Home Blog Page 514

ತೋಟದಲ್ಲಿ ನವವಿವಾಹಿತನ ಶವ ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆಗೈದ ಹೆಂಡ್ತಿ!

0

ತುಮಕೂರು: ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ನಡೆದ ಗುಜರಿ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.

ಮದುವೆಯಾಗಿ ಕೇವಲ ಮೂರು ತಿಂಗಳಲ್ಲೇ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಗುಜರಿ ವ್ಯಾಪಾರಿ ಮನ್ಸೂರ್ ಪಾಷ ಹತ್ಯೆ ಪ್ರಕರಣದಲ್ಲಿ, ಫರ್ಜಾನ್ (31), ಧನರಾಜ್ (24), ವೆಂಕಟೇಶ್ (24) ಮತ್ತು ದರ್ಶನ್ (24) ಎಂಬ ನಾಲ್ಕು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಮನ್ಸೂರ್ ಕುಟುಂಬದ ನಿರ್ಧಾರದಂತೆ ಫರ್ಜಾನ್ ಎಂಬಾಕೆಯನ್ನು ಈ ವರ್ಷ ಜನವರಿಯಲ್ಲಿ ವಿವಾಹವಾಗಿದ್ದರು.

ಅದರಂತೆ ಮನ್ಸೂರ್ ಮಾರ್ಚ್ 4ರಂದು ಗುಜರಿ ವಸ್ತು ತರಲು ಹೋದಾಗ ನಾಪತ್ತೆ ಆಗಿದ್ದು, ತಪಾಸಣೆ ನಡೆಸಿದಾಗ ಅಡಕೆ ತೋಟದಲ್ಲಿ ಶವ ಪತ್ತೆಯಾಗಿತ್ತು.

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಎಸ್, ಧನರಾಜ್ ಎಂಬಾತನ ಜೊತೆ ಮೃತ ಮನ್ಸೂರ್ ಪತ್ನಿ ಫರ್ಜಾನ ಸಂಬಂಧ ಹೊಂದಿದ್ದು, ಮನ್ಸೂರ್ ಕೊಲೆಗಾಗಿ ಹೆಂಡ್ತಿ ಹಾಗೂ ಪ್ರಿಯಕರ ಪ್ಲ್ಯಾನ್ ರೂಪಿಸಿದ್ದು ತಿಳಿದುಬಂದಿದೆ.

ಆರೋಪಿಗಳು ಮನ್ಸೂರ್ ನನ್ನು ಕರೆಸಿ ತರಾತುರಿಯಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಪರಾರಿಯಾಗಿದ್ದರೂ, ದರ್ಶನ್ ನ ಕರೆ ಮೂಲಕ ಅವರ ಸಂಪರ್ಕ ಗೊತ್ತಾಗಿ, ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಐತಿಹಾಸಿಕ ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ರಿತ್ತಿ ಕುಟುಂಬದಿಂದ ಹೊಸ ಬೇಡಿಕೆ!

0

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.

ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬವು ತಜ್ಞರು ಅಂದಾಜಿಸಿರುವ ಬೆಲೆಯ ಆಧಾರದ ಮೇಲೆ ತಮ್ಮ ಪಾಲು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಸರ್ಕಾರ ನೇಮಿಸಿದ ತಜ್ಞರ ತಂಡವು ಇತ್ತೀಚೆಗೆ ಪರಿಶೀಲನೆ ನಡೆಸಿ ನಿಧಿಯ ಅಂದಾಜು ಮೌಲ್ಯವನ್ನು ಸುಮಾರು 8 ಕೋಟಿ ರೂಪಾಯಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಈ ಮೊತ್ತಕ್ಕೆ ಒಪ್ಪುವುದಿಲ್ಲ ಎಂದು ಹೇಳಿರುವ ಕುಟುಂಬದವರು, ಪ್ರಾಚೀನ ವಸ್ತುವಾಗಿರುವುದರಿಂದ ಇದರ ಆ್ಯಂಟಿಕ್ ಮೌಲ್ಯ ಈಗಿನ ಅಂದಾಜಿಗಿಂತ ಹತ್ತರಷ್ಟು ಹೆಚ್ಚಿರಬಹುದು ಎಂದು ಹೇಳಿದ್ದಾರೆ.

