Home Gadag News ಲಕ್ಷ್ಮೇಶ್ವರ ತಹಸೀಲ್ದಾರ ಧನಂಜಯ ಮಾಲಗತ್ತಿರವರನ್ನು ಪುನಃ ಕರ್ತವ್ಯಕ್ಕೆ ಹಾಜರುಪಡಿಸುವಂತೆ ಮನವಿ

ಲಕ್ಷ್ಮೇಶ್ವರ ತಹಸೀಲ್ದಾರ ಧನಂಜಯ ಮಾಲಗತ್ತಿರವರನ್ನು ಪುನಃ ಕರ್ತವ್ಯಕ್ಕೆ ಹಾಜರುಪಡಿಸುವಂತೆ ಮನವಿ

0
ಲಕ್ಷ್ಮೇಶ್ವರ ತಹಸೀಲ್ದಾರ ಧನಂಜಯ ಮಾಲಗತ್ತಿರವರನ್ನು ಪುನಃ ಕರ್ತವ್ಯಕ್ಕೆ ಹಾಜರುಪಡಿಸುವಂತೆ ಮನವಿ
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಲಕ್ಷ್ಮೇಶ್ವರ ತಾಲೂಕು ತಹಸೀಲ್ದಾರ ಧನಂಜಯ ಮಾಲಗತ್ತಿರವರನ್ನು ಪುನಃ ಕರ್ತವ್ಯಕ್ಕೆ ಹಾಜರುಪಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಲಕ್ಷ್ಮೇಶ್ವರ/ಶಿರಹಟ್ಟಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಸಮಿತಿಯ ಪದಾಧಿಕಾರಿಗಳು, ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತಿ ಹಾಗೂ ವಿಜಯೋತ್ಸವ ಕಾರ್ಯಕ್ರಮವನ್ನು ಆಚರಿಸಲು ಹಾಗೂ ಕಾರ್ಯಕ್ರಮ ಮಾಡುವ ಕುರಿತು ಪೂರ್ವಭಾವಿ ಸಭೆ ಮಾಡಿಲ್ಲವೆಂದು ಆರೋಪಿಸಿ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದಲ್ಲದೇ ತಹಸೀಲ್ದಾರರ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ.

