Home Blog Page 9

ಢಾಬಾದಲ್ಲಿ ಯುವತಿ ಶವ ಪತ್ತೆ: ಬಾಯ್‌’ಫ್ರೆಂಡ್‌ ಅರೆಸ್ಟ್‌!

ಲಕ್ನೋ: ಢಾಬಾ ಒಂದರಲ್ಲಿ ಯುವತಿ ಶವ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಮುರಾದ್ ಪ್ರದೇಶದಲ್ಲಿ ಜರುಗಿದೆ. ಘಟನೆ ಸಂಬಂಧ ಯುವತಿಯ ಪ್ರಿಯಕರನನ್ನು ಅರೆಸ್ಟ್ ಮಾಡಿದ್ದಾರೆ. 22 ವರ್ಷದ ಅಲ್ಕಾ ಬಿಂದ್ ಮೃತದೇಹ ಗಂಟಲು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಕಾಲೇಜಿಗೆ ತೆರಳಿದ್ದ ನಾಪತ್ತೆಯಾದ ವರದಿಯಾದ ಕೆಲವೇ ಗಂಟೆಗಳ ಆಕೆಯ ಶವ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಭದೋಹಿಯಲ್ಲಿರುವ ತನ್ನ ಸಹೋದರಿಯ ಮನೆಯಿಂದ ಆರೋಪಿ ಸಹಾಬ್ ಬಿಂದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಯ ಮೊಬೈಲ್‌ ಕರೆ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆತನನ್ನು ಬಂಧಿಸಲಾಗಿದೆ . ಬಂಧಿಸುವ ವೇಳೆ, ಪೊಲೀಸರಿಂದ ಗನ್ ಕಸಿದುಕೊಂಡು ಗುಂಡು ಹಾರಿಸಲು ಪ್ರಯತ್ನಿಸಿದ್ದ. ತಕ್ಷಣ ಅವನ ಕಾಲಿಗೆ ಗುಂಡು ಹಾರಿಸಿ, ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದುವೆಯ ಒತ್ತಡ ಮತ್ತು ಪದೇ ಪದೇ ಹಣಕ್ಕಾಗಿ ಬೇಡಿಕೆ ಇಟ್ಟ ಕಾರಣ ಯುವತಿಯನ್ನು ಕೊಂದಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ಹಂತದಲ್ಲಿ ತಿಳಿದು ಬಂದಿದೆ.

ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ: ಸಚಿವ ಶಿವರಾಜ್ ತಂಗಡಗಿ

ಬಳ್ಳಾರಿ: ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ಐದು ವರ್ಷ ಇರುವ ವಿಚಾರ ಹೈಕಮಾಂಡ್​​ಗೆ ಬಿಟ್ಟದ್ದು.

ಬಿಜೆಪಿಯಂತೆ ನಮ್ಮಲ್ಲಿ ನಾಲ್ಕೈದು ಗುಂಪುಗಳಿಲ್ಲ. ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ. ಅದರ ಅವಶ್ಯಕತೆ ನನಗಿಲ್ಲ ಎಂದು ಹೇಳಿದ್ದಾರೆ. ಸಣ್ಣಪುಟ್ಟ ಹೇಳಿಕೆಯಿಂದ ಸಿಎಂ ಬದಲಾವಣೆ ಚರ್ಚೆಯಾಗಲ್ಲ. ಸಚಿವರು ಕೈಗೆ ಸಿಗಲ್ಲ ಎಂದು ಕೆಲವರ ಆರೋಪವಿದೆ.

ಇದಕ್ಕೆ ಸೂಚನೆ ಕೊಟ್ಟಿದ್ದಾರೆ. ನಾವು ಹೈಕಮಾಂಡ್​ ಹೇಳಿದ ಹಾಗೆ ಕೆಲಸ ಮಾಡ್ತೇವೆ. ಯಾರದ್ದೂ ದೂರುಗಳಿಲ್ಲ. ಕೇವಲ ಬಿ.ಆರ್.ಪಾಟೀಲ್ ಅವರ ಸಮಸ್ಯೆ ಇತ್ತು. ಅವರನ್ನು ಕರೆದು ಮಾತನಾಡಿದ್ದಾರೆ. ತಪ್ಪು ಮಾಡಿದ್ರೆ ತಿದ್ದಲು ನಮ್ಮಲ್ಲಿ ಹಿರಿಯರಿದ್ದಾರೆ, ತಿದ್ದುವವರು ಇದ್ದಾರೆ. ವಿರೋಧ ಪಕ್ಷದವರು ಮಾತನಾಡೋ ಕೆಲಸ ಮಾಡುತ್ತಾರೆ ಎಂದರು.

