HomeGadagಅಂಬಿಗ, ಸುಣಗಾರ ಸಮಾಜಕ್ಕೆ ಸೂಕ್ತ ಸ್ಥಾನ

ಅಂಬಿಗ, ಸುಣಗಾರ ಸಮಾಜಕ್ಕೆ ಸೂಕ್ತ ಸ್ಥಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಅಂಬಿಗ, ಸುಣಗಾರ, ಬಾರಕೇರ ಸಮಾಜದ ಜನರಿಗೆ ಸೂಕ್ತ ಸ್ಥಾನ ನೀಡಿ, ಕಾಂಗ್ರೆಸ್ ಮುಖಂಡರಾದ ಮಾಲಾ ನಾರಾಯಣರಾವ್ ಅವರನ್ನು ಕರ್ನಾಟಕ ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವುಕುಮಾರರಿಗೆ ಸಮಾಜ ಬಾಂಧವರ ಪರವಾಗಿ ಸಮಾಜ ಟ್ರಸ್ಟ್ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ಸಮಾಜ ಬಾಂಧವರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಮೀನುಗಾರಿಕೆ ಜಿಲ್ಲಾಧ್ಯಕ್ಷ ಗುರಪ್ಪ ತಿರ್ಲಾಪೂರ ಅಭಿನಂದಿಸುತ್ತ, ಮೀನುಗಾರಿಕೆ ಸವಲತ್ತುಗಳು ಸಮಾಜದ ಬಡ ಕುಟುಂಬಗಳಿಗೆ ಸಿಗುವಂತಾಗಲಿ ಎಂದರು. ಅಂಬಿಗರ ಸಮಾಜದ ಪ್ರಧಾನ ಕಾರ್ಯದರ್ಶಿ, ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಮೀನುಗಾರಿಕೆ ವಿಭಾಗದ ಅಧ್ಯಕ್ಷ ಸಂಗಮೇಶ ಹಾದಿಮನಿ, ಉಪಾಧ್ಯಕ್ಷ ಪ್ರವೀಣ ನೀಲಣ್ಣವರ, ಶಿವದೇವ್ ಹಾದಿಮನಿ, ಹನಮಂತಪ್ಪ ಅಂಬಿಗೇರ, ರವಿಕುಮಾರ್ ಗುಡಿಸಾಗರ್, ಮಹಿಳಾ ಅಧ್ಯಕ್ಷರಾದ ಸುಜಾತ ಗುಡಿಸಾಗರ, ರಾಜು ಪೂಜಾರ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img