ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಘಟಕದ ನಿರ್ದೇಶಕರಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಗದಗ ತಾಲೂಕಿನ ವಿಸ್ತರಣಾಧಿಕಾರಿ ಶರಣಪ್ಪ ಗರೇಬಾಳ ಆಯ್ಕೆಯಾಗಿದ್ದಾರೆ.
Advertisement
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾದ ಅಮಿತ್ ಬಿದರಿ ಆರ್, ಪ್ರಾಂಶುಪಾಲರಾದ ಮಂಜುಳಾ ಆರಿಕಟ್ಟಿ, ಕಾಶೀನಾಥ್ ಕೆ, ಅಶೋಕ ಲಮಾಣಿ, ಉಪನ್ಯಾಸಕರಾದ ಬಸವರಾಜ ಮಾನೋಟಗಿ, ಮುಖ್ಯೋಪಾಧ್ಯಾಯರಾದ ದೊಡ್ಡಪ್ಪ ವಾಲ್ಮೀಕಿ, ವಿಜಯಲಕ್ಷ್ಮಿ, ದೀಪಾ ಹೂಗಾರ್, ಸಾಹಿದ್ ಲೋಹಾರ್, ಪ್ರಮೋದ್ ಪಾಟೀಲ್, ಸವಿತಾ ಸಾಸ್ವಿಹಳ್ಳಿ, ಶಿವಾನಂದ ಲಮಾಣಿ ಸೇರಿದಂತೆ ಎಲ್ಲಾ ನಿಲಯ ಪಾಲಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೌಕರ ಬಳಗ ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಶುಭಕೋರಿದ್ದಾರೆ.