 

ಚಿಕ್ಕ ಗುಮಾಸ್ತನಾಗಲಿ ಗೌರವದಿಂದ ಕಾಣಬೇಕು: ರವಿಕುಮಾರ್ ಹೇಳಿಕೆ ಖಂಡಿಸಿದ ಸುರೇಶ್ ಗೌಡ

ಬೆಂಗಳೂರು: ರವಿಕುಮಾರ್ ಮಾತನಾಡಿದ್ದು ಸರಿಯಲ್ಲ. ಚಿಕ್ಕ ಗುಮಾಸ್ತನಾಗಲಿ ಗೌರವದಿಂದ ಕಾಣಬೇಕು ಎಂದು ಶಾಸಕ ಬಿ.ಸುರೇಶ್‌ ಗೌಡ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರವಿಕುಮಾರ್ ಮಾತನಾಡಿದ್ದು ಸರಿಯಲ್ಲ.

ಚಿಕ್ಕ ಗುಮಾಸ್ತನಾಗಲಿ ಗೌರವದಿಂದ ಕಾಣಬೇಕು. ಕೋಪದಲ್ಲಿ ಮಾತನಾಡಿ ಗೊಂದಲ ಮಾಡಿಕೊಳ್ಳಬಾರದು. ರವಿಕುಮಾರ್ ಮಾತನಾಡಿದರೆ ಅವರೇ ಸ್ಪಷ್ಟನೆ ಕೊಡಬೇಕು. ಅದನ್ನ ಬಿಜೆಪಿ ಹೇಳಿಕೊಟ್ಟು ಮಾತನಾಡಿಸಿದ್ದಲ್ಲ. ರವಿಕುಮಾರ್ ಹೇಳಿಕೆಯನ್ನ ಖಂಡಿಸುತ್ತೇನೆ ಎಂದಿದ್ದಾರೆ.

ಇನ್ನೂ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಿದ್ದರಾಮಯ್ಯ ಡಿವೈಎಸ್‍ಪಿ ಮೇಲೆ ಕಪಾಳ ಮೋಕ್ಷ ಮಾಡಲು ಹೋಗಿದ್ದರು. ವೇದಿಕೆಯಲ್ಲಿ ಸ್ವಾಮೀಜಿ ಪಕ್ಕ ಕುಳಿತಿದ್ದ ಐಎಎಸ್ ಅಧಿಕಾರಿಯನ್ನ ಹೊರಗೆ ಕಳುಹಿಸಿದ್ರು ಎಂದು ಸಿಎಂ ವಿರುದ್ಧವು ಅಸಮಾಧಾನ ಹೊರಹಾಕಿದ್ದಾರೆ.

 

ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ; ನಿಖಿಲ್ ಕುಮಾರಸ್ವಾಮಿ ಭಾಗಿ

ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾಎಖೇಳ್ಳಿಯ ಹೊರವಲಯದಲ್ಲಿರುವ (ಮೀನಕೇರಾ ಕ್ರಾಸ್) ವಿಜಯಲಕ್ಷ್ಮಿ ಫಂಕ್ಷನ್ ಹಾಲ್ ನಲ್ಲಿ ಗುರುವಾರ ನಡೆದ, ‘ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ’ ಯಲ್ಲಿ ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿರವರು, ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.

ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಬೆಳಗ್ಗೆ ನಡೆದ ‘ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ’ ಮುಗಿಸಿ, ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಬಂಡೆಪ್ಪ ಖಾಶೆಂಪುರ್ ರವರ ನಿವಾಸದಲ್ಲಿ ಮಧ್ಯಾಹ್ನದ ಊಟ ಮುಗಿಸಿದ ನಿಖಿಲ್ ಕುಮಾರಸ್ವಾಮಿರವರು ಸಂಜೆಯ ವೇಳೆಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾಎಖೇಳ್ಳಿಯ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದರು.