ಆದರೂ ಕಾನೂನಿನ ಪ್ರಕಾರ ತಜ್ಞರು ನಿಗದಿಪಡಿಸಿದ 8 ಕೋಟಿ ರೂ. ಮೌಲ್ಯಕ್ಕೆ ಐದರ ಒಂದು ಭಾಗ ಪಾಲು ನೀಡಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ.

ಪ್ರಜ್ವಲ್ ರಿತ್ತಿ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾನೆ. ಹೀಗಾಗಿ ಸರ್ಕಾರವೂ ಪ್ರಾಮಾಣಿಕವಾಗಿ ಪರಿಹಾರ ನೀಡಬೇಕು ಎಂದು ಕುಟುಂಬದವರು ತಿಳಿಸಿದ್ದಾರೆ.

ಈ ಕುರಿತು ಸಚಿವ ಎಚ್.ಕೆ. ಪಾಟೀಲ್ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ್ ಭರವಸೆ ನೀಡಿದ್ದು, ಅವರ ಮೇಲೆ ನಮಗೆ ನಂಬಿಕೆ ಇದೆ ಎಂದು ಕುಟುಂಬದವರು ಹೇಳಿದ್ದಾರೆ.

ಕುಟುಂಬದವರ ಪ್ರಕಾರ, ನಿಧಿಯ ನಿಜವಾದ ಆ್ಯಂಟಿಕ್ ಮೌಲ್ಯವನ್ನು ಪರಿಗಣಿಸಿ ನ್ಯಾಯಸಮ್ಮತ ಪರಿಹಾರ ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.

ರಸ್ತೆ ಅಪಘಾತಕ್ಕೆ ಪುನುಗು ಬೆಕ್ಕು ಬಲಿ!

0

ಗದಗ: ರಸ್ತೆ ದಾಟುವ ವೇಳೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಪುನುಗು ಬೆಕ್ಕೊಂದು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಅರಷಿನಗೋಡಿ ಗ್ರಾಮದ ಬಳಿ ನಡೆದಿದೆ.

ಕಾಡು ಪ್ರದೇಶದ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ವಾಹನ ಪುನುಗು ಬೆಕ್ಕಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಅದು ಸಾವನ್ನಪ್ಪಿದೆ. ವಾಹನ ಸವಾರರು ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ.

ಈ ಭಾಗದಲ್ಲಿ ಕಾಡು ಪ್ರಾಣಿಗಳು ರಸ್ತೆ ದಾಟುವ ಸಂದರ್ಭಗಳು ಹೆಚ್ಚಾಗಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಕಾಡು ಪ್ರಾಣಿಗಳನ್ನು ರಕ್ಷಿಸಲು ಸಹಕರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಬೈಕ್ ಗೆ ಟಿಪ್ಪರ್ ಡಿಕ್ಕಿ: ವೈದ್ಯ ವಿದ್ಯಾರ್ಥಿನಿ ಸಾವು, ಮತ್ತೋರ್ವ ಯುವತಿ ಗಂಭೀರ!

ಬೆಂಗಳೂರು: ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮುಂಭಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

