• About
  • Advertise
  • Privacy & Policy
  • Contact
Friday, November 13, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Bengaluru News

ಗುಲಾಬಿ ಮಾರ್ಗದ ಉದ್ಘಾಟನೆಗೂ ಮುನ್ನ ರಾಜಕೀಯ ಕಾವು; ಮೆಟ್ರೋ ಹಾದಿಯುದ್ದಕ್ಕೂ ಫ್ಲೆಕ್ಸ್‌ಗಳ ಅಬ್ಬರ

Vijaya Sakshi News Desk by Vijaya Sakshi News Desk
November 13, 2026
in Bengaluru News
ಗುಲಾಬಿ ಮಾರ್ಗದ ಉದ್ಘಾಟನೆಗೂ ಮುನ್ನ ರಾಜಕೀಯ ಕಾವು; ಮೆಟ್ರೋ ಹಾದಿಯುದ್ದಕ್ಕೂ ಫ್ಲೆಕ್ಸ್‌ಗಳ ಅಬ್ಬರ
0
SHARES
1
VIEWS
Share on Facebook

ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.

ನಗರದ ಜನರು ಹೊಸ ಮೆಟ್ರೋ ಮಾರ್ಗದ ಸಂಚಾರಕ್ಕೆ ಕಾಯುತ್ತಿದ್ದರೆ, ಇತ್ತ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮಾತ್ರ ತಮ್ಮ ನಾಯಕರನ್ನು ಸ್ವಾಗತಿಸುವ ಭರದಲ್ಲಿ ಪೈಪೋಟಿಗೆ ಇಳಿದಿದ್ದಾರೆ. ಮೆಟ್ರೋ ಮಾರ್ಗದುದ್ದಕ್ಕೂ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಫ್ಲೆಕ್ಸ್‌ಗಳು, ಪಕ್ಷದ ಬಾವುಟಗಳು ಹಾಗೂ ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿರುವ ಹಿನ್ನೆಲೆಯಲ್ಲಿ ಡೈರಿ ಸರ್ಕಲ್‌ನಿಂದ ಮಾರ್ಗದುದ್ದಕ್ಕೂ ಸ್ವಾಗತದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಫ್ಲೆಕ್ಸ್‌ಗಳನ್ನು ಹಾಕಿದ್ದರೆ, ಪ್ರಧಾನಿ ಮೋದಿ ಅವರ ಪರವಾಗಿ ಬಿಜೆಪಿ ಕಾರ್ಯಕರ್ತರು ಸ್ವಾಗತ ಕೋರುವ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ರಸ್ತೆಯುದ್ದಕ್ಕೂ ಪಕ್ಷದ ಬಾವುಟಗಳನ್ನು ಅಳವಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಬಂಟಿಂಗ್ಸ್‌ಗಳನ್ನು ಹಾಕಿದ್ದಾರೆ. ಹೀಗೆ ಮೆಟ್ರೋ ಮಾರ್ಗದಲ್ಲಿ ಯಾವ ಕಡೆ ನೋಡಿದರೂ ರಾಜಕೀಯ ನಾಯಕರ ಫೋಟೋಗಳೇ ಕಾಣಿಸುತ್ತಿವೆ.

ಈ ಹಿಂದೆ ಮೆಟ್ರೋ ಯೋಜನೆಯ ಕ್ರೆಡಿಟ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಇದೀಗ ಉದ್ಘಾಟನೆಯ ಸ್ವಾಗತದ ವಿಚಾರದಲ್ಲೂ ಉಭಯ ಪಕ್ಷಗಳ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇದರಿಂದ ಗುಲಾಬಿ ಮಾರ್ಗದ ಉದ್ಘಾಟನೆಗೂ ಮುನ್ನವೇ ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಬೆಂಗಳೂರಿನ ಮೆಟ್ರೋ ಜಾಲಕ್ಕೆ ಹೊಸ ಮೈಲಿಗಲ್ಲು:

ಇನ್ನು ನಮ್ಮ ಮೆಟ್ರೋ ಆರಂಭವಾಗಿ ಸುಮಾರು 15 ವರ್ಷಗಳು ಕಳೆದಿವೆ. 2011ರ ಅಕ್ಟೋಬರ್ 20ರಂದು ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗೆ 6.7 ಕಿ.ಮೀ. ಉದ್ದದ ನೇರಳೆ ಮಾರ್ಗದಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲು ಸಂಚಾರ ಆರಂಭಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಹಂತ ಹಂತವಾಗಿ ವಿಸ್ತರಣೆಗೊಂಡಿರುವ ಮೆಟ್ರೋ ಜಾಲ ಇದೀಗ 96.1 ಕಿ.ಮೀ. ಉದ್ದಕ್ಕೆ ತಲುಪಿದೆ.