ವೇದಿಕೆ ಕಾರ್ಯಕ್ರಮಕ್ಕೆ ತೆರಳುವ ಮೊದಲು ಅವರು, ಮನ್ನಾಎಖೇಳ್ಳಿಯ ಹೊರವಲಯದಲ್ಲಿರುವ ಪ್ರಸಿದ್ಧ ದೇವಸ್ಥಾನವಾಗಿರುವ ಶ್ರೀ ಬಾಲಮ್ಮ ದೇವಿಯ ಮಂದಿರಕ್ಕೆ ಭೇಟಿ ನೀಡಿ, ಬಾಲಮ್ಮ ತಾಯಿಯ ದರ್ಶನ ಪಡೆದರು. ಅಲ್ಲಿಂದ ವೇದಿಕೆ ಕಾರ್ಯಕ್ರಮದ ಸ್ಥಳಕ್ಕೆ ರ್ಯಾಲಿಯಲ್ಲಿ ತೆರಳಬೇಕಾಗಿದ್ದ ನಿಖಿಲ್ ಕುಮಾರಸ್ವಾಮಿರವರು ಮಳೆಯ ಕಾರಣದಿಂದಾಗಿ ಕಾರ್ ನಲ್ಲೇ ವೇದಿಕೆ ಕಾರ್ಯಕ್ರಮದ ಕಡೆಗೆ ಸಾಗಿದರು.

ಈ ವೇಳೆ ಜಿಟಿಜಿಟಿ ಮಳೆಯೇ ನಡುವೆಯೇ ಮಾರ್ಗ ಮಧ್ಯದಲ್ಲಿ ಅನೇಕ ಕಡೆಗಳಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ನಾಯಕರಿಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಜೆಸಿಬಿಗಳ ಮೂಲಕ ಬೃಹತ್ ಗಾತ್ರದ ಹಾರಗಳನ್ನು ಹಾಕಿ, ಹೂಮಳೆ ಸುರಿಸಿ, ಹೆಚ್.ಡಿ ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಬಂಡೆಪ್ಪ ಖಾಶೆಂಪುರ್ ಸೇರಿದಂತೆ ಜೆಡಿಎಸ್ ಪಕ್ಷದ ನಾಯಕರ ಪರವಾಗಿ ಜಯ ಘೋಷ ಮೊಳಗಿಸಿದರು.

ನಂತರ ನಿಖಿಲ್ ಕುಮಾರಸ್ವಾಮಿ, ಬಂಡೆಪ್ಪ ಖಾಶೆಂಪುರ್, ರಮೇಶ್ ಪಾಟೀಲ್ ಸೋಲ್ಪೂರ್ ಸೇರಿದಂತೆ ಜೆಡಿಎಸ್ ಪಕ್ಷದ ನಾಯಕರು, ಮುಖಂಡರು ಜ್ಯೋತಿ ಬೆಳಗಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದುದ್ದಕ್ಕೂ ಜೆಡಿಎಸ್ ನಾಯಕರಿಗೆ ಶಾಲು, ದೊಡ್ಡ ದೊಡ್ಡ ಹಾರಗಳನ್ನು ಹಾಕಿ, ಸನ್ಮಾನಿಸಿ ಗೌರವಿಸಿದ ಮುಖಂಡರು, ಕಾರ್ಯಕರ್ತರು, ತಮ್ಮ ಪಕ್ಷದ ನಾಯಕರ ಪರವಾಗಿ ಜಯ ಘೋಷ ಮೊಳಗಿಸಿದರು. ಕಾರ್ಯಕ್ರಮದ ನಂತರ ನಿಖಿಲ್ ಕುಮಾರಸ್ವಾಮಿರವರು ಮನ್ನಾಎಖೇಳ್ಳಿಯಲ್ಲಿರುವ ಜೆಡಿಎಸ್ ಮುಖಂಡರಾದ ಸಂತೋಷ ರಾಸೂರ್ ರವರ ಮನೆಗೆ ಭೇಟಿ ನೀಡಿದರು.

