HomeUncategorizedದೇಶಭಕ್ತರ ತ್ಯಾಗದ ಸ್ಮರಣೆ ಮಾಡಿ

ದೇಶಭಕ್ತರ ತ್ಯಾಗದ ಸ್ಮರಣೆ ಮಾಡಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪೂರ್ವಜರ ತ್ಯಾಗ ಬಲಿದಾನದ ಸಂಕೇತವೇ ಸ್ವಾತಂತ್ರ್ಯವಾಗಿದೆ ಎಂದು ಡಾ. ಎಸ್.ಸಿ. ಚವಡಿ ಹೇಳಿದರು.

ಅವರು ಪಟ್ಟಣದ ರೇಣುಕಾ ಎಲ್ಲಮ್ಮಾ ದೇವಸ್ಥಾನದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಬಲಿದಾನ ದಿವಸ ಕಾರ್ಯಕ್ರಮದಲ್ಲಿ ಭಗತ್ ಸಿಂಗ್, ಸುಖದೇವ, ರಾಜಗುರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಗತ್ ಸಿಂಗ್, ಸುಖದೇವ, ರಾಜಗುರು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟವರು. ಇಂತಹ ಮಹನೀಯರ, ದೇಶ ಭಕ್ತರ ತ್ಯಾಗ-ಬಲಿದಾನದ ಸ್ಮರಣೆ ನಿತ್ಯ ಮಾಡುವುದರ ಜೊತೆಗೆ ನಮ್ಮಲ್ಲಿ ದೇಶ ಪ್ರೇಮವನ್ನು ಬೆಳಸಿಕೊಳ್ಳಬೇಕು ಎಂದರು.

ಯೋಗ ಶಿಕ್ಷಕ ಪ್ರಕಾಶ ಮದ್ದಿನ, ಮಂಜುನಾಥ ಬಿಳೆಯಲಿ, ಕೆ.ಎಂ. ಶೇಖ ಹಾಗೂ ಯೋಗಪಟುಗಳು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img