ವಿಜಯನಗರ : ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಖತರ್ನಾಕ್ ಕಳ್ಳನನ್ನು ಹೆಡೆಮುರಿ ಕಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಬೆಟಗೆರೆ ಗ್ರಾಮದ ಪ್ರವೀಣ್(38) ಬಂಧಿತ ಆರೋಪಿಯಾಗಿದ್ದು, ಕಳೆದ 18 ವರ್ಷಗಳಿಂದ ಹೊಸಪೇಟೆಯ ಸಾಯಿ ಸದನ ಅಪಾರ್ಟ್ಮೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು.
Advertisement
ಅದೇ ಅಪಾರ್ಟೆಂಟ್ ನಿವಾಸಿ ಜ್ಯೋತಿ ಎನ್ನುವವರ ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ಹೊಂಚು ಹಾಕಿ ಸುಮಾರು 5 ಲಕ್ಷ 15 ಸಾವಿರ ಬೆಲೆಬಾಳುವ ಬಂಗಾರ ಹಾಗೂ ನಗದು ಕಳ್ಳತನ ಮಾಡಿದ್ದನು.ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, DYSP ಮಂಜುನಾಥ್ ತಳವಾರ್ ,
CPI ಲಖನಗ ಮಸಗುಪ್ಪಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿ ವಿರುದ್ಧ ಹೊಸಪೇಟೆಯ ಪಟ್ಟಣ ಠಾಣೆಯಲ್ಲಿ ಆರೋಪಿ ವಿರುದ್ದ ಪ್ರಕರಣ ಸೆಕ್ಸನ್ 193, 331(4) ಅಡಿ ಪ್ರಕರಣ ದಾಖಲು ಮಾಡಲಾಗಿದೆ.