ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸಮಗ್ರ ಅಭಿವೃದ್ಧಿ, ಶಾಶ್ವತ ಕುಡಿಯುವ ನೀರಿನ ಪರಿಹಾರ, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ರೈತರ ಹಿತದೃಷ್ಟಿಯಿಂದ ಗದಗ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು 20ನೇ ವಾರ್ಡ್‌ನಲ್ಲಿ ರಕ್ತ ಸಹಿ ಅಭಿಯಾನ ನಡೆಯಿತು.
ಬಿಜೆಪಿ ಮುಖಂಡ ಮೋಹನ್ ವರವಿ ಅವರ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ವಾರ್ಡ್‌ನ ನೂರಾರು ಯುವಕರು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ರಕ್ತದಿಂದ ಸಹಿ ಮಾಡುವ ಮೂಲಕ ತಮ್ಮ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಗದಗದ ಅಭಿವೃದ್ಧಿ ಹಾಗೂ ಜನರ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಒತ್ತಾಯದೊಂದಿಗೆ ನಡೆಯುತ್ತಿರುವ ರಕ್ತ ಸಹಿ ಅಭಿಯಾನಕ್ಕೆ ದಿನದಿಂದ ದಿನಕ್ಕೆ ಯುವಕರ ಬೆಂಬಲ ಹೆಚ್ಚುತ್ತಿದೆ. ಇದು ಕೇವಲ ರಕ್ತದ ಸಹಿಯಲ್ಲ, ಗದಗದ ಅಭಿವೃದ್ಧಿಗಾಗಿ ಯುವಜನರ ಆಶಯ, ಸಂಕಲ್ಪ ಹಾಗೂ ಒಗ್ಗಟ್ಟಿನ ಪ್ರತೀಕವಾಗಿದೆ ಎಂದು ಅಭಿಯಾನಕಾರರು ತಿಳಿಸಿದರು.
ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಹಾಗೂ ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಜನರ ದೀರ್ಘಕಾಲದ ಬೇಡಿಕೆಗಳಿಗೆ ಕೇವಲ ಭರವಸೆ ನೀಡದೆ, ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಜನಪರ ಹೋರಾಟದ ಧ್ವನಿ ಸರ್ಕಾರ ಹಾಗೂ ಆಡಳಿತಗಾರರ ಗಮನಕ್ಕೆ ತಲುಪಿ, ಗದಗದ ಜನರ ನ್ಯಾಯಯುತ ಬೇಡಿಕೆಗಳಿಗೆ ಶೀಘ್ರ ಸ್ಪಂದನೆ ದೊರೆಯಲಿ ಎಂಬ ಆಶಯವನ್ನು ಅಭಿಯಾನಕಾರರು ವ್ಯಕ್ತಪಡಿಸಿದರು.
ಅಭಿಯಾನದಲ್ಲಿ ಪ್ರವೀಣ್ ಕರಬಿಷ್ಟಿ, ಮಂಜು ವರವಿ, ಮಲ್ಲು ಜಂತ್ಲಿ, ಮಂಜುನಾಥ ಜುಟ್ಲರ, ಪರಶುರಾಮ ಗೊಂದಿ, ಅಮಸಿದ್ದ ಗೌಡರ, ಅನಿಲ ಬಳ್ಳಾರಿ, ಮನೋಜ ಕಿರಟಗೇರಿ, ಲಕ್ಷ್ಮಣ ಮುರುಗೋಡ, ಪ್ರಶಾಂತ ವರವಿ, ಬಸವರಾಜ ಕಮತರ, ನಿಖಿಲ ಅಣ್ಣಿಗೇರಿ, ಪ್ರಕಾಶ ಬರಾಡ, ಸಮೀರ್ ಪಿತ್ತೂರು, ಕಿರಣ ಹುನಗುಂಡಿ, ಕುನಲ ಪವಾರ, ಸಚಿನ ಕಾಂಬಳೆ, ಲೋಕೇಶ ಹೂವಿನಹಡಗಲಿ, ಪ್ರಜ್ವಲ ಕರಿ, ಸಂತೋಷ ಕುರಿ, ನೂತನ ಮುರುಗೋಡ, ಶಿವು ಮುಳುಗುಂದ, ಸೋಹಿಲ ಮುಳುಗುಂದ, ಆರ್ಯನ ಬಾದಾಮಿ, ಉಮೇಶ್ ರೆಡ್ಡಿ ಹಳ್ಯಳ, ತನ್ಮಯ ದೊಡ್ಡಮನಿ, ಮದನ ಸಿಂಗ್ ರಜಪೂತ ಸೇರಿದಂತೆ ನೂರಾರು ಯುವಕರು ಪಾಲ್ಗೊಂಡಿದ್ದರು.
“ನಮಗೆ ಯಾರ ವಿರುದ್ಧವೂ ಹೋರಾಟವಿಲ್ಲ, ಗದಗದ ಅಭಿವೃದ್ಧಿಗಾಗಿ ನಮ್ಮ ಹೋರಾಟ. ನಮಗೆ ಬೇಕಿರುವುದು ಭರವಸೆ ಮಾತ್ರವಲ್ಲ—ನ್ಯಾಯ ಮತ್ತು ಶಾಶ್ವತ ಪರಿಹಾರ.”
– ಮೋಹನ್ ವರವಿ, ಬಿಜೆಪಿ ಮುಖಂಡ

