ಭಾರತ ತಂಡವು ತವರಿನಲ್ಲಿ ಟೆಸ್ಟ್ ಸರಣಿ ಸೋತು, ಕ್ಲೀನ್ ಸ್ವೀಪ್ ಅಂತರದಲ್ಲಿ ಮುಖಭಂಗಕ್ಕೆ ಒಳಗಾಗಿದೆ. ನ್ಯೂಜಿಲೆಂಡ್ ವಿರುದ್ಧದ 3-0 ಸೋಲನ್ನು ಇನ್ನೂ ಮರೆಯಲು ಆಗದ ಮುನ್ನ, ಸೌತ್ ಆಫ್ರಿಕಾ ತಂಡ 2-0 ಅಂತರದಿಂದ ಟೀಮ್ ಇಂಡಿಯಾ ವಿರುದ್ಧ ಮುನ್ನಡೆ ಸಾಧಿಸಿದೆ.
ಈ ಸೋಲಿನ ನಂತರ, ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ತಮ್ಮ ನಿವೃತ್ತಿಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
“2012 ರಲ್ಲಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸೋಲನ್ನು ಅನುಭವಿಸಿತು. ಆ ಸಂದರ್ಭದಲ್ಲಿ ನಾನು ಒಂದು ಪ್ರತಿಜ್ಞೆ ಮಾಡಿಕೊಂಡೆ. ಭಾರತ ಮುಂದಿನ ಬಾರಿ ತವರಿನಲ್ಲಿ ಟೆಸ್ಟ್ ಸರಣಿ ಸೋತರೆ, ನಾನು ನಿವೃತ್ತಿಯಾಗುತ್ತೇನೆ ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಇದಾದ ಬಳಿಕ ಟೀಮ್ ಇಂಡಿಯಾ ಒಮ್ಮೆಯೂ ತವರಿನಲ್ಲಿ ಟೆಸ್ಟ್ ಸರಣಿ ಸೋತಿರಲಿಲ್ಲ. ಆದರೆ 2024 ರಲ್ಲಿ ಭಾರತ ತಂಡವನ್ನು ನ್ಯೂಝಿಲೆಂಡ್ 3-0 ಅಂತರದಿಂದ ವೈಟ್ ವಾಶ್ ಮಾಡಿತ್ತು. ಈ ಸರಣಿ ಸೋಲೇ ನಾನು ಇಂದು ಮನೆಯಲ್ಲಿ ಕುಳಿತುಕೊಳ್ಳಲು ಕಾರಣ ಎಂದು ಅಶ್ವಿನ್ ಹೇಳಿದ್ದಾರೆ.