ತಾಲೂಕು ದಂಡಾಧಿಕಾರಿಗಳು ದಲಿತ ವರ್ಗದವರೆನ್ನುವ ಕಾರಣಕ್ಕೆ ಕಛೇರಿಯ ಮೇಲ್ಜಾತಿಯ ಸಿಬ್ಬಂದಿ ವರ್ಗದವರು ಹುನ್ನಾರ ನಡೆಸಿದ್ದಾರೆ. ಲಕ್ಷ್ಮೇಶ್ವರ ತಹಸೀಲ್ದಾರ ಕಚೇರಿಯಲ್ಲಿನ ಎಲ್ಲಾ ಸಿಬ್ಬಂದಿ ವರ್ಗದವರನ್ನು ಬೇರೆ ಸ್ಥಳಕ್ಕೆ ನಿಯೋಜಿಸಬೇಕು. ಗದಗ ಜಿಲ್ಲೆಯ ಲಕ್ಷ್ಮೇಶ್ವರ/ಶಿರಹಟ್ಟಿ ಸೇರಿ ಎರಡೂ ತಾಲೂಕುಗಳಲ್ಲಿ ತಹಸೀಲ್ದಾರ ಕಚೇರಿಯಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮತ್ತು ಪುರಸಭೆ ಕಚೇರಿಗಳು ಕರ್ತವ್ಯ ನಿರ್ವಹಿಸುವುದು ಕಷ್ಟಕರವಾಗುತ್ತಿದ್ದು, ಲಕ್ಷ್ಮೇಶ್ವರ ತಹಸೀಲ್ದಾರ ಧನಂಜಯ ಮಾಲಗತ್ತಿರವರನ್ನು ಮರಳಿ ಲಕ್ಷ್ಮೇಶ್ವರ ತಹಸೀಲ್ದಾರರೆಂದು ಕರ್ತವ್ಯಕ್ಕೆ ಹಾಜರಪಡಿಸಬೇಕೆಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುರೇಶ ನಂದೆಣ್ಣವರ, ಬಸವಣ್ಣಪ್ಪ ನಂದೆಣ್ಣವರ, ದೇವಪ್ಪ ನಂದೆಣ್ಣವರ, ಹೊನ್ನಪ್ಪ ಸಂಜೀವಣ್ಣನವರ್, ಕೋಟೆಪ್ಪ ವರದಿ, ನಾಗರಾಜ್ ದೊಡ್ಡಮನಿ, ಫಕ್ಕಿರೇಶ್ ಮ್ಯಾಟಣ್ಣನವರ್, ಚಂದ್ರಶೇಖರ್ ಹರಿಜನ, ಮಾರ್ತಂಡಪ್ಪ ಹಾದಿಮನಿ, ಉಡಚಪ್ಪ ಹಳ್ಳಿಕೇರಿ, ನಾಗರಾಜ್ ಪೋತರಾಜ್, ಸುರೇಶ್ ಬೀರಣ್ಣವರ್, ಫಕ್ಕಿರೇಶ್ ನಂದಣ್ಣವರ, ಫಕೀರೇಶ ಬಜಕ್ಕನವರ್, ಫಕ್ಕೀರೇಶ ನಡುವಿನಕೇರಿ, ರಾಮು ಗಡದವರ, ರಾಮು ಅಡುಗೆಮನೆ, ನಾಗರಾಜ ನಂದಣ್ಣವರ, ರವಿ ಗಾಜಿ, ರವಿ ಗುಡಿಮನಿ, ಮಂಜು ಸೀತಮ್ಮನವರ್, ಶೇಖರ್ ಒಂಟಿ, ಜಗದೀಶ್ ಹುಲಿಗೆಮ್ಮನವರ, ಗಾಳೆಪ್ಪ ಹರಿಜನ್, ಹನುಮಂತಪ್ಪ ಹರಿಜನ, ಗುಡ್ಡಪ್ಪ ಮತ್ತೂರು, ಪರಶುರಾಮ್ ಸಂಗಮನವರ, ಹನುಮಂತ ಸಂಗಮನವರ್, ದ್ಯಾಮಣ್ಣ ಮ್ಯಾಗೇರಿ, ಜಬೀರುಲ್ಲಾ, ರಾಜು ಕಮತ, ಮಧು ಹಾದಿಮನಿ, ಮಹಾಂತೇಶ್ ಗುಡಿಸಲಮನಿ, ಸಂತೋಷ ಹಾದಿಮನಿ, ಶಶಿಕುಮಾರ್ ಪೂಜಾರ್, ಸದಾನಂದ ನಂದನವರ್, ಅನಿಲ ನಂದಣ್ಣವರ್, ಮಾರ್ತಂಡಪ್ಪ ಗಾಳಪ್ಪನವರ್, ಗೋಣೆಪ್ಪ ಹರಿಜನ, ಫಕೀರೇಶ ಪೂಜಾರ ಉಪಸ್ಥಿತರಿದ್ದರು.

ತಹಸೀಲ್ದಾರರು ಹಾಗೂ ಆಡಳಿತ ವರ್ಗದವರು ಚೆನ್ನಮ್ಮನವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಇಲಾಖೆಯಿಂದ ಮಾಡಬೇಕಾದ ಕರ್ತವ್ಯ ಮಾಡಿದ್ದಾರೆ. ಆದಾಗ್ಯೂ ಪ್ರತಿಭಟನಾಕಾರರು ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆದುಕೊಳ್ಳದೇ ದಿಢೀರನೆ ಪ್ರತಿಭಟನೆ ಮಾಡಿ ದಂಡಾಧಿಕಾರಿಗಳಿಗೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಮನವಿಯ ಮೂಲಕ ತಿಳಿಸಿದರು.


Spread the love

LEAVE A REPLY

Please enter your comment!
Please enter your name here