HomeGadag Newsಸೇವಾ ನಿವೃತ್ತಿ ಹೊಂದಿದ ಡಾ. ಮೃತ್ಯುಂಜಯರಿಗೆ ಸನ್ಮಾನ

ಸೇವಾ ನಿವೃತ್ತಿ ಹೊಂದಿದ ಡಾ. ಮೃತ್ಯುಂಜಯರಿಗೆ ಸನ್ಮಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಸ್ಥಳೀಯ ಡಾ. ಪುಟ್ಟರಾಜ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ ಹಾಗೂ ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮೃತ್ಯುಂಜಯ ಶೆಟ್ಟರ ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಹಾಗೂ ರೋಣ ಶಾಸಕರಾದ ಜಿ.ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಡಾ. ಎಂ.ಜಿ. ಶೆಟ್ಟರರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಖಯಾಲ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಮತ್ತು ಸೇವಾ ಜ್ಯೇಷ್ಠತೆ ಹೊಂದಿರುವ ಡಾ. ಸುಮಿತ್ರಾ ಹಿರೇಮಠ ಅವರಿಗೆ ಮಹಾವಿದ್ಯಾಲಯದ ಪ್ರಾಚಾರ್ಯರೆಂದು ಅಧಿಕಾರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾಹಾವಿದ್ಯಾಲಯದ ಸ್ಥಾಯಿ ಸಮಿತಿಯ ಅಧ್ಯಕ್ಷ, ನಿರ್ದೇಶಕರಾದ ಎಸ್.ಎಂ. ಗೌಡರ, ನಿರ್ದೇಶಕರಾದ ಎಸ್.ಆರ್. ಇಟಗಿ, ಆಪ್ತ ಕಾರ್ಯದರ್ಶಿ ಬಸವರಾಜ ಚಕ್ರಣ್ಣವರ ಹಾಗೂ ಮಹಾವಿದ್ಯಾಲದ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img