21 ವರ್ಷದ ಕೃತಿಕಾ ಮೃತ ವೈದ್ಯ ವಿದ್ಯಾರ್ಥಿನಿ. ನಿನ್ನೆ ಸಂಜೆ ಕಾಲೇಜು ಮುಗಿಸಿ ಸ್ನೇಹಿತೆ MBBS ವಿದ್ಯಾರ್ಥಿನಿ ಹಂಸ ಜೊತೆ ಆಕ್ಟಿವಾದಲ್ಲಿ ತೆರಳುತ್ತಿದ್ದರು. ಈ ಸಮಯದಲ್ಲಿ ಅತಿವೇಗದಲ್ಲಿ ಬಂದ ಟಿಪ್ಪರ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೊತೆಯಲ್ಲಿದ್ದ ಹಂಸ ಗಂಭೀರ ಗಾಯಗೊಂಡಿದ್ದು, ಅವರನ್ನು ಆರ್ ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಬೆನ್ನಲ್ಲೇ ಕೆಂಗೇರಿ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ವಾಯು ಗುಣಮಟ್ಟ ಕುಸಿತ: ಆರೋಗ್ಯಕ್ಕೆ ಅಪಾಯ!

ಬೆಂಗಳೂರು: ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಇಂದು ಕಳಪೆ ಮಟ್ಟವನ್ನು ತಲುಪಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರಿನ AQI 155ಕ್ಕೆ ಏರಿದ್ದು, ಆರೋಗ್ಯಕ್ಕೆ ಹಾನಿಕರ ಮಟ್ಟದಲ್ಲಿದೆ.

ಇದರೊಂದಿಗೆ, ಮಂಗಳೂರು 168, ಮೈಸೂರು 173, ಬೆಳಗಾವಿ 163, ಶಿವಮೊಗ್ಗ 162, ಬಳ್ಳಾರಿ 124, ಹುಬ್ಬಳ್ಳಿ 162, ಉಡುಪಿ 160, ವಿಜಯಪುರ 151 ರೀತಿ ರಾಜ್ಯದ ಹಲವು ಜಿಲ್ಲೆಗಳ ಗಾಳಿ ಕಳಪೆ ಮಟ್ಟಕ್ಕೆ ತಲುಪಿದೆ. ಕಲಬುರ್ಗಿ ಮಾತ್ರ 90 ರಲ್ಲಿ ಸ್ವಲ್ಪ ಸುಧಾರಿಸಿಕೊಂಡಂತಿದೆ.

ಈ ತಿಂಗಳು ರಾಜ್ಯದ ಹವಾಮಾನ ಉಷ್ಣವಾಗಿ ಇರಲಿದ್ದು, ಹೆಚ್ಚಿನ ನಗರಗಳಲ್ಲಿ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿರುತ್ತಾ ಇರಬಹುದು. WHO ಮಾನದಂಡಗಳ ಪ್ರಕಾರ, ಇಂತಹ AQI ಮಟ್ಟವು ಉಸಿರಾಟ ಸಮಸ್ಯೆ, ತೀವ್ರತೆ ಹೆಚ್ಚಾದ ಶ್ವಾಸಕೋಶ ಸಮಸ್ಯೆಗಳಿಗೆ ಕಾರಣವಾಗಬಹುದು.

 

ಸಹಪಾಠಿಯ ಕಿರುಕುಳ ಆರೋಪ: ಶಾಲಾ ಕಟ್ಟಡದಿಂದ ಜಿಗಿದು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ?

ಬೀದರ್: ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ಶಾಲಾ ಕಟ್ಟಡದಿಂದ ಜಿಗಿದು 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಮೃತ ಬಾಲಕಿಯನ್ನು ಮದಿಯಾ ನಶೀರ್ ಪಾಷಾ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭೆಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದಿಯಾ ಚಿಕ್ಕಪ್ಪ ಎಂ.ಡಿ. ಯೂಸುಫ್ ತಿಳಿಸಿದಂತೆ, ಸಹಪಾಠಿ ಲವ್ ಮಾಡುವಂತೆ ಕಿರುಕುಳ ನೀಡಿದ್ದಕ್ಕೆ ಮದಿಯಾ ನಶೀರ್ ಪಾಷಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಬಾಲಕಿಯ ಮೇಲೆ ನಡೆದ ಹಿಂಸೆ ಹಾಗೂ ಕಿರುಕುಳದ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಹಿಡಿದಿವೆ.

ಪೊಲೀಸರು ಘಟನೆ ಕುರಿತು ತನಿಖೆ ಮುಂದುವರೆಸಿದ್ದಾರೆ..

ಕೊಪ್ಪಳ: ಮಲ್ಲಾಪುರದಲ್ಲಿ ಹಾಡಹಗಲೇ ಚಿರತೆ ಓಡಾಟ, ಗ್ರಾಮಸ್ಥರಲ್ಲಿ ಆತಂಕ!

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಹಗಲು ಹೊತ್ತಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ.

ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವ ಚಿರತೆ ಹಗಲು ವೇಳೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಮಲ್ಲಾಪುರವು ತುಂಗಭದ್ರಾ ನದಿಯ ಸಮೀಪದಲ್ಲಿರುವುದರಿಂದ, ನದಿಯ ಆಸುಪಾಸಿನ ಪ್ರದೇಶಗಳಿಂದ ಚಿರತೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮಸ್ಥರು ಚಿರತೆಯ ಸಂಚಾರ ಹೆಚ್ಚುತ್ತಿರುವುದರಿಂದ ಜಾನುವಾರುಗಳಿಗೆ ಅಪಾಯ ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಿದ್ದು, ಚಿರತೆಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಬೋನ್ ಅಳವಡಿಸುವಂತೆ ಮನವಿ ಮಾಡಿದ್ದಾರೆ.

ಮಾನಸಿಕವಾಗಿ ಬಲಿಷ್ಠರಾಗಲು ಏನು ಮಾಡಬೇಕು? ಚಾಣಕ್ಯರ ಈ ಕಿವಿಮಾತುಗಳನ್ನು ಪಾಲಿಸಿ!

0

ಮಾನಸಿಕ ಶಕ್ತಿ ಸಾಧಿಸುವುದು ಯಶಸ್ಸಿನ ಹಾಗೂ ಧೈರ್ಯದಿಂದ ಬದುಕಲು ಅನಿವಾರ್ಯ.

ದೈಹಿಕವಾಗಿ ಬಲಿಷ್ಠರಾಗಲು ವ್ಯಾಯಾಮ ಮಾಡಬೇಕೆನ್ನುವುದೇ ಇದ್ದಂತೆ, ಮನಸ್ಸಿನ ಶಕ್ತಿಯನ್ನು ಹೆಚ್ಚಿಸಲು ಕೆಲ ತತ್ವಗಳನ್ನು ಪಾಲಿಸುವುದು ಅಗತ್ಯ. ಚಾಣಕ್ಯರ ಹೇಳಿಕೆಯಲ್ಲಿ ಈ ತತ್ತ್ವಗಳನ್ನು ಅನುಸರಿಸುವುದರಿಂದ ನಮ್ಮ ಆಲೋಚನೆ, ನಂಬಿಕೆಗಳು ಮತ್ತು ಜೀವನ ಶೈಲಿ ಸಂಪೂರ್ಣವಾಗಿ ಬದಲಾಯಿಸಬಹುದು, ಜೊತೆಗೆ ನಮ್ಮ ಗುರಿಗಳನ್ನು ಸಾಧಿಸುವ ಶಕ್ತಿ ಬರುತ್ತದೆ.

ಮಾನಸಿಕವಾಗಿ ಸದೃಢರಾಗಲು ಮುಖ್ಯವಾದ ಕ್ರಮಗಳು:

