ಕಾರವಾರ:- ಇಲ್ಲಿನ ದಾಂಡೇಲಿ ನಗರದ ಅಂಬೇವಾಡಿಯಲ್ಲಿ ಬೈಕ್-ಸ್ಕೂಟಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರೂ ಮಕ್ಕಳು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಇಮ್ತಿಯಾಜ್ ಶಾಹೀದ್ ಪಟೇಲ್ ಹಾಗೂ ಆತನ ಇಬ್ಬರು ಮಕ್ಕಳು, ಸ್ಕೂಟಿ ಚಾಲಕ ಭೀಮರಾವ್ ಮಲ್ಲಪ್ಪ ಕೆಂಬಾವಿ ಎಂದು ಗುರುತಿಸಲಾಗಿದೆ. ಇಮ್ತಿಯಾಜ್ ಮಕ್ಕಳೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಜರುಗಿದೆ. ಗಾಯಾಳುಗಳನ್ನು ಧಾರವಾಡ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.



