ರೊಟ್ಟಿ ಪಂಚಮಿಯ ಸಡಗರ

0
Roti Panchami Sadagara
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ನಾಗರ ಪಂಚಮಿ ಮುನ್ನಾ ದಿನವಾದ ಬುಧವಾರ ರೊಟ್ಟಿ ಪಂಚಮಿಯನ್ನು ಮಹಿಳೆಯರು ಸಂಭ್ರಮದಿಂದ ಆಚರಿಸಿದರು. ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಉತ್ತರ ಕರ್ನಾಟಕದಲ್ಲಿ ನಾನಾ ಹಬ್ಬಗಳಿಗೆ ಮುನ್ನಡಿ ಬರೆಯಲಾಗುತ್ತದೆ. ತಿಂಗಳ ಪೂರ್ತಿ ಮನೆಯಲ್ಲಿ ಒಂದಿಲ್ಲೊಂದು ಪೂಜೆ, ವ್ರತ ಕೈಗೊಳ್ಳುತ್ತಾರೆ. ಅದರಲ್ಲೂ ಆರಂಭದಲ್ಲೇ ಬರುವ
ಪಂಚಮಿ ಹಬ್ಬದ ರೊಟ್ಟಿ ಸಂಭ್ರಮ ಉತ್ತರ ಕರ್ನಾಟಕದಲ್ಲಿ ವೈಶಿಷ್ಯತೆ ಪಡೆದುಕೊಂಡಿದೆ.

Advertisement

ಪ್ರತಿ ವರ್ಷ ಮುಂಗಾರು ಮಳೆ ಅನ್ನದಾತನಿಗೆ ಅನುಕೂಲವಾಗುಷ್ಟು ಸುರಿದು ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳ ಮೊದಲು ಫಸಲಿನ ಸಂತಸವನ್ನು ರೊಟ್ಟಿ ಮತ್ತು ವಿವಿಧ ತರಕಾರಿ ಹಾಗೂ ಕಾಳುಗಳ ಪಲ್ಯದೊಂದಿಗೆ ಎಲ್ಲರೂ ಪರಸ್ಪರ ಹಂಚಿಕೊಳ್ಳುವುದು ಈ ರೊಟ್ಟಿ ಹಬ್ಬದ ವಿಶೇಷತೆ.

ಅದರಂತೆ ನಾಗ ಪಂಚಮಿ ಮುನ್ನಾದಿನ ಬೆಳಿಗ್ಗೆ ಮನೆಯನ್ನು ಶುದ್ಧಗೊಳಿಸಿ ಮನೆ ಮಂದಿಯೆಲ್ಲಾ ಅಭ್ಯಂಗ ಸ್ನಾನ ಮಾಡಿ, ಮನೆಗಳಲ್ಲಿ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಅಕ್ಕಿರೊಟ್ಟಿ, ಚಪಾತಿ, ಎಣ್ಣೆಗಾಯಿ, ಬದನೆಕಾಯಿ, ಮೊಸರು ಚಟ್ನಿ, ಶೇಂಗಾ ಚಟ್ನಿ, ಕಡಲೆ ಚಟ್ನಿ, ಹಸಿರು ತರಕಾರಿ ಹೀಗೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಸುತ್ತಲಿನ ಮನೆಯವರೊಂದಿಗೆ ಪರಸ್ಪರ ವಿನಿಮಯ ಮಾಡಿಕೊಂಡರು.

ಚಿಕ್ಕಮಕ್ಕಳು ಕೈಯಲ್ಲಿ ರೊಟ್ಟಿಗಳನ್ನು ಹಿಡಿದುಕೊಂಡು ಮನೆ ಮನೆಗೆ ತಲುಪಿಸುವ ಮೂಲಕ ಜಾತಿ-ಬೇಧ ಮರೆತು ಭಾವೈಕ್ಯತೆಯ ಸಂದೇಶ ಸಾರಿದರು. ಹೊಸದಾಗಿ ಮದುವೆಯಾದ ಎಲ್ಲ ಮಹಿಳೆಯರು ತಮ್ಮ ತವರು ಮನೆಗೆ ಹಬ್ಬಕ್ಕೆಂದು ಆಗಮಿಸಿ ಕುಟುಂಬದವರೊಂದಿಗೆ ಭೋಜನವನ್ನು ಸವಿದು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.


Spread the love

LEAVE A REPLY

Please enter your comment!
Please enter your name here