ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ತ್ಯಾಗ ಮತ್ತು ಬಲಿದಾನದ ಸಂದೇಶ ಸಾರುವ ಈ ಪವಿತ್ರ ಹಬ್ಬದ ಅಂಗವಾಗಿ ಮುಂಜಾನೆಯೇ ಮುಸ್ಲಿಂ ಬಾಂಧವರು ಹೊಸ ಉಡುಪು ಧರಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಪಟ್ಟಣದ ಬಲಹುಣಸಿ ರಸ್ತೆ ಹಾಗೂ ಹಳೆ ಊರಿನ ತಂಬ್ರಹಳ್ಳಿ ರಸ್ತೆಯ ಈದ್ಗಾ ಮೈದಾನದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ವಿಶೇಷ ನಮಾಜ್ ಸಲ್ಲಿಸಿ ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನೆಲ್ಲು ಇಸ್ಮಾಯಿಲ್ ಸಾಬ್, ಕೆಜಿಎನ್ ಅಲ್ಲಾಭಕ್ಷಿ, ಯು. ಬಾಬುಬಲಿ, ಇಂತಿಯಾಜ್, ಸಿಕಂದರ್ ಜಂದಿಸಾಬ್, ರಜಾಕ್, ಶೇಕ್ ಅಹಮದ್, ಪೀರ್ ಸಾಬ್, ಜಿನ್ನಾ ಸಾಬ್, ಸಾಹುಲ್ ಸಾಬ್, ಎಣ್ಣೆ ಭಾಷಾ ಸಾಬ್, ಮೂಸ ಸಾಬ್, ದೊಡ್ಮನಿ ಇಬ್ರಾಹಿಂ, ಬಶೀರ್ ಸಾಬ್ ಹಾಗೂ ಹಿರಿಯರಾದ ಮುತ್ತ ವಲಿಗಳು ಸೇರಿದಂತೆ ಮುಸ್ಲಿಂ ಸಮಾಜದ ಅನೇಕ ಬಾಂಧವರು ಭಾಗವಹಿಸಿದ್ದರು.



