ಕೋಲಾರ:- ಜಿಲ್ಲೆಯ ಮಾಸ್ಕಿ ಹೋಬಳಿಯ ತುರುನಸಿ ಗ್ರಾಮದಲ್ಲಿ ಸವಿತಾ ಸಮಾಜದ ಮುಖಂಡರ ಮೇಲೆ ಹಲ್ಲೆ ನಡೆಸಿರುವ ಘಟನೆ ಜರುಗಿದೆ. ಪುಂಡರು ನಡೆಸಿರುವ ಹಲ್ಲೆಯ ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಎಸ್, ಸವಿತಾ ಸಮಾಜದ ಹುಡುಗಿ ಒಬ್ಬಳು ದೇವಸ್ಥಾನಕ್ಕೆ ಹೋಗಿದ್ದಾಗ ಸುಧಾಕರ್ ಎಂಬ ಯುವಕ ಹುಡುಗಿ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಆಗ ಆ ವಿಚಾರ ಅಣ್ಣನಿಗೆ ತಿಳಿದು ಬುದ್ಧಿವಾದ ಹೇಳಿದ್ದಾನೆ. ಇದನ್ನೇ ಕಾರಣವಾಗಿ ಇಟ್ಟುಕೊಂಡು ಸವಿತಾ ಸಮಾಜದವರು ನಡೆಸುತ್ತಿದ್ದ ಪುಟ್ಟ ಅಂಗಡಿಯ ಮೇಲೆ ಎಂಟು ಜನರ ಗುಂಪು, ಹಲ್ಲೆ ಮಾಡಿ ಅಂಗಡಿ ನಾಶ ಮಾಡಿದೆ. ಅವರು ನಡೆಸುವ ಕಟಿಂಗ್ ಶಾಪ್ ಗೂ ಕೂಡ ಧ್ವಂಸ ಮಾಡಿ ನಿಮ್ಮ ಜಾತಿ ಅವರನ್ನು ಊರು ಬಿಟ್ಟು ಓಡಿಸ್ತಿವಿ ಅಂತ ಧಮ್ಕಿ ಕೂಡ ಹಾಕಿದ್ದಾರೆ.
ಜೊತೆಗೆ ಇದು ಮಾಲೂರು ತಾಲೂಕಿನಲ್ಲಿ ಸವಿತಾ ಸಮಾಜದ ಮೇಲೆ ನಡೆದ 22 ನೇ ಪ್ರಕರಣ ಎಂಬುವುದು ತಲೆ ತಗ್ಗಿಸುವ ವಿಚಾರ. ಹಾಗಾದ್ರೆ ನ್ಯಾಯಾಂಗ ವ್ಯವಸ್ಥೆ, ಕಾನೂನು ವ್ಯವಸ್ಥೆ ಏನಾಗಿದೆ? ಪೋಲೀಸರು ಏನ್ಮಾಡ್ತಿದ್ದಾರೆ? ಘಟನೆ ಬಗ್ಗೆ ಎಫ್ಐಆರ್ ದಾಖಲಿಸಲು ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುವುದು ತಿಳಿಯದ್ದಾಗಿದೆ ಎಂದು ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಜನಪ್ರತಿನಿಧಿಗಳ ವಿರುದ್ದ ಕೆಂಡಕಾರಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖಂಡೆ ಲಕ್ಷ್ಮೀ, ಸವಿತಾ ಸಮಾಜದ ಹುಡುಗಿ ಜೊತೆ ಸುಧಾಕರ್ ಎಂಬ ಯುವಕ ಅಸಭ್ಯವಾಗಿ ವರ್ತಿಸಿದ್ದು ಅಲ್ಲದೇ ಅವರ ಚಿಲ್ಲರೆ ಅಂಗಡಿಗಳು ಪುಡಿ ರೌಡಿಗಳನ್ನು ಕರೆದುಕೊಂಡು ಹೋಗಿ ಧ್ವಂಸ ಮಾಡಿದ್ದಾರೆ. ಜೊತೆಗೆ ಜಾತಿ ನಿಂದನೆ ಮಾಡಿದ್ದು, ಸವಿತಾ ಸಮಾಜಕ್ಕೆ ಬಹಳ ತೊಂದರೆ ಕೂಡ ನೀಡುತ್ತಿದ್ದಾನೆ. ನಮ್ಮ ಸಮುದಾಯದವರು ಸಂವಿಧಾನದಲ್ಲಿ ಇದ್ದಿವಾ ಇಲ್ಲವಾ ಎಂಬ ಅನುಮಾನ ಹುಟ್ಟಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು. ಸರ್ಕಾರ ಯಾವುದೇ ಇರಲಿ ನಮ್ಮ ಪರ ನಿಲ್ಲಬೇಕು. ಇಲ್ಲಾಂದ್ರೆ ಸವಿತಾ ಸಮಾಜದ ತಂಟೆಗೆ ಬಂದರೆ ಏನಾಗುತ್ತೆ ಅಂತ ತೋರಿಸ್ತೀವಿ ಅಂತ ಖಡಕ್ಕಾಗಿ ಹೇಳಿದ್ದಾರೆ.
ಇದೇ ವಿಚಾರಕ್ಕೆ ಮತ್ತೊರ್ವ ಮುಖಂಡ ಹರೀಶ್ ಮಾತನಾಡಿ, ಹುಡುಗಿ ಜೊತೆ ಅಸಭ್ಯವಾಗಿ ವರ್ತಿಸಿದ್ದು ಅಲ್ಲದೇ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಆ ದೃಶ್ಯ ಸಿಸಿಟಿವಿಯಲ್ಲಿ ನೋಡಿದ್ರೆ ಭಯ ಹುಟ್ಟಿಸತ್ತೆ. ಆದಷ್ಟು ಬೇಗ ಮಾಸ್ತಿ ಪೋಲೀಸರು ಕ್ರಮ ಕೈಗೊಳ್ಳಬೇಕು. ಇಲ್ಲಾಂದ್ರೆ ನಾವು ಏನು ಮಾಡಬೇಕು ನಮಗೆ ಗೊತ್ತಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ನಂತರ ಮಾತನಾಡಿದ ವೀಣಾ ಅವರು, ಅಂಗಡಿಗೆ ಬಂದು ಫ್ರೀಯಾಗಿ ಐಸ್ಕ್ರೀಮ್ ಕೇಳಿದ್ದಾರೆ. ಕೊಡೋದಿಲ್ಲ ಎಂದಿದ್ದಕ್ಕೆ ಸುಧಾಕರ್ ಮತ್ತು4 ಅವನ ಕಡೆಯವರು ಅಂಗಡಿ ಮೇಲೆ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನಾವು4 ಅಂಬೇಡ್ಕರ್ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ನಾವು4 ಯಾರ ತಂಟೆಗೂ ಹೋಗೋದಿಲ್ಲ. ಆದ್ರೂ ಕೂಡ ನಮ್ಮ4 ಸಮುದಾಯದವರಿಗೆ ಆ ರೀತಿ ಮಾಡಿದ್ದಾರೆ. ಆದಷ್ಟು ಬೇಗ ನಮಗೆ ನ್ಯಾಯ ಸಿಗಬೇಕು. ಇಲ್ಲವಾದರೆ ಉಗ್ರವಾದ ಹೋರಾಟ ಮಾಡ್ತೀವಿ ಅಂತ ಆಕ್ರೋಶ ವ್ಯಕ್ತಪಡಿಸಿದರು