ಬಾಗಲಕೋಟೆ: ಧಾರಾಕಾರ ಮಳೆಗೆ ಹಲವೆಡೆ ಅವಾಂತರಗಳು ಉಂಟಾಗಿವೆ. ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಮನೆ ಮೇಲ್ಚಾವಣಿ ಮತ್ತು ಗೋಡೆ ಕುಸಿದು ಬಾಲಕ ಸಾವನ್ನಪ್ಪಿರುವಂತಹ ಭೀಕರ ಘಟನೆ ನಡೆದಿದೆ.
ದರ್ಶನ್ ಲಾತೂರ(11) ಮೃತ ದುರ್ದೈವಿಯಾಗಿದ್ದು, ನಾಗಪ್ಪ ಲಾತೂರ ಕುಟುಂಬ ಸೀಟ್ ಮನೆಯಲ್ಲಿ ವಾಸವಿದ್ದರು. ಪಕ್ಕದ ಮನೆ ಗೋಡೆ ಸೀಟ್ ಮನೆ ಮೇಲೆ ಬಿದ್ದ ಪರಿಣಾಮ ಮನೆಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ.
ಸೀಟ್ ಕೆಳಗೆ ಸಿಲುಕಿ ದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಮೃತನ ತಾಯಿ ರೂಪಾ,ಸಹೋದರ ಶ್ರೀಶೈಲ್ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಮಹಾಲಿಂಗಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



