ಶರಣರಿಗೆ ಮರಣವೇ ಮಹಾನವಮಿ : ಮಂಜುನಾಥ ಶಾಸ್ತ್ರಿ

0
Shivanubhava Sampada-6 programme
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಅನುಭಾವಿಗಳನ್ನು, ಸತತ ಧರ್ಮದ ಹಾದಿಯಲ್ಲಿ ನಡೆಯುವವರನ್ನು ಶರಣರು ಎಂದು ಕರೆಯಲಾಗುತ್ತಿದೆ. ಸಂಸಾರಿಗಳಾಗಿದ್ದೂ ಧರ್ಮದ ಹಾದಿ ತುಳಿದ ಅದೆಷ್ಟೋ ಜನ ಶರಣರು ಈ ನಾಡಿನಲ್ಲಿ ಆಗಿ ಹೋಗಿದ್ದಾರೆ. ಅವರಿಗೆ ಬಸವಣ್ಣನವರೇ ಎಲ್ಲವೂ ಆಗಿದ್ದರು. ಶರಣರು ಮರಣಕ್ಕೆ ಎಂದಿಗೂ ಹೆದರಿದವರಲ್ಲ. ಹುಟ್ಟಿದ ಮೇಲೆ ಸಾವು ಖಚಿತ ಎಂಬುದನ್ನು ತಿಳಿದುಕೊಂಡಿದ್ದ ಅವರು ನಿಜವಾದ ಶರಣನಿಗೆ ಮರಣವೇ ಎಂದಿಗೂ ಮಹಾನವಮಿ ಎಂದು ನಂಬಿಕೊಂಡಿದ್ದರು ಎಂದು ಮಂಜುನಾಥ ಶಾಸ್ತ್ರಿಗಳು ಹೇಳಿದರು.

Advertisement

ಸಮೀಪದ ನಿಡಗುಂದಿ ಗ್ರಾಮದ ಶ್ರೀ ಕುಮಾರೇಶ್ವರ ಬಿಲ್ವಪತ್ರೆ ವನದಲ್ಲಿ ಜರುಗಿದ ಶಿವಾನುಭವ ಸಂಪದ-6 ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಶರಣರ ಸಂಪತ್ತಿನ ಕಾಲವೆಂದರೆ ಅದು 12ನೇ ಶತಮಾನ. ಆಗ ಕೇವಲ ಪುರುಷರಷ್ಟೇ ಅಲ್ಲದೆ ಮಹಿಳೆಯರೂ ಕೂಡ ವಚನಗಳನ್ನು ರಚನೆ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದರು. ತಮ್ಮ ನಿತ್ಯದ ಬದುಕಿನ ಅನುಭವಗಳನ್ನೇ ಅವರು ವಚನಗಳನ್ನಾಗಿಸಿ ಹೊಸೆದರು. ಪ್ರತಿಯೊಬ್ಬ ವಚನಕಾರನೂ ತಮ್ಮ ತಮ್ಮ ಅಂಕಿತನಾಮವನ್ನಿಟ್ಟುಕೊಂಡು ವಚನಗಳ ರಚನೆ ಮಾಡಿದ್ದು, ಆಗ ರಚನೆಯಾದ ವಚನಗಳು ಇಂದಿಗೂ ನಮ್ಮ ಬದುಕಿಗೆ ದಾರಿದೀಪವಾಗಿವೆ ಎಂದರು.

ಶ್ರೀ ಅಡವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಶ್ರೀ ಷಣ್ಮುಖಪ್ಪಜ್ಜನವರು ಸಮ್ಮುಖ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಶಿವಪೂರ(ಹ) ಗ್ರಾಮದ ಸದ್ಭಕ್ತರು ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳವರಿಗೆ ಗೌರವ ಸಮರ್ಪಣೆ ಮಾಡಿದರು. ಅಕ್ಕಮಹಾದೇವಿ ಮಹಿಳಾ ವೇದಿಕೆಯ ತಾಯಂದಿರಿಂದ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಮಾರಂಭದಲ್ಲಿ ಅನೇಕ ಸಾಧಕರನ್ನು ಸನ್ಮಾನಿಸಲಾಯಿತು.

ಜೀವನದ ಪ್ರತಿ ಹಂತವನ್ನೂ ಶರಣರು ವಚನಗಳಲ್ಲಿ ವಿವರಿಸಿ, ಮರಣವೆಂದರೆ ಯಾಕೆ ಹೆದರಬಾರದು ಎಂಬುದರ ಬಗ್ಗೆಯೂ ವಿವರಣೆಯನ್ನು ನೀಡಿದ್ದಾರೆ. ಆದ್ದರಿಂದ ಯಾರು ವಚನಗಳನ್ನು ಸರಿಯಾಗಿ ಪಚನ ಮಾಡಿಕೊಂಡಿದ್ದಾರೆಯೋ ಅವರೆಂದಿಗೂ ಸಾವಿಗೆ ಅಂಜುವುದಿಲ್ಲ. ಬದಲಾಗಿ ಅವರು ಸಾವನ್ನೇ ಮಹಾನವಮಿ ಎಂದು ತಿಳಿದುಕೊಳ್ಳುತ್ತಾರೆ ಎಂದು ಶಾಸ್ತಿçಗಳು ಹೇಳಿದರು.


Spread the love

LEAVE A REPLY

Please enter your comment!
Please enter your name here