  1. ಪ್ರತಿದಿನ ಯೋಚಿಸುವ ಅಭ್ಯಾಸ:
    ದೇಹವನ್ನು ಫಿಟ್ ಮಾಡಿಕೊಳ್ಳಲು ಪ್ರತಿದಿನ ವ್ಯಾಯಾಮ ಮಾಡುವಂತೆ, ನಮ್ಮ ಮನಸ್ಸನ್ನು ಬಲಪಡಿಸಲು ಪ್ರತಿದಿನ ಒಳ್ಳೆಯ ಆಲೋಚನೆಗಳನ್ನು ಯೋಚಿಸುವ ಅಭ್ಯಾಸ ಮಾಡಬೇಕು. ನಿರ್ಧಾರ ತೆಗೆದುಕೊಳ್ಳುವುದು, ಸವಾಲುಗಳನ್ನು ವಿಶ್ಲೇಷಿಸುವುದು, ಮತ್ತು ಮನಸ್ಸನ್ನು ಶಾಂತವಾಗಿಡುವ ಬಗ್ಗೆ ಯೋಚಿಸಲು ಸ್ವಲ್ಪ ಸಮಯ ಮೀಸಲು ಮಾಡಬೇಕು. ಈ ಅಭ್ಯಾಸ ನಿಮ್ಮನ್ನು ತಾಳ್ಮೆಯುಳ್ಳ, ಬುದ್ಧಿವಂತ ವ್ಯಕ್ತಿಯಾಗಿ ರೂಪಿಸುತ್ತದೆ.
  2. ಸ್ವಾವಲಂಬನೆ:
    ಚಾಣಕ್ಯರ ಪ್ರಕಾರ, ನಿಮ್ಮ ಸಮಸ್ಯೆಗಳನ್ನು ಸ್ವತಃ ಪರಿಹರಿಸಲು ಪ್ರಯತ್ನಿಸಿದಾಗ, ನಿಮ್ಮ ಮನಸ್ಸು ಬಲಗೊಳ್ಳುತ್ತದೆ. ಇತರರ ಮೇಲೆ ಅವಲಂಬನೆ ಹೆಚ್ಚಾದರೆ, ಆತ್ಮವಿಶ್ವಾಸ ಕುಗ್ಗುತ್ತದೆ. ಸಣ್ಣ ಜವಾಬ್ದಾರಿಗಳನ್ನು ನಿಜವಾಗಿ ತೆಗೆದುಕೊಂಡು ಸಾಧಿಸಿದಾಗ, ನೀವು ಮಾನಸಿಕವಾಗಿ ಬಲಿಷ್ಠರಾಗುತ್ತೀರಿ.
  3. ಸಮಯದ ಸದುಪಯೋಗ:
    ಸಮಯ ಅತ್ಯಂತ ಅಮೂಲ್ಯವಾದದ್ದು. ಮಾನಸಿಕವಾಗಿ ಬಲಿಷ್ಠರಾದವರು ಸಮಯವನ್ನು ಗೌರವಿಸುತ್ತಾರೆ, ನಿಷ್ಪ್ರಯೋಜಕ ವಿಷಯಗಳಿಗೆ ವ್ಯರ್ಥ ಮಾಡುವುದಿಲ್ಲ. ಸಮಯಕ್ಕೆ ಎಚ್ಚರಗೊಳ್ಳುವುದು, ಕೆಲಸಗಳಿಗೆ ಆದ್ಯತೆ ನೀಡುವುದು ಮತ್ತು ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸುವ ಅಭ್ಯಾಸವು ವ್ಯಕ್ತಿಯನ್ನು ಬಲಿಷ್ಠಗೊಳಿಸುತ್ತದೆ.
  4. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ:
    ಹತಾಶೆ, ಭಯ, ಕೋಪ ಇತ್ಯಾದಿ ನಕಾರಾತ್ಮಕ ಭಾವನೆಗಳು ಮನಸ್ಸನ್ನು ದುರ್ಬಲಗೊಳಿಸುತ್ತವೆ. ಚಾಣಕ್ಯರ ಪ್ರಕಾರ, ನಾವು ಸಕಾರಾತ್ಮಕವಾಗಿ ಯೋಚಿಸಿದರೆ, ಯಾವುದೇ ಸವಾಲನ್ನು ಧೈರ್ಯದಿಂದ ಎದುರಿಸಬಹುದು ಮತ್ತು ಯಶಸ್ವಿಯಾಗಬಹುದು.
  5. ಹೊಸ ವಿಷಯಗಳನ್ನು ಕಲಿಯಿರಿ:
    ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುವುದು ಮತ್ತು ಜ್ಞಾನವನ್ನು ವಿಸ್ತರಿಸುವುದು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೊಸ ಪುಸ್ತಕಗಳನ್ನು ಓದುವುದು, ಹಿಂದಿನ ಅನುಭವಗಳಿಂದ ಪಾಠ ಕಲಿಯುವುದು, ಹಾಗೂ ಇತರರಿಂದ ಒಳ್ಳೆಯದನ್ನೇ ಕಲಿಯುವ ಪ್ರಯತ್ನವು ನಿಮ್ಮ ಮನಸ್ಸನ್ನು ಬಲಿಷ್ಠಗೊಳಿಸುತ್ತದೆ.

