ಕಾವ್ಯ ಪ್ರಶಸ್ತಿಗೆ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲ್ಲೂಕಿನ ರಣತೂರು ಗ್ರಾಮದ ಸಂತೋಷ್‌ಕುಮಾರ್ ಬಸವರಾಜ ಅಂಗಡಿ ಅವರು ಭವದ ಅಗುಳಿ ಕವನ ಸಂಕಲನಕ್ಕೆ ಹುಬ್ಬಳ್ಳಿಯ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯ ಟ್ರಸ್ಟ್ ಕೊಡಮಾಡುವ ರಾಜ್ಯ ಮಟ್ಟದ 2023ನೇ ಸಾಲಿನ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ದೊರೆತಿದೆ.

Advertisement

ಸಂತೋಷ್‌ಕುಮಾರ್ ಬಸವರಾಜ ಅಂಗಡಿ ಮುಂಡರಗಿ ತಾಲ್ಲೂಕಿನ ಸಿಂಗಟಾಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಲಿಪಿಕಾರ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ಸಾಣೆಹಳ್ಳಿಯ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ ರಂಗಶಿಕ್ಷಣದಲ್ಲಿ ಪದವಿ, ಶಿವ ಸಂಚಾರ ತಂಡದಲ್ಲಿ ರಂಗನಟರಾಗಿ ಸುಮಾರು 150 ನಾಟಕ ಪ್ರದರ್ಶನ ನೀಡಿದ್ದಲ್ಲದೆ, ಹಲವಾರು ನಾಟಕಗಳನ್ನು ನಿರ್ದೇಶನ ಮಾಡಿ ಮಕ್ಕಳಿಗೆ ರಂಗಶಿಬಿರಗಳನ್ನು ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here