ಬೆಂಗಳೂರು: ದರ್ಶನ್, ಪವಿತ್ರಾ ಗೌಡ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ದರ್ಶನ್, ಪವಿತ್ರಾಗೌಡ ಸೇರಿ ಪ್ರಕರಣದ 15 ಆರೋಪಿಗಳು ಹಾಜರಾಗಿದ್ದರು. ಆದರೆ 17 ರಲ್ಲಿ 15 ಜನ ಆರೋಪಿಗಳು ಇದ್ದರು.
ಸಿಸಿಎಚ್ 57ನೇ ಕೋರ್ಟ್‌ಗೆ ದರ್ಶನ್, ಪವಿತ್ರಾಗೌಡ, ಪುಟ್ಟಸ್ವಾಮಿ, ವಿನಯ್, ನಾಗರಾಜ್ ಪ್ರದೂಷ್, ದೀಪಕ್ ರಾಘವೇಂದ್ರ, ಕಾರ್ತಿಕ್, ಕೇಶವಮೂರ್ತಿ ಅನುಕುಮಾರ್ ಹಾಜಾರಾಗಿದ್ದು, 16,17 ನೇ ಆರೋಪಿಗಳಾದ ನಿಖಿಲ್, ಕೇಶವಮೂರ್ತಿ ಗೈರಾಗಿದ್ದರು.
ಸಿಸಿಎಚ್ 57 ನೇ ಕೋರ್ಟ್ ಏಪ್ರಿಲ್ 8 ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ಇನ್ನು ಪೊಲೀಸರ ವಿರುದ್ದ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ವಾದ ಮಾಡಿ ಆರೋಪ ಮಾಡಿದ್ದು ಹೀಗೆ.
ಇತರೆ ಆರೋಪಿಗಳಿಗೆ ಮಾಫಿ ಸಾಕ್ಷಿ ಆಗುವಂತೆ ಒತ್ತಾಯ ಮಾಡುತ್ತಿದ್ದಾರೆ. ಮಾಫಿ ಸಾಕ್ಷಿ ಆಗುವಂತೆ ಪೊಲೀಸರ ಒತ್ತಡ ಎಂದು ಆರೋಪಿಸಿದರು. ತಮ್ಮ ಬಳಿ ಸಾಕ್ಷಿ ಇದೆ ಎಂದು ಹೈಕೋರ್ಟ್ ನಲ್ಲಿ ವಾದಿಸಿದ್ದಾರೆ.