ವಿಜಯಸಾಕ್ಷಿ ಸುದ್ದಿ, ಡಂಬಳ : ಜಗತ್ತಿನಾದ್ಯಂತ ಎಲ್ಲಾ ಧರ್ಮಗಳ ದಾರ್ಶನಿಕರು ಹಾಕಿ ಕೊಟ್ಟಿರುವ ವಿಚಾರಗಳು ವಿಶ್ವಕ್ಕೆ ಶಾಂತಿಯನ್ನು ತಂದು ಕೊಡುತ್ತವೆ. ಆ ನಿಟ್ಟಿನಲ್ಲಿ ಉತ್ತಮ ಶಾಂತಿಯುತ ಸಹಬಾಳ್ವೆಯ ಸಮಾಜ ನಿರ್ಮಾಣಕ್ಕೆ ಸಂದೇಶವನ್ನು ರೇಣುಕಾಚಾರ್ಯರು ಸಾರಿದ್ದಾರೆ. ಅವರು ಹಾಕಿಕೊಟ್ಟಿರುವ ಸಂದೇಶಗಳನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ನಡೆದಾಗ ಮಾತ್ರ ಅವರ ಜಯಂತಿಯ ಆಚರಣೆ ಅರ್ಥಪೂರ್ಣ ಎಂದು ಸಿದ್ದಲಿಂಗಯ್ಯ ಸ್ಥಾವರಮಠ ಹೇಳಿದರು.
ಡಂಬಳ ಗ್ರಾಮದ ಜಂಗಮ ಸೇವಾ ಸಮಿತಿ ವತಿಯಿಂದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯರು ಶ್ರೇಷ್ಠ ಸಂತರು ಹಾಗೂ ಪವಾಡ ಪುರುಷರಾಗಿದ್ದರು ಎಂದರು.
ಮಂಜಯ್ಯಸ್ವಾಮಿ ಅರವಟಿಗಿಮಠ, ಕುಮಾರಸ್ವಾಮಿ ಹೆಬ್ಬಳ್ಳಿಮಠ ಮಾತನಾಡಿ, ಮಾನವನ ದಾನದ ಗುಣಗಳನ್ನು ದಹಿಸಿ ಆತನನ್ನು ಮಹಾದೇವನನ್ನಾಗಿಸುವ ಅಪೂರ್ವ ಸಿದ್ಧಾಂತವನ್ನು ಜಗದ್ಗುರು ರೇಣುಕಾಚಾರ್ಯರು ನೀಡಿದರು. ಜೀವಿ ಶಿವನಾಗುವ ಅಂಗ ಲಿಂಗವಾಗುವ ಅದ್ಭುತ ಸಿದ್ಧಾಂತವನ್ನು ಜಗತ್ತಿಗೆ ಬೋಧಿಸಿ ಬೆಳಕಾಗಿದ್ದಾಗರೆ ಎಂದರು.
ಚೆನ್ನವೀರಯ್ಯ ಹೆಬ್ಬಳಿಮಠ, ಬಸಯ್ಯ ಹಡಗಲಿಮಠ, ಸಿದ್ದು ಹಿರೇಮಠ, ಸಿದ್ಧಲಿಂಗಯ್ಯ ಕಾಡಸಿದ್ದೇಶ್ವರಮಠ, ವೀರಯ್ಯ ನರೇಗಲ್ಲಮಠ, ರೇವಣಸಿದ್ಧಯ್ಯ ಹಿರೇಮಠ, ವೀರಣ್ಣ ಕರವೀರಮಠ, ಅಶೋಕ ಹಡಗಲಿಮಠ, ಮಲ್ಲಯ್ಯ ಅರವಟಗಿಮಠ, ಶಿವರುದ್ರಯ್ಯ ಗಂಧದ, ರೇವಣಸಿದ್ದಯ್ಯ ಹಿರೇಮಠ, ಬಸಯ್ಯ ಹಿರೇಮಠ, ಚೆನ್ನಯ್ಯ ಕಾಡಸಿದ್ದೇಶ್ವರಮಠ, ಫಕ್ಕಿರಯ್ಯ ಅರವಟಗಿಮಠ, ವಿರಣ್ಣ ಕರವೀರಮಠ, ನಾಗಯ್ಯ ಕರವೀರಮಠ, ಅಪ್ಪಯ್ಯ ಹಿರೇಮಠ, ಹಾಲಯ್ಯ ಹಿರೇಮಠ, ಶರಣಯ್ಯ ಸಾರಂಗಮಠ, ವೀರಯ್ಯ ಕಾಡಸಿದ್ದೇಶ್ವರಮಠ ಮಹಿಳೆಯರು ಯುವಕರು ಇದ್ದರು.