ಈಗ ಗುಲಾಬಿ ಮಾರ್ಗದ ಹೊಸ ವಿಭಾಗಗಳ ಸೇರ್ಪಡೆಯೊಂದಿಗೆ ಮೆಟ್ರೋ ಜಾಲದ ಒಟ್ಟು ಉದ್ದ 103 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಇದರಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಅನುಕೂಲವಾಗುವ ನಿರೀಕ್ಷೆಯಿದೆ.

ಯಾವ ಮಾರ್ಗ ಎಷ್ಟು ಉದ್ದವಿದೆ?

ಬೆಂಗಳೂರಿನಲ್ಲಿ ಸದ್ಯ ನಾಲ್ಕು ಪ್ರಮುಖ ಮೆಟ್ರೋ ಮಾರ್ಗಗಳಿವೆ.

  • ನೇರಳೆ ಮಾರ್ಗ: ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟದವರೆಗೆ 43.49 ಕಿ.ಮೀ.
  • ಹಸಿರು ಮಾರ್ಗ: ಮದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ 33.46 ಕಿ.ಮೀ.
  • ಹಳದಿ ಮಾರ್ಗ: ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ.
  • ಗುಲಾಬಿ ಮಾರ್ಗ: ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.26 ಕಿ.ಮೀ.

ಗುಲಾಬಿ ಮಾರ್ಗದಲ್ಲಿ 13.76 ಕಿ.ಮೀ. ಸುರಂಗ ಮಾರ್ಗವಿದ್ದರೆ, 7.5 ಕಿ.ಮೀ. ಎತ್ತರಿಸಿದ ಮಾರ್ಗವಿದೆ. ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯವರೆಗಿನ ಎತ್ತರಿಸಿದ ಮಾರ್ಗವೂ ಇದರ ಭಾಗವಾಗಿದೆ.

ಇಂದು ಗುಲಾಬಿ ಮಾರ್ಗದ ಮೆಟ್ರೋ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ನವೆಂಬರ್ 14ರಿಂದ ಸಾರ್ವಜನಿಕರು ಪ್ರಯಾಣಿಸಬಹುದಾಗಿದೆ. ಹೊಸ ಮಾರ್ಗದಿಂದ ಬೆಂಗಳೂರಿನ ಪ್ರಮುಖ ಪ್ರದೇಶಗಳ ನಡುವಿನ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ ಎಂಬ ನಿರೀಕ್ಷೆಯಿದೆ. ಒಂದು ಕಡೆ ಮೆಟ್ರೋ ವಿಸ್ತರಣೆಯ ಸಂಭ್ರಮವಾದರೆ, ಮತ್ತೊಂದೆಡೆ ನಾಯಕರ ಸ್ವಾಗತದ ಹೆಸರಿನಲ್ಲಿ ರಾಜಕೀಯ ಪಕ್ಷಗಳ ಶಕ್ತಿ ಪ್ರದರ್ಶನವೂ ಜೋರಾಗಿದೆ.

Tags: Bangalore MetrokannadanewsKarnatakaMetro InaugurationNamma Metronarendra modiPink LineVijayasakshivijayasakshinews
ShareSendShare
Previous Post

ಹಾಸನಾಂಬ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಪತ್ತೆ: ಒಟ್ಟು ಆದಾಯ ಎಷ್ಟು ಕೋಟಿ ಗೊತ್ತಾ?

Next Post

ಹೈದರಾಬಾದ್‌ನಿಂದ ವಿದೇಶದವರೆಗೂ ಕಾವ್ಯಾ ಮಾರನ್ ಕ್ರಿಕೆಟ್ ಸಾಮ್ರಾಜ್ಯ! ಯಾವೆಲ್ಲ ದೇಶಗಳಲ್ಲಿ ಇವರ ತಂಡಗಳಿವೆ ಗೊತ್ತಾ?