ಮನಸ್ಸು ಬಲಿಷ್ಠವಾಗಿರಬೇಕು ಎಂಬುದು ಜೀವನದಲ್ಲಿ ಯಶಸ್ಸಿನ ಮತ್ತು ಧೈರ್ಯ ಜೀವನದ ಪ್ರಮುಖ ಅಂಶ. ಚಾಣಕ್ಯರ ತತ್ತ್ವಗಳನ್ನು ಪಾಲಿಸುವ ಮೂಲಕ, ನಾವು ನಮ್ಮ ಮನಸ್ಸನ್ನು ಸದೃಢಗೊಳಿಸಬಹುದು, ಸವಾಲುಗಳನ್ನು ಧೈರ್ಯದಿಂದ ಎದುರಿಸಬಹುದು ಮತ್ತು ಜೀವನದಲ್ಲಿ ನಮ್ಮ ಗುರಿಗಳನ್ನು ಸಾಧಿಸಬಹುದು.

ಮಾರ್ಚ್ 28 ರಿಂದ ಐಪಿಎಲ್ ಹಬ್ಬ: ಮೊದಲ ಹಂತದ 20 ಪಂದ್ಯಗಳ ವೇಳಾಪಟ್ಟಿ ಪ್ರಕಟ!

0

ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ.

20 ಪಂದ್ಯಗಳ ವೇಳಾಪಟ್ಟಿ ಕ್ರಿಕೆಟ್ ಪ್ರೇಮಿಗಳಿಗೆ ಸಂಭ್ರಮವನ್ನು ತಂದುಕೊಡುತ್ತಿದೆ. ಐಪಿಎಲ್ ಹಬ್ಬ ಮಾರ್ಚ್ 28ರಿಂದ ಪ್ರಾರಂಭವಾಗಲಿದ್ದು, ಮೊದಲ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾತ್ರಿ 7.30ಕ್ಕೆ ನಡೆಯಲಿದೆ.

ದೇಶದ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಸದ್ಯಕ್ಕೆ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರ ಟೂರ್ನಿಯ ಉಳಿದ ಪಂದ್ಯಗಳ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ಅವರನ್ನು ಸೋಲಿಸಿ ಚಾಂಪಿಯನ್ ಆಗಿದ್ದರು. ಆದರೆ ಸಂಭ್ರಮಾಚರಣೆ ವೇಳೆ 11 ಅಭಿಮಾನಿಗಳು ಮೃತಪಟ್ಟಿದ್ದರಿಂದ ಬೆಂಗಳೂರಿನಲ್ಲಿ ಐಪಿಎಲ್ ನಡೆಸದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿತ್ತು. ಅಲ್ಲದೆ ಆರ್​ಸಿಬಿ ಕೂಡ ಬೆಂಗಳೂರಿನಲ್ಲಿ ತನ್ನ ತವರು ಪಂದ್ಯಗಳನ್ನು ನಡೆಸದಿರಲು ನಿರ್ಧರಿಸಿತ್ತು. ಆದರೆ ಕೆಎಸ್​ಸಿಎ ಹೊಸ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ತಂಡ ಕರ್ನಾಟಕ ಸರ್ಕಾರ ಹಾಗೂ ಆರ್​ಸಿಬಿ ಮ್ಯಾನೇಜ್​ಮೆಂಟ್ ಒಪ್ಪಿಸುವಲ್ಲಿ ಸಫಲವಾಗಿದ್ದು, ಐಪಿಎಲ್​ ಮೂಲಕವೇ ರದ್ದಾಗಿದ್ದ ಕ್ರಿಕೆಟ್​ ಇದೀಗ ಐಪಿಎಲ್ ಮೂಲಕವೇ ಚಿನ್ನಸ್ವಾಮಿಗೆ ಮರಳುತ್ತಿವೆ.

ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ:

  • ಮಾರ್ಚ್ 28: RCB vs ಸನ್‌ರೈಸರ್ಸ್ ಹೈದರಾಬಾದ್ – ಎಂ. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
  • ಮಾರ್ಚ್ 29: ಮುಂಬೈ ಇಂಡಿಯನ್ಸ್ vs ಕೊಲ್ಕತ್ತಾ ನೈಟ್ ರೈಡರ್ಸ್ – ವಾಂಖೇಡೆ
  • ಮಾರ್ಚ್ 30: ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಗುವಾಹಟಿ
  • ಮಾರ್ಚ್ 31: ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟನ್ಸ್ – ನ್ಯೂ ಚಂಡೀಗಡ
  • ಏಪ್ರಿಲ್ 1: ಲಕ್ನೋ ಸೂಪರ್ ಜೈಂಟ್ಸ್ vs ಆರ್‌ಸಿಬಿ – ಲಕ್ನೋ
  • ಏಪ್ರಿಲ್ 2: ಕೊಲ್ಕತ್ತಾ vs ಸನ್‌ರೈಸರ್ಸ್ ಹೈದರಾಬಾದ್ – ಕೊಲ್ಕತ್ತಾ
  • ಏಪ್ರಿಲ್ 3: ಚೆನ್ನೈ vs ಪಂಜಾಬ್ ಕಿಂಗ್ಸ್ – ಚೆನ್ನೈ
  • ಏಪ್ರಿಲ್ 4: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ – ಡೆಲ್ಲಿ
  • ಏಪ್ರಿಲ್ 4: ಗುಜರಾತ್ ಟೈಟನ್ಸ್ vs ರಾಜಸ್ಥಾನ್ ರಾಯಲ್ಸ್ – ಅಹಮದಾಬಾದ್
  • ಏಪ್ರಿಲ್ 5: ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್ – ಹೈದರಾಬಾದ್
  • ಏಪ್ರಿಲ್ 5: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ – ಬೆಂಗಳೂರು
  • ಏಪ್ರಿಲ್ 6: ಕೊಲ್ಕತ್ತಾ vs ಪಂಜಾಬ್ ಕಿಂಗ್ಸ್ – ಕೊಲ್ಕತ್ತಾ
  • ಏಪ್ರಿಲ್ 7: ರಾಜಸ್ಥಾನ್ vs ಮುಂಬೈ – ಗುವಾಹಟಿ
  • ಏಪ್ರಿಲ್ 8: ಡೆಲ್ಲಿ vs ಗುಜರಾತ್ – ಡೆಲ್ಲಿ
  • ಏಪ್ರಿಲ್ 9: ಕೊಲ್ಕತ್ತಾ vs ಲಕ್ನೋ – ಕೊಲ್ಕತ್ತಾ
  • ಏಪ್ರಿಲ್ 10: ರಾಜಸ್ಥಾನ್ vs ಆರ್‌ಸಿಬಿ – ಗುವಾಹಟಿ
  • ಏಪ್ರಿಲ್ 11: ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ನ್ಯೂ ಚಂಡೀಗಡ
  • ಏಪ್ರಿಲ್ 11: ಚೆನ್ನೈ vs ಡೆಲ್ಲಿ ಕ್ಯಾಪಿಟಲ್ಸ್ – ಚೆನ್ನೈ
  • ಏಪ್ರಿಲ್ 12: ಲಕ್ನೋ vs ಗುಜರಾತ್ – ಲಕ್ನೋ
  • ಏಪ್ರಿಲ್ 12: ಮುಂಬೈ vs ಆರ್‌ಸಿಬಿ – ಮುಂಬೈ

ಐಪಿಎಲ್ ಪ್ರೇಮಿಗಳಿಗೆ ಈ ಮೊದಲ ಹಂತದ ಪಂದ್ಯಗಳು ಕ್ರಿಕೆಟ್ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವಂತಿವೆ.

ಹಾರ್ಡ್ ಲ್ಯಾಂಡಿಂಗ್: ವಿಮಾನದ ಮುಂಭಾಗದ ಚಕ್ರಕ್ಕೆ ಹಾನಿ! ಪ್ರಯಾಣಿಕರು ಸೇಫ್

0

ಫುಕೆಟ್: ಹೈದರಾಬಾದ್‌ನಿಂದ ಫುಕೆಟ್‌ಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರ್ಡ್ ಲ್ಯಾಂಡಿಂಗ್ ಅನುಭವಿಸಿದೆ. ಇದರಿಂದ ವಿಮಾನದ ಮುಂಭಾಗದ ನೋಸ್ ಗೇರ್‌ಗೆ ಭಾರೀ ಹಾನಿಯಾಗಿದೆ.

ಬೋಯಿಂಗ್ 737 MAX 8 ವಿಮಾನದಲ್ಲಿ 133 ಪ್ರಯಾಣಿಕರು, ಇದರಲ್ಲಿ ಇಬ್ಬರು ಮಕ್ಕಳು ಹಾಗೂ 7 ಸಿಬ್ಬಂದಿ ಇದ್ದರು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ವಿಮಾನದಿಂದ ಸ್ಥಳಾಂತರಿಸಲ್ಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳು ತಿಳಿಸಿದಂತೆ, ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಮುಂಭಾಗದ ಚಕ್ರ ಮುರಿದು, ವಿಮಾನವು ರನ್‌ವೇ ಉದ್ದಕ್ಕೆ ಜಾರಿತು. ಈ ಘಟನೆಯ ನಂತರ ವಿಮಾನ ನಿಲ್ದಾಣದ ಅಧಿಕಾರಿಗಳು ರನ್‌ವೇ ಅನ್ನು ಹಲವು ಘಂಟೆಗಳ ಕಾಲ ಮುಚ್ಚಿದ್ದರು.

ತುರ್ತು ಪ್ರತಿಕ್ರಿಯೆ ತಂಡಗಳು ಸ್ಥಳಕ್ಕೆ ಧಾವಿಸಿ ವಿಮಾನದಲ್ಲಿದ್ದ ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಂಡು ಪ್ರದೇಶವನ್ನು ಸುರಕ್ಷಿತಗೊಳಿಸಿದ್ದರು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು, “ಮಾರ್ಚ್ 11ರಂದು ಹೈದರಾಬಾದ್‌ನಿಂದ ಫುಕೆಟ್‌ಗೆ ಹೋಗುವ ವಿಮಾನವು ಇಳಿಯುವಾಗ ನೋಸ್ ವೀಲ್ ಸಮಸ್ಯೆ ಅನುಭವಿಸಿತು. ಪ್ರಯಾಣಿಕರು ಎಲ್ಲಾ ಸುರಕ್ಷಿತರಿದ್ದಾರೆ” ಎಂದು ತಿಳಿಸಿದ್ದಾರೆ.

ಪ್ರಾಥಮಿಕ ತಪಾಸಣೆಯಲ್ಲಿ, ಹಾರ್ಡ್ ಲ್ಯಾಂಡಿಂಗ್ ಪರಿಣಾಮದಿಂದ ವಿಮಾನದ ನೋಸ್ ಗೇರ್‌ಗೆ ಹಾನಿ ಸಂಭವಿಸಿದ್ದುದಾಗಿ ತಿಳಿದುಬಂದಿದೆ.