ಫುಟ್ ಪಾತ್​ನಲ್ಲಿ ಗಾಂಜಾ ಮಾರಾಟ; ಬೆಂಗಳೂರಿನಲ್ಲಿ ಆರೋಪಿ ಅರೆಸ್ಟ್

0
Spread the love

ಬೆಂಗಳೂರು:- ನಗರದಲ್ಲಿ ಗಾಂಜಾ ಮಾರಾಟದ ಖಚಿತ ಮಾಹಿತಿಯ ಮೇರೆಗೆ ಹಲಸೂರು ಗೇಟ್ ಠಾಣೆಯ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಕುಶಾಲ್ ಬಂಧಿತ ಆರೋಪಿ. ಆರೋಪಿ ಕುಶಾಲ್, ನಗರದ ಕೆ.ಜಿ ರಸ್ತೆಯ ಫುಟ್ ಪಾತ್ ಮೇಲೆ 1 ಕೆ.ಜಿ ತೂಕದ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿ ಮತ್ತೊಬ್ಬ ವ್ಯಕ್ತಿಯಿಂದ ಗಾಂಜಾ ಪಡೆದು ಮಾರಾಟ ಮಾಡುತ್ತಿದ್ದ ಎಂಬುದು ತಿಳಿದು ಬಂದಿದೆ.

ಕುಶಾಲ್ 1 ಕೆ.ಜಿಯಷ್ಟು ಗಾಂಜಾವನ್ನು ಮಾರಲು ಪ್ರಯತ್ನಿಸಿದರೆ, ಇನ್ನೂ 9 ಕೆಜಿ ಗಾಂಜಾ ಮತ್ತೋರ್ವನ ಮನೆಯಲ್ಲಿರುವುದು ತಿಳಿದು ಬಂತು. ಕೂಡಲೇ ಅವನ ಮನೆಗೆ ನುಗ್ಗಿದ ಪೊಲೀಸರು ಗಾಂಜಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ನಡುವೆ ಮನೆಯಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಸದ್ಯ ಒಬ್ಬನನ್ನು ಬಂಧಿಸಿರುವ ಹಲಸೂರು ಗೇಟ್ ಪೊಲೀಸರು, ತಪ್ಪಿಸಿಕೊಂಡವನನ್ನು ಹುಡುಕುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here