ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಡಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಆರೋಪಿಗಳು ಪರಪ್ಪನ ಅಗ್ರಹಾರದ ಜೈಲು ಪಾಲಾಗಿದ್ದಾರೆ. ಕೊಲೆ ನಡೆದು ತಿಂಗಳುಗಳು ಕಳೆಯುತ್ತ ಬಂದಿದ್ದು, ಕೊಲೆಯ ಬಗ್ಗೆ ಒಂದೊಂದೇ ಸಾಕ್ಷ್ಯಗಳನ್ನು ಪೊಲೀಸರು ತನಿಖೆಯಿಂದ ದೃಢ ಪಡಿಸುತ್ತಿದ್ದಾರೆ.
ಇನ್ನೂ ಪೊಲೀಸರು 17 ಆರೋಪಿಗಳ ಪ್ರತ್ಯೇಕ ಪ್ರೋಪೈಲ್ ಸಿದ್ದ ಮಾಡಲು ಮುಂದಾಗಿದ್ದಾರೆ. ಹುಟ್ಟಿದ್ದು ಯಾವಾಗ ಅನ್ನೋದ್ರಿಂದ ಹಿಡಿದು ಇಲ್ಲಿವರೆಗೂ ನಡೆದ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ದರ್ಶನ್ ಮೇಲೆ ದಾಖಲಾಗಿರೋ ಎಲ್ಲಾ ಕೇಸ್ ಗಳನ್ನು ದರ್ಶನ್ ಪ್ರೋಫೈಲ್ ನಲ್ಲಿ ತಂದಿದ್ದಾರೆ. ನಾಲ್ಕ ಜಾಗಗಳಿಂದ ಬರೋಬ್ಬರಿ 170 ಕ್ಕೂ ಹೆಚ್ಚು ಸಾಕ್ಷ್ಯ ಕಲೆಹಾಕಿ ಹೇಳಿಕೆ ಪಡೆದುಕೊಂಡಿದ್ದಾರೆ.ಕೊಲೆ ಪ್ರಕರಣದಲ್ಲಿ ನಾಲ್ಕು ಪ್ರಮುಖ ಕ್ರೈಂ ಸೀನ್ ಗಳನ್ನು ಗುರ್ತಿಸಿದ್ದಾರೆ.
ಹಾಗಾದ್ರೆ ಆ ನಾಲ್ಕ ಕ್ರೈಂ ಸೀನ್ ಗಳ್ಯಾವು ಗೊತ್ತಾ..?
ಕ್ರೈಂ ಸೀನ್ ನಂಬರ್ -1 – ಚಿತ್ರದುರ್ಗ
* ರೇಣುಕಾಸ್ಚಾಮಿ ಕೆಲಸ ಮಾಡುತ್ತಿದ್ದ ಮೆಡಿಕಲ್ ಸ್ಟೋರ್.
* ರೇಣುಕಾಸ್ಚಾಮಿ ಆಟೋದಲ್ಲಿ ಹೋಗಿ ಆರೋಪಿಗಳನ್ನು ಮೀಟ್ ಮಾಡಿದ ಸ್ಥಳ
* ರೇಣುಕಾಸ್ಚಾಮಿ ಯನ್ನು ರಾಘವೇಂದ್ರ ಅಂಡ್ ಗ್ಯಾಂಗ್ ಕಾರಿಗೆ ಹತ್ತಿಸಿಕೊಂಡ ಸ್ಥಳ.
* ಆರೋಪಿಗಳ ಜೊತೆಗೆ ಬೆಂಗಳೂರಿಗೆ ಬರುವ ವೇಳೆ ದಾರಿ ಮಧ್ಯ ಹೋದ ಹೋಟೆಲ್.
ಕ್ರೈಂ ಸೀನ್ ನಂಬರ್ – 2- ಪಟ್ಟಣಗೆರೆ ಶೆಡ್
* ಪಟ್ಟಣಗೆರೆಯ ಶೆಡ್ ಜಾಗದ ಸೆಕ್ಯುರಿಟಿ ಗಾಡ್ ಗಳು.
