರ್‌ಗಳಿಗೆ ನೀಡಲಾಗಿದ್ದ ಕಾರ್ಯ ವ್ಯಾಪ್ತಿಯೇ ಪ್ರಾಯೋಗಿಕ, ತಾಂತ್ರಿಕ ಹಾಗೂ ಕಾನೂನುಬದ್ಧವಾಗಿದ್ದು, ಅದೇ ಕಾರ್ಯ ವ್ಯಾಪ್ತಿಯನ್ನು ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಸಬೇಕು ಎಂದು ಅಸೋಸಿಯೇಷನ್ ಸ್ಪಷ್ಟವಾಗಿ ಒತ್ತಾಯಿಸಿದೆ.

ಈ ಎಲ್ಲಾ ವಿಚಾರಗಳಲ್ಲಿ ಸರ್ಕಾರ ಹಾಗೂ ನಗರಸಭಾ ಆಡಳಿತವು ತಕ್ಷಣ ಸ್ಪಷ್ಟ ಮತ್ತು ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದು ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.

ಡಾ. ಸತೀಶ ಹೊಂಬಾಳಿಯವರಿಗೆ `ವೈದ್ಯ ನಿರಂಜನ’ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಹೂವಿನ ಶಿಗ್ಲಿ ಗ್ರಾಮದ ವಿರಕ್ತಮಠವು ಈ ಭಾಗದಲ್ಲಿಯೇ ಸಮನ್ವಯತೆಯನ್ನು ಸಾರುವ ಶ್ರದ್ಧಾ ಕೇಂದ್ರವಾಗಿ ಬೆಳೆಯುತ್ತಿದ್ದು, ಇಂತಹ ಪವಿತ್ರ ಕ್ಷೇತ್ರವನ್ನಾಗಿ 만든 ಲಿಂ.ನಿರಂಜನ ಮಹಾಸ್ವಾಮಿಗಳು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಷ್ಟೇ ಅಲ್ಲ, ಆಯುರ್ವೇದ ಔಷಧಿ ನೀಡುವಲ್ಲಿ ಸಿದ್ಧಹಸ್ತರಾಗಿದ್ದರು. ಅವರು ಕಾಲವಾಗಿ 16 ವರ್ಷಗಳು ಗತಿಸಿದ್ದು, ಅವರ ಸ್ಮರಣಾರ್ಥವಾಗಿ ಶ್ರೀಮಠದಿಂದ ವೈದ್ಯ ನಿರಂಜನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಈ ಭಾಗದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರಾಗಿ ವಿಶೇಷ ಸಾಧನೆ ಮಾಡಿ ಸಾವಿರಾರು ರೋಗಿಗಳ ಪಾಲಿನ ಧನ್ವಂತರಿಯಾಗಿ, ನಿಷ್ಠೆ, ಪ್ರಾಮಾಣಿಕತೆಯಿಂದ ಚಿಕಿತ್ಸೆ ನೀಡುತ್ತಿರುವ ಮತ್ತು ಅನೇಕ ಊರುಗಳಲ್ಲಿ ಉಚಿತವಾಗಿ ಪ್ರಾಕೃತಿಕ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿರುವ ಹುಲಕೋಟಿಯ ಕೆ.ಎಚ್. ಪಾಟೀಲ ಪ್ರಕೃತಿ ಚಿಕಿತ್ಸಾ ಕೇಂದ್ರದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ತಜ್ಞ ಡಾ. ಸತೀಶ ಹೊಂಬಾಳಿ ಅವರಿಗೆ ಶ್ರೀಮಠದ ಪ್ರತಿಷ್ಠಿತ `ವೈದ್ಯ ನಿರಂಜನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಸತೀಶ ಹೊಂಬಾಳಿಯವರು, ಮಠಗಳು ಸಾಂಸ್ಕೃತಿಕ ಶ್ರದ್ಧಾ ಕೇಂದ್ರಗಳು. ಹೂವಿನಶಿಗ್ಲಿ ವಿರಕ್ತಮಠ ಲಿಂ.ನಿರಂಜನಾನಂದ ಮಹಾಸ್ವಾಮಿಗಳು ಈ ಭಾಗದ ಪ್ರಸಿದ್ಧ ಆಯುರ್ವೇದ ವೈದ್ಯರಾಗಿ ಸಾವಿರಾರು ಜನರಿಗೆ ದೊಡ್ಡ ದೊಡ್ಡ ರೋಗಗಳಿಗೆ ಔಷಧಿ ನೀಡಿ ಗುಣಮುಖರಾಗಿರುವದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಲ್ಲದೆ ರಾಜ್ಯದಲ್ಲಿ ಪ್ರಥಮವಾಗಿ ಪ್ರಕೃತಿ ಚಿಕಿತ್ಸಾ ಕೇಂದ್ರ ಪ್ರಾರಂಭವಾಗಿರುವದು ಶಿಗ್ಲಿ ಗ್ರಾಮದಲ್ಲಿಯೇ ಆಗಿದ್ದು, ಆ ಗ್ರಾಮದ ಬಸವಕುಮಾರ ಸ್ವಾಮಿಜೀಯವರು ಈ ಕೇಂದ್ರವನ್ನು ಸ್ಥಾಪಿಸಿರುವದರಿಂದ ಇದು ಹೆಚ್ಚು ಮಹತ್ವದ್ದಾಗಿದೆ.

ಶ್ರೀಮಠದ ಕರ್ತೃತ್ವ ಶಕ್ತಿಯಿಂದ ಇಲ್ಲಿನ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿರುವದನ್ನು ನೋಡಿ ಅಚ್ಚರಿಯಾಯಿತು. ಸಮಾಜದಲ್ಲಿನ ಜನರಿಗೆ ಉತ್ತಮ ಮಾರ್ಗದರ್ಶನದ ಜೊತೆಗೆ ಶಿಕ್ಷಣ, ಸಾಮಾಜಿಕ ಚಿಂತನೆಯಲ್ಲಿ ಮಠ-ಮಾನ್ಯಗಳ ಪಾತ್ರ ಹಿರಿದಾಗಿದ್ದು, ಇಂತಹ ಪವಿತ್ರ ಸ್ಥಾನದಲ್ಲಿ ಹಿರಿಯ ಶ್ರೀಗಳ ಹೆಸರಿನಲ್ಲಿ ವೈದ್ಯ ನಿರಂಜನ ಪ್ರಶಸ್ತಿ ನೀಡಿರುವದು ನನ್ನ ಜವಾಬ್ದಾರಿ ಹೆಚ್ಚುವಂತಾಗಿದೆ ಎಂದು ಹೇಳಿದರು.

ಮುಂಡರಗಿ ಜಗದ್ಗುರುಗಳು, ಹೂವಿನಶಿಗ್ಲಿ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು, ಮುಖಂಡರು ಉಪಸ್ಥಿತರಿದ್ದರು.

error: Content is protected !!