ವೇದಿಕೆ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲ್ಪೂರ್, ಬೀದರ್ ದಕ್ಷಿಣ ಜೆಡಿಎಸ್ ಅಧ್ಯಕ್ಷ ಸಂಜುರೆಡ್ಡಿ ನಿರ್ಣಾ, ಮಾಜಿ ಶಾಸಕರಾದ ನಾಗಮಂಗಲದ ಸುರೇಶ್ ಗೌಡ, ಬಸವಕಲ್ಯಾಣದ ಮಲ್ಲಿಕಾರ್ಜುನ್ ಖೂಬಾ, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಐಲಿಂಜಾನ್ ಮಠಪತಿ, ಸಂತೋಷ ರಾಸೂರ್, ಶಾಂತಲಿಂಗ ಸಾವಳಗಿ, ರಾಜಶೇಖರ್ ಜವಳೆ, ಅಶೋಕ್ ಕೊಡ್ಗೆ, ಮನೋಹರ್ ದಂಡಿ, ಶಿವರಾಜ ಹುಲಿ, ಬಸವರಾಜ್ ಪಾಟೀಲ್ ಹಾರೂರಗೇರಿ, ಮಹಮ್ಮದ್ ಅಶೋದೊದ್ದೀನ್, ಸಜ್ಜದ್ ಸಾಹೇಬ್, ಸಿದ್ರಾಮಪ್ಪ ವಂಕ್ಕೆ, ಮಲ್ಲಿಕಾರ್ಜುನ ನೆಳ್ಗೆ, ಅಭಿ ಕಾಳೆ, ಸುದರ್ಶನ್ ಸುಂದದರಾಜ್, ಜಾಫೇಡ್ ಕಡ್ಯಾಳ, ಶಂಕರ್ ರವರು ಸೇರಿದಂತೆ ಅನೇಕರಿದ್ದರು.

ರಕ್ತಕ್ಕೆ ರಕ್ತವೇ ಉತ್ತರವಾಗಬೇಕು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸ್ಟೇಟಸ್ ಹಾಕಿದ್ದ ಯುವಕ ಅರೆಸ್ಟ್!

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸ್ಟೇಟಸ್ ಹಾಕಿದ್ದ ಯುವಕನನ್ನು ಇದೀಗ ಅರೆಸ್ಟ್ ಮಾಡಲಾಗಿದೆ.

ಕರಾವಳಿಯಲ್ಲಿ ಕೋಮು ಸಂಘರ್ಷವನ್ನು ತಡೆಗಟ್ಟಲು ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಫುಲ್ ಆ್ಯಕ್ಟೀವ್ ಆಗಿದ್ದು, ಪ್ರಚೋದನಾಕಾರಿ ಪೋಸ್ಟ್ ಹಾಕುವವರನ್ನು ಬೆನ್ನಟ್ಟಿ ಬೆಂಡೆತ್ತುತ್ತಿದೆ. “ರಕ್ತಕ್ಕೆ ರಕ್ತವೇ ಬೇಕು” ಎಂದು ಸ್ಟೇಟಸ್ ಹಾಕಿದವನು ಬಂಧಿಸಿದೆ.

ಉಡುಪಿ ಜಿಲ್ಲೆಯ ಕಾರ್ಕಳ, ಇರ್ವತ್ತೂರು ಗ್ರಾಮದ ಆಶಿಕ್ ಎಸ್ ಕೋಟ್ಯಾನ್​​ ಎಂಬಾತನನ್ನು ಸ್ಪೆಷಲ್ ಆ್ಯಕ್ಷನ್ ಫೋರ್ಸ್​ ಬಂಧಿಸಿದೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ನಮಗೆ ಯಾವುದೇ ರೀತಿಯ ಉತ್ತರಗಳು ಬೇಡ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು”. “ಜೀವಕ್ಕೆ ಜೀವನೇ ಬೇಕು” ಎಂದು ಮಾರಕಾಯುಧಗಳ ಚಿಹ್ನೆ ಬಳಸಿ ಪ್ರಚೋದನಕಾರಿ ಸ್ಟೇಟಸ್ ಹಾಕಿದ್ದ.

ಈ ಹಿನ್ನಲೆ ಆರೋಪಿ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, BNS ಕಲಂ.196, 353(2),351(3) ಯಡಿ ಎಫ್​ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪಾದಚಾರಿ ಬಾಲಕನ ಮೇಲೆ ಹರಿದ ಕಾರು: ಸ್ಥಳದಲ್ಲೇ ದುರ್ಮರಣ!