* ಶೆಡ್ ನ ಮಾಲೀಕರು ಮತ್ತು ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ.
* ರೇಣುಕಾಸ್ಚಾಮಿ ಕೊಲೆ ನಂತರ ಆರೋಪಿಗಳು ಯಾರೆನ್ನೆಲ್ಲಾ ಮೀಟ್ ಮಾಡಿದ್ರು.
* ಪಟ್ಟಣಗೆರೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆರೋಪಿಗಳ ಸಂಪರ್ಕದಲ್ಲಿದ್ದವರು.
ಕ್ರೈಂ ಸೀನ್ ನಂಬರ್- 3- ಸ್ಟೋನಿ ಬ್ರೂಕ್ ಪಬ್
* ಸ್ಟೋನಿ ಬ್ರೂಕ್ ಪಬ್ ನ ಸಿಬ್ಬಂದಿ ಗಳು.
* ಪಬ್ ನ ಸೆಕ್ಯೂರಿಟಿ ಗಾರ್ಡ್ ಗಳು.
* ಪಬ್ ಗೆ ಬಂದಿದ್ದ ಗ್ರಾಹಕರು.
* ಪಬ್ ಗೆ ಬಂದಿದ್ದ ದರ್ಶನ್ ಕೆಲ ಅಪ್ತರು
ಕ್ರೈಂ ಸೀನ್ ನಂಬರ್ -4 – ಸುಮ್ಮನಹಳ್ಳಿ ರಾಜಕಾಲುವೆ.
* ರಾಜಕಾಲುವೆ ಬಳಿಯ ಅಪಾರ್ಟ್ ಮೆಂಟ್ ಸೆಕ್ಯುರಿಟಿ.
* ಬೆಳಗಿನ ಜಾವ ರೇಣುಕಾಸ್ಚಾಮಿ ಶವ ನೋಡಿದ ಸಾರ್ವಜನಿಕರು
* ಶವ ಸಾಗಿಸಿದ ವಾಹನ ಬಂದು ಹೋಗಿದ್ದನ್ನು ನೋಡಿದ್ದ ಅಪಾರ್ಟ್ ಮೆಂಟ್ ಸಿಬ್ಬಂದಿ.
ಮತ್ತೊಂದೆಡೆ 1 ಪವಿತ್ರಾಗೆ ತಾನು ಧರಿಸಿದ್ದ ಪಾದರಕ್ಷೆಯೇ ಕಂಟಕವಾಗಿದೆ. ಪವಿತ್ರಾ ಗೌಡ ಚಪ್ಪಲಿ ಮೇಲಿರೋದು ರೇಣುಕಾಸ್ವಾಮಿ ರಕ್ತ ಅನ್ನೋದು FSL ವರದಿಯಲ್ಲಿ ದೃಢಪಟ್ಟಿದೆ. ಪ್ರಕರಣದಲ್ಲಿ ಪೊಲೀಸರಿಗೆ ಮತ್ತೊಂದು ಪ್ರಬಲ ಸಾಕ್ಷಿ ಲಭ್ಯ ಆಗಿದ್ದು ಸೀಜ್ ಮಾಡಿದ್ದ ಪವಿತ್ರಾ ಪಾದರಕ್ಷೆಯನ್ನು ತನಿಖಾ ತಂಡ FSLಗೆ ರವಾನಿಸಿದೆ. ಒಟ್ಟಾರೆ, ಡಿ ಗ್ಯಾಂಗ್ನ ರಕ್ತಚರಿತ್ರೆ ಒಂದೊಂದೇ ಬಯಲಾಗುತ್ತಿದ್ದು ಮತ್ತಷ್ಟು ಸಂಕಷ್ಟಗಳು ಸುತ್ತಿಕೊಳ್ಳುತ್ತಿವೆ.