ಹಾವೇರಿ:- ಶಿಗ್ಗಾವಿ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುತ್ತಿದ್ದಂತೆಯೇ “ಕೈ” ಪಾಳಯದಲ್ಲಿ ಭಿನ್ನಮತ ಭುಗಿಲೆದ್ದಿದೆ.
ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಬೇಸರ ಹೊರ ಹಾಕಿದ್ದಾರೆ. ಖಾದ್ರಿಗೆ ಟಿಕೆಟ್ ಕೊಡಿ ಅಂತ ನಮ್ಮ ಸಿದ್ದರಾಮಯ್ಯ ಸಾಹೇಬ್ರು, ಸಲೀಂ ಅಹ್ಮದ್ ಸೇರಿದಂತೆ ಎಲ್ಲ ನಾಯಕರು ಹೇಳಿದ್ದರು. ಅಲ್ಲದೇ ಶಾಸಕ ಶ್ರೀನಿವಾಸ್ ಮಾನೆ ಕೂಡಾ ನನಗೆ ಟಿಕೆಟ್ ಕೊಡಿ ಅಂತ ಹೇಳಿದ್ರು.
ಯಾಸೀರ್ ಖಾನ್ ಪಠಾಣ್ ರನ್ನು ಬಲಿ ಕಾ ಬಕ್ರಾ ಮಾಡೋಣ ಅಂತ ಶ್ರೀನಿವಾಸ್ ಮಾನೆ ನನ್ನ ಬಳಿ ಹೇಳಿದರು. ಆದರೆ ಇದೀಗ ಯಾಸೀರ್ ಖಾನ್ ಪಠಾಣ್ ಗೆ ಟಿಕೆಟ್ ಸಿಕ್ಕಿದೆ.
ಯಾಸೀರ್ ಖಾನ್ ಪಠಾಣ್ ಒಬ್ಬ ರೌಡಿ ಶೀಟರ್, ಗೂಂಡಾ. ಹಿಂದೆ ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡಿದವನು. ಅಲ್ಲದೇ ಈತ ಬೊಮ್ಮಾಯಿ ಏಜೆಂಟ್. ಇಂತವನಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಯಾಸೀರ್ ಖಾನ್ ಪಠಾಣ್ ವಿರುದ್ದ ಅಜ್ಜಂಫೀರ್ ಖಾದ್ರಿ ಕಿಡಿಕಾರಿದ್ದಾರೆ.
ನನ್ನ ಮನವೊಲಿಕೆಗೆ ಕಾಂಗ್ರೆಸ್ ಮುಖಂಡರಿಂದ ಕರೆ ಬಂದಿದೆ. ಆದ್ರೆ ಯಾರು ಕರೆ ಮಾಡಿದ್ರು ಹೇಳಲು ಬರಲ್ಲ. ಕಳೆದ ಬಾರಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಹದಮ್ ಯೂಸೂಪ್ ಸವಣೂರು ಹೆಸರು ಘೋಷಿಸಿ ಕೊನೆಗೆ ಯಾಸೀರ್ ಖಾನ್ ಪಠಾಣ್ ಗೆ ಟಿಕೆಟ್ ನೀಡಿದಂತೆ ಈಗಲೂ ಮಾಡಲಿ. ಯಾಸೀರ್ ಖಾನ್ ಪಠಾಣ್ ಬದಲಿಸಿ ನನ್ನನ್ನು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿ ಆಗಿ ನಾಮಿನೇಶನ್ ಮಾಡುವೆ.
ಇಲ್ಲದಿದ್ದರೆ ಬೆಂಬಲಿಗರ ಅಭಿಪ್ರಾಯ ಕೇಳಿ ನಿರ್ಧಾರ ತಗೊಳ್ತೀನಿ ಎಂದು ಖಾದ್ರಿ ಹೇಳಿಕೆ ಕೊಟ್ಟಿದ್ದಾರೆ.