ಬೆಳಗಾವಿ:- ಮಕ್ಕಳ ಪೋಷಕರು ಇದು ನೋಡಲೇಬೇಕಾದ ಸ್ಟೋರಿ. ನಿಮ್ಮ ಮಕ್ಕಳ ಮೇಲೆ ಎಷ್ಟೇ ನಿಗಾ ಇಟ್ಟರೂ ಸಾಲಲ್ಲ. ಜಿಲ್ಲೆಯ ಕಳ್ಳರ ಗ್ಯಾಂಗ್ ಫುಲ್ ಆ್ಯಕ್ಟೀವ್ ಆಗಿದೆ.
Advertisement
ಜಿಲ್ಲೆಯ ಅಥಣಿಯ ಸ್ವಾಮಿ ಫ್ಲಾಟ್ನಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಖದೀಮರು ಕಿಡ್ನ್ಯಾಪ್ ಮಾಡಿರುವಂತಹ ಘಟನೆ ಜರುಗಿದೆ.
ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ವಿಜಯ್ ದಂಪತಿಯ ಮಕ್ಕಳಾದ ಸ್ವಸ್ತಿ ದೇಸಾಯಿ, ವಿಯೋಮ್ ದೇಸಾಯಿ ಅನ್ನು ಅಪಹರಿಸಿದ್ದಾರೆ.
ಇಬ್ಬರು ಮಕ್ಕಳು ಎಲ್‌ಕೆಜಿ ಶಾಲೆಗೆ ಹೋಗಿ ಮನೆಗೆ ಬಂದಿದ್ದರು. ಮನೆಯಲ್ಲಿ ಅಜ್ಜಿ ಮಾತ್ರ ಇರೋದನ್ನ ಗಮನಿಸಿದ ಖದೀಮರು ಕೃತ್ಯವೆಸಗಿದ್ದಾರೆ. ಮಕ್ಕಳನ್ನು ಅಪಹರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.