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಹೈದರಾಬಾದ್‌ನಿಂದ ವಿದೇಶದವರೆಗೂ ಕಾವ್ಯಾ ಮಾರನ್ ಕ್ರಿಕೆಟ್ ಸಾಮ್ರಾಜ್ಯ! ಯಾವೆಲ್ಲ ದೇಶಗಳಲ್ಲಿ ಇವರ ತಂಡಗಳಿವೆ ಗೊತ್ತಾ?

ಹೈದರಾಬಾದ್‌ನಿಂದ ವಿದೇಶದವರೆಗೂ ಕಾವ್ಯಾ ಮಾರನ್ ಕ್ರಿಕೆಟ್ ಸಾಮ್ರಾಜ್ಯ! ಯಾವೆಲ್ಲ ದೇಶಗಳಲ್ಲಿ ಇವರ ತಂಡಗಳಿವೆ ಗೊತ್ತಾ?

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ: ₹15,600 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಪಿಂಕ್ ಮೆಟ್ರೋ ಉದ್ಘಾಟನೆ

ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ: ₹15,600 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಪಿಂಕ್ ಮೆಟ್ರೋ ಉದ್ಘಾಟನೆ

November 13, 2026
ತಿಂಗಳುಗಟ್ಟಲೆ ಒಂದೇ ಟೂತ್‌ಬ್ರಷ್ ಬಳಸುತ್ತಿದ್ದೀರಾ? ಹಾಗಾದರೆ ಈ ಮಾಹಿತಿ ತಿಳಿಯಲೇಬೇಕು

ತಿಂಗಳುಗಟ್ಟಲೆ ಒಂದೇ ಟೂತ್‌ಬ್ರಷ್ ಬಳಸುತ್ತಿದ್ದೀರಾ? ಹಾಗಾದರೆ ಈ ಮಾಹಿತಿ ತಿಳಿಯಲೇಬೇಕು

November 13, 2026
ಬಿಯರ್ ಬೆಲೆ ಏರಿಕೆ: ಮದ್ಯ ಪ್ರಿಯರಿಗೆ ಕಷ್ಟ, ಮಾರಾಟದಲ್ಲಿ 20% ಇಳಿಕೆ!

ಕರ್ನಾಟಕದಲ್ಲಿ ಮದ್ಯ ಸೇವನೆ ಪ್ರಮಾಣ ಇಳಿಕೆ; ಸರ್ಕಾರದ ಅಬಕಾರಿ ಆದಾಯ ಮಾತ್ರ ಭರ್ಜರಿ ಏರಿಕೆ!

November 13, 2026
ವಕೀಲ ಮಂಜುನಾಥ್ ಶೂಟೌಟ್ ಪ್ರಕರಣ; ಒಂದು ತಿಂಗಳ ಬಳಿಕ ಬಿಹಾರದಲ್ಲಿ ಪ್ರಮುಖ ಆರೋಪಿ ಅರೆಸ್ಟ್!

ವಕೀಲ ಮಂಜುನಾಥ್ ಶೂಟೌಟ್ ಪ್ರಕರಣ; ಒಂದು ತಿಂಗಳ ಬಳಿಕ ಬಿಹಾರದಲ್ಲಿ ಪ್ರಮುಖ ಆರೋಪಿ ಅರೆಸ್ಟ್!

November 13, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ: ₹15,600 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಪಿಂಕ್ ಮೆಟ್ರೋ ಉದ್ಘಾಟನೆ

ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ: ₹15,600 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಪಿಂಕ್ ಮೆಟ್ರೋ ಉದ್ಘಾಟನೆ

November 13, 2026
ತಿಂಗಳುಗಟ್ಟಲೆ ಒಂದೇ ಟೂತ್‌ಬ್ರಷ್ ಬಳಸುತ್ತಿದ್ದೀರಾ? ಹಾಗಾದರೆ ಈ ಮಾಹಿತಿ ತಿಳಿಯಲೇಬೇಕು

ತಿಂಗಳುಗಟ್ಟಲೆ ಒಂದೇ ಟೂತ್‌ಬ್ರಷ್ ಬಳಸುತ್ತಿದ್ದೀರಾ? ಹಾಗಾದರೆ ಈ ಮಾಹಿತಿ ತಿಳಿಯಲೇಬೇಕು

November 13, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper