ವಿಜಯಸಾಕ್ಷಿ ಸುದ್ದಿ, ಗದಗ : ಬಿಜೆಪಿಯ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ರಾಜ್ಯಸಭೆ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಗೊಂಡ ಕಾಂಗ್ರೆಸ್‌ನ ನಾಸಿರ್ ಹುಸೇನ್ ವಿಧಾನಸಭೆಯಲ್ಲಿ ಸಂಭ್ರಮಿಸುತ್ತಿರುವಾಗ ಅವರ ಬೆಂಬಲಿಗರು `ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದು, ಕಾಂಗ್ರೆಸ್ ಆಡಳಿತ ಬಂದಾಗಿನಿಂದ ದೇಶದ್ರೋಹದ ಕೃತ್ಯಗಳನ್ನು ಎಸಗುತ್ತಾ ರಾಷ್ಟ್ರೀಯತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿ, ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ದೇಶ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕನ್ನು ನೀಡುತ್ತಿರುವದು ಖಂಡನೀಯ. ಇಂದು ಸಾಂಕೇತಿಕವಾಗಿ ಪ್ರತಿಭಟಿಸಿದ್ದೇವೆ. ತಪ್ಪಿತ್ತಸ್ಥರ ಮೇಲೆ ಕ್ರಮ ಜರುಗದಿದ್ದರೆ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಅನಿಲ ಅಬ್ಬಿಗೇರಿ, ಸುಧೀರ ಕಾಟಿಗಾರ, ದೇವಪ್ಪ ಗೊಟೂರ, ಶ್ರೀಪತಿ ಉಡುಪಿ, ಎಂ.ಎಸ್. ಕರೀಗೌಡ್ರ, ನಿರ್ಮಲಾ ಕೊಳ್ಳಿ, ವಿಜಯಲಕ್ಷ್ಮಿ ಮಾನ್ವಿ, ಉಷಾ ಮಹೇಶ ದಾಸರ, ವಿದ್ಯಾವತಿ ಅಮರನಾಥ ಗಡಗಿ, ವಿಜಯಲಕ್ಷ್ಮಿ ಶಶಿಧರ ದಿಂಡೂರ, ವೆಂಕಟೇಶ ಹಬೀಬ, ರಾಹುಲ ಸಂಕಣ್ಣವರ, ನವೀನ ಕೊಟೆಕಲ್, ರಾಜೇಶ ಅರಕಲ್, ರಾಘವೇಂದ್ರ ಯಳವತ್ತಿ, ಶಿವು ಹಿರೇಮನಿಪಾಟೀಲ, ವಿನಾಯಕ ಮಾನ್ವಿ, ನಾಗರಾಜ ತಳವಾರ, ಸುರೇಶ ಚಿತ್ತರಗಿ, ಸುರೇಶ ಮರಳಪ್ಪನವರ, ಜಗನ್ನಾಥಸಾ ಭಾಂಡಗೆ, ಅಪ್ಪಣ್ಣ ಟೆಂಗಿನಕಾಯಿ, ರೇಖಾ ಬಂಗಾರಶೆಟ್ಟರ, ಅಪ್ಪು ನಮಸ್ಥೆಮಠ ಸೇರಿದಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.