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ 10ರ ಬಾಲಕನ ಕಾರು ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

ಅಗಸ್ತ್ಯ ಕನಮಡಿ (10) ಮೃತ ದುರ್ದೈವಿ ಬಾಲಕ. ಈತ ಅಥಣಿ ತಾಲೂಕಿನ ರಡ್ಡೆರಟ್ಟಿ ಗ್ರಾಮದ ನಿವಾಸಿ ಎನ್ನಲಾಗಿದೆ. ಮೃತ ಬಾಲಕ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಕಾರೊಂದು ಬಾಲಕನ ಮೇಲೆ ಹರಿದು ಹೋಗಿದೆ.

ಪರಿಣಾಮ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದು, ಸಿಸಿಟಿವಿ ಆಧಾರದ ಮೇಲೆ ಆರೋಪಿ ರಾಹುಲ್ ಹುಂಡೇಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮದುವೆಯಾಗದ ಭಾವನಾ ರಾಮಣ್ಣ ಈಗ 6 ತಿಂಗಳ ಗರ್ಭಿಣಿ: ಅವಳಿ ಮಕ್ಕಳಿಗೆ ಜನ್ಮ ನೀಡಲಿರುವ ನಟಿ

ಕನ್ನಡ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ತಮ್ಮ 40ನೇ ವಯಸ್ಸಿನಲ್ಲಿ ಒಂಟಿಯಾಗಿ ತಾಯಿಯಾಗಲು ರೆಡಿಯಾಗಿದ್ದಾರೆ. ಐವಿಎಫ್‌ ಮೂಲಕ ಗರ್ಭಿಣಿಯಾಗಿರುವ ಭಾವನಾ ಸದ್ಯ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ ನಟಿ ಭಾವನಾ ರಾಮಣ್ಣ.

ತಾವು ತಾಯಿಯಾಗುತ್ತಿರುವ ಬಗ್ಗೆ ಮಾತನಾಡಿರುವ ನಟಿ ಭಾವನಾ ರಾಮಣ್ಣ, ತಾನು ಬಾಲ್ಯದಿಂದಲೂ ಮಕ್ಕಳ ಜೊತೆಗಿರುವುದನ್ನು ಇಷ್ಟಪಡುತ್ತಿದ್ದೆ. ಆದರೆ ತಮ್ಮ 20ನೇ ವಯಸ್ಸಿನಲ್ಲಿ ತಾಯಿಯಾಗುವ ಯೋಚನೆ ಗಂಭೀರವಾಗಿ ತಟ್ಟಿರಲಿಲ್ಲ. 30ನೇ ವಯಸ್ಸಿನಲ್ಲಿ ಪ್ರೀತಿಯ ಆಕಾಂಕ್ಷೆಯಿದ್ದರೂ, ತಾಯಿಯಾಗುವ ಬಗ್ಗೆ ಯೋಚನೆ ಮಾಡಿರಲಿಲ್ಲ. “ನಾನು ಯಾವಾಗಲೂ ಮಕ್ಕಳ ಸುತ್ತಲಿರುವ ವಾತಾವರಣದಲ್ಲಿ ಬೆಳೆದೆ. ನನ್ನ ತಂದೆ-ತಾಯಿ, ಮೂವರು ಸಹೋದರ-ಸಹೋದರಿಯರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತುಂಬಿದ ಮನೆಯಲ್ಲಿ ಬೆಳೆದೆ. ಆದರೆ 40 ತಲುಪಿದಾಗ ತಾಯಿಯಾಗಬೇಕೆಂಬ ಕರೆಯನ್ನು ತಡೆಯಲಾಗಲಿಲ್ಲ” ಎಂದಿದ್ದಾರೆ.

ತಾಯಿಯಾಗುವ ತಮ್ಮ ಆಸೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಪೂರೈಸಲು ಮೊದಲು ಯೋಚಿಸಿದೆ. ಆದರೆ ಅದು ಸಾಧ್ಯವಾಗದಿದ್ದಾಗ ಸಹಾಯಕ ಗರ್ಭಧಾರಣೆ ಕಡೆಗೆ ಗಮನ ಹರಿಸಿದರು. ಆದರೆ, ಈ ದಾರಿಯೂ ಸುಲಭವಾಗಿರಲಿಲ್ಲ. ಒಂಟಿ ಮತ್ತು ಅವಿವಾಹಿತ ಮಹಿಳೆಯಾಗಿ ಐವಿಎಫ್‌ ಚಿಕಿತ್ಸೆ ಪಡೆಯಲು ಹಲವು ಅಡೆತಡೆಗಳನ್ನು ಎದುರಿಸಿದೆ. “ನನ್ನ ಮಕ್ಕಳಿಗೆ ತಂದೆ ಇರದಿರಬಹುದು, ಆದರೆ ಅವರು ದಯಾಳು ಪುರುಷರ ಸುತ್ತಲಿರುತ್ತಾರೆ” ಎಂದಿದ್ದಾರೆ.

ನಮ್ಮ ಮನೆ ಬಳಿ ಇರುವ ಕ್ಲಿನಿಕ್‌ ಹೋಗಿ ಅಲ್ಲಿ ಚಿಕಿತ್ಸೆ ಪಡೆದೆ. ವೈದ್ಯರು ನನಗೆ ತುಂಬ ಸಲಹೆ ಕೊಟ್ಟರು. ಮೊದಲ ಪ್ರಯತ್ನದಲ್ಲೇ ನಾನು ತಾಯಿಯಾಗಿರೋದು ಖುಷಿ ಕೊಟ್ಟಿದೆ. ನಾನು ತಾಯಿ ಆಗ್ತಿದೀನಿ ಅಂತ ಗೊತ್ತಾದಾಗ ನನ್ನ ತಂದೆ ತುಂಬ ಖುಷಿಪಟ್ಟರು. ನೀನು ಮಹಿಳೆ, ನಿನಗೆ ತಾಯಿ ಆಗುವ ಹಕ್ಕಿದೆ ಎಂದು ನನ್ನ ತಂದೆ ಹೇಳಿದ್ದಾರೆ. ನನ್ನ ಕನಸು, ಆಸೆಗೆ ನನ್ನ ತಂದೆ, ಒಡಹುಟ್ಟಿದವರು ಬೆಂಬಲ ನೀಡಿದ್ದಾರೆ. ಇನ್ನೂ ಕೆಲವರು ಇದರ ಬಗ್ಗೆ ಪ್ರಶ್ನೆ ಮಾಡುತ್ತಾರೆ, ಏನೂ ಮಾಡಲು ಸಾಧ್ಯವಿಲ್ಲ. ನನ್ನನ್ನು ನೋಡಿ ಓರ್ವ ಮಹಿಳೆಗೆ ಪ್ರೇರಣೆ ಸಿಕ್ಕಿ, ಆಕೆ ನಾನು ಜೀವನದಲ್ಲಿ ಒಂಟಿಯಲ್ಲ ಎಂದು ಯೋಚಿಸಿದರೆ ಅದುವೇ ನನ್ನ ಜಯ ಎಂದುಕೊಳ್ಳುತ್ತೇನೆ ಎಂದು ಭಾವನಾ ಹೇಳಿದ್ದಾರೆ.

ಹಾಸನದಲ್ಲಿ ನಿಲ್ಲದ ಹೃದಯಾಘಾತ ಪ್ರಕರಣಗಳು: ಹಾರ್ಟ್ ಅಟ್ಯಾಕ್’ಗೆ ಮಹಿಳೆ ಸಾವು..!

ಹಾಸನ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಜಸ್ಟ್​​ 40 ದಿನಗಳಲ್ಲಿ ಹೃದಯಾಘಾತದಿಂದ ಹಲವಾರು ಮಂದಿ ಬಲಿಯಾಗಿದ್ದಾರೆ. ಇದೀಗ ಹೃದಯಾಘಾತದಿಂದ ಮತ್ತೋರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಹಾಸನ ನಗರದ ದಾಸರಕೊಪ್ಪಲಿನಲ್ಲಿ ನಡೆದಿದೆ.

ಬಿ.ಎನ್.ವಿಮಲಾ (55) ಹೃದಯಾಘಾತದಿಂದ ಮೃತಪಟ್ಟ ಗೃಹಿಣಿಯಾಗಿದ್ದು, ಬಿ.ಎನ್.ವಿಮಲಾ ಸಕಲೇಶಪುರ ತೋಟದಗದ್ದೆ ಗ್ರಾಮದ ಕುಮಾರ್ ಎಂಬುವವರ ಪತ್ನಿಯಾಗಿದ್ದು, ನಿನ್ನೆ ರಾತ್ರಿ ಮನೆಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಳೆದ ಒಂದೂವರೆ ತಿಂಗಳಿನಲ್ಲಿ 35 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳು ಆತಂಕ ಸೃಷ್ಟಿಸಿವೆ. ಇದರ ಬಗ್ಗೆ ನಾನಾ ಚರ್ಚೆಗಳು ಶುರುವಾಗಿವೆ. ಹಠಾತ್ ನಿಧನಕ್ಕೆ ಏನು ಕಾರಣ ಎಂಬುದನ್ನು ಹೇಳಲು ರಾಜ್ಯ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಅಂತ ನಾನು ನಂಬಿದ್ದೇನೆ: ಡಿಕೆ ಶಿವಕುಮಾರ್

ಮೈಸೂರು: ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಅಂತ ನಾನು ನಂಬಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಚಾಮುಂಡಿ ದರ್ಶನ ಪಡೆದ ನಂತರ ಮಾತನಾಡಿದ ಅವರು,

ಯಾವುದೇ ಕೆಲಸ ಆರಂಭಿಸುವ ಮೊದಲು ಚಾಮುಂಡಿ ತಾಯಿಗೆ ಸಲ್ಲಿಸುವುದು ನಮ್ಮಲ್ಲಿರುವ ಪದ್ಧತಿ, ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಅಂತ ನಾನು ನಂಬಿದ್ದೇನೆ, ನನಗೇನು ಬೇಕೋ ಅದನ್ನು ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ ಎಂದರು.

ಇನ್ನು ನನಗೆ ಏನು ಬೇಕು ಅನ್ನೋದನ್ನ ನಾನು ದೇವರ ಬಳಿ ಪ್ರಾರ್ಥನೆ ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ನಮಗೆ ಬುದ್ಧಿವಾದ ಹೇಳಿದ್ದಾರೆ. ಹೈಕಮಾಂಡ್ ಕೂಡ ಕೆಲ ವಿಚಾರದ ಕುರಿತು ಚರ್ಚೆ ಮಾಡಿದೆ. ದೇವಸ್ಥಾನದಲ್ಲಿ ರಾಜಕೀಯ ಚರ್ಚೆ ಬೇಡ ಎಂದು ಹೇಳಿದ್ದಾರೆ.

ರವಿಕುಮಾರ್ ವಿವಾದಾತ್ಮಕ ಹೇಳಿಕೆ ವಿಚಾರ: ಐಎಎಸ್ ಅಸೋಸಿಯೇಷನ್ ದೂರಿಗೆ ವಿಜಯೇಂದ್ರ ಆಕ್ಷೇಪ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ಯ ಎಮ್‌ಎಲ್‌ಸಿ ರವಿಕುಮಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂಬ ಆರೋಪ ಭಾರೀ ಚರ್ಚೆಗೆ ಗುರಿಯಾಗಿದೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,

ಈಗಾಗ್ಲೇ ಎಂಎಲ್ಸಿ ರವಿಕುಮಾರ್ ಅವರು ಅವರ ಹೇಳಿಕೆಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ‌. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಸೋಸಿಯೇಷನ್ ನವರು ಸಿಎಂಗೆ ದೂರು ಕೊಟ್ಟಿದ್ದಾರೆ‌‌. ಆದರೆ ಖುದ್ದು ಸಿಎಂ ಅವರೇ ಸಾರ್ವಜನಿಕ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ನಡೆದುಕೊಂಡಾಗ ಆಗ ಎಲ್ಲಿ‌ ಹೋಗಿದ್ವು ಈ ಅಸೋಸಿಯೇಷನ್ ಗಳು.? ಎಂದು ಪ್ರಶ್ನಿಸಿದ್ದಾರೆ. ಸಿಎಂ ವಿರುದ್ಧ ಯಾಕೆ ದೂರು ನೀಡಿರಲಿಲ್ಲ ಎಂದಿದ್ದಾರೆ.

 

error: Content is protected !!