HomeKarnataka Newsರಾಹುಲ್ ಗಾಂಧಿ ತೃಪ್ತಿ ಮಾಡಲು ಜಾತಿಗಣತಿ ವರದಿ ಬಿಡುಗಡೆ ಮಾಡಿದ್ದಾರೆ: ಛಲವಾದಿ ನಾರಾಯಣಸ್ವಾಮಿ

ರಾಹುಲ್ ಗಾಂಧಿ ತೃಪ್ತಿ ಮಾಡಲು ಜಾತಿಗಣತಿ ವರದಿ ಬಿಡುಗಡೆ ಮಾಡಿದ್ದಾರೆ: ಛಲವಾದಿ ನಾರಾಯಣಸ್ವಾಮಿ

For Dai;y Updates Join Our whatsapp Group

Spread the love

ಬೆಂಗಳೂರು: ರಾಹುಲ್ ಗಾಂಧಿ ತೃಪ್ತಿ ಮಾಡಲು ಜಾತಿಗಣತಿ ವರದಿ ಬಿಡುಗಡೆ ಮಾಡಿದ್ದಾರೆ ಎಂದು ವಿಧಾನ್ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳಿಂದ ಕೇಂದ್ರ ಸರ್ಕಾರ ಜಾತಿಗಣತಿ ಪ್ರಾರಂಭ ಮಾಡುತ್ತಿದೆ.

ಹೀಗಿರುವಾಗ ನೀವು ಯಾಕೆ ಜಾತಿಗಣತಿ ಬಿಡುಗಡೆ ಮಾಡಿದ್ದೀರಿ? ಈ ವರದಿ 10 ವರ್ಷಗಳ ಹಿಂದಿನ ವರದಿನಾ? ಹೊಸದಾಗಿ ಮಾಡಿರೋದಾ? 10 ವರ್ಷಗಳಲ್ಲಿ ಯಾರು ಹುಟ್ಟಿಲ್ಲವಾ, ಸತ್ತಿಲ್ಲವಾ? ಸರ್ಕಾರ ಇದಕ್ಕೆ ಉತ್ತರ ಕೊಡಬೇಕು. ಈ ಕಾಂಗ್ರೆಸ್ ಸರ್ಕಾರ ಜಾತಿ ಹಿಂದೆ ಬಿದ್ದಿದೆ. ರಾಹುಲ್ ಗಾಂಧಿ ತೃಪ್ತಿ ಮಾಡಲು ಜಾತಿಗಣತಿ ವರದಿ ಬಿಡುಗಡೆ ಮಾಡಿದ್ದಾರೆ.

ಒಕ್ಕಲಿಗ, ಲಿಂಗಾಯತ ಮತ ಒಡೆದು ಮುಸ್ಲಿಮರನ್ನ ಒಲೈಕೆ ಮಾಡಲು ಹೋಗಿದ್ದಾರೆ. ನಮ್ಮ ಜನಾಂಗವನ್ನು ಕಡಿಮೆ ತೋರಿಸಿದ್ದಾರೆ. ನಮ್ಮ ನಮ್ಮ ಜನಾಂಗದ ನಡುವೆ ಹೋರಾಟ ಮಾಡುವ ಸ್ಥಿತಿಗೆ ಈ ಸರ್ಕಾರ ತಂದಿದೆ ಎಂದು ಕಿಡಿಕಾರಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!