ಸ್ಯಾಂಡಲ್‌ವುಡ್ ನಟಿ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ಹಾಗೂ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಇದೀಗ ಅರವಿಂದ್ ರೆಡ್ಡಿ ನಟಿಯ ಕುರಿತು ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದು ಆಕೆಗೆ ಇನ್ನೂ ಮೂರು ಜನ ಜೊತೆ ಸಂಬಂಧ ಇತ್ತು ಎಂದು ಹೇಳಿದ್ದಾರೆ.
ನನ್ನ ಮೇಲೆ ಕಂಪ್ಲೇಂಟ್ ಕೊಟ್ಟಿರೋ ನಟಿಗೆ ಮೋಸ ಮಾಡೋದೇ ಕಾಯಕ. ಅನೇಕರಿಗೆ ಪ್ರೀತಿಯ ಹೆಸರಲ್ಲಿ ನಾಟಕವಾಡಿ ಹಣ ಪಡೆಯುತ್ತಾರೆ. ಆ ಬಳಿಕ ಬ್ಲ್ಯಾಕ್ ಮೇಲೆ ಮಾಡಿ ಬಿಟ್ಟು ಹೋಗುತ್ತಾರೆ. ಈ ಘಟನೆ ನಡೆದ ಬಳಿಕ ಹಲವರು ನನಗೆ ಕರೆ ಮಾಡಿ ಹೇಳಿದ್ದಾರೆ ಎಂದು ಅರವಿಂದ್ ರೆಡ್ಡಿ ಆರೋಪ ಮಾಡಿದ್ದಾರೆ.
ಆಕೆ ಮೂವರಿಗೆ ಇದೇ ರೀತಿ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸ ಮಾಡಿದ್ದಾಳೆ ಎಂದು ಅರವಿಂದ್ ಆರೋಪಿಸಿದ್ದು, ಒಬ್ಬರ ಬಳಿ 80 ಲಕ್ಷ ರೂಪಾಯಿ ಪಡೆದಿರುವುದಾಗಿಯೂ ದೂರಿದ್ದಾರೆ.
ಉದ್ಯಮಿ ಜೊತೆ ಸಂಬಂಧದಲ್ಲಿದ್ದ ನಟಿ, ಬ್ರೇಕಪ್ ನಂತರ ಅರವಿಂದ್ ರೆಡ್ಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಇದರ ನಂತರ ಪೊಲೀಸರು ಅರವಿಂದ್ ರೆಡ್ಡಿಯನ್ನು ಬಂಧಿಸಿದ್ದರು. ನಟಿ ತನ್ನ ವಿರುದ್ಧ ಮಾಡಿದ ಆರೋಪಗಳಿಂದ ಕೆರಳಿದ ಉದ್ಯಮಿ ಅರವಿಂದ್ ರೆಡ್ಡಿ, ದಿನಕ್ಕೊಂದು ಹೊಸ ಹೇಳಿಕೆ ಕೊಟ್ಟು ನಟಿಗ ಒಂದೊಂದೇ ಮುಖವನ್ನು ಬಿಚ್ಚಿಡುತ್ತಿದ್ದಾರೆ.



