HomeKarnataka Newsಮದುವೆ ಸಂಭ್ರಮದಲ್ಲಿದ್ದವರಿಗೆ ಆಘಾತ: ಮಂಟಪದಿಂದ 1 ಕೋಟಿ ರೂ. ಮೌಲ್ಯದ ಬಂಗಾರ ಕಳವು, ದೂರು ದಾಖಲು!

ಮದುವೆ ಸಂಭ್ರಮದಲ್ಲಿದ್ದವರಿಗೆ ಆಘಾತ: ಮಂಟಪದಿಂದ 1 ಕೋಟಿ ರೂ. ಮೌಲ್ಯದ ಬಂಗಾರ ಕಳವು, ದೂರು ದಾಖಲು!

For Dai;y Updates Join Our whatsapp Group

Spread the love

ಬೆಂಗಳೂರು: ಖದೀಮರು ಮದುವೆ ಮನೆಯಲ್ಲಿ ಬರೋಬ್ಬರಿ 1 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಅಮೆರಿಕದಲ್ಲಿ ವಾಸವಿರುವ 52 ವರ್ಷದ ಮಹಿಳಾ ವೈದ್ಯೆ ಸಿರುವೆಲ್ಲ ಶ್ರೀದೇವಿ ಎಂಬವರಿಗೆ ಸೇರಿದ ಚಿನ್ನಾಭರಣವನ್ನು ಮದುವೆ ಮಂಟಪದಲ್ಲಿ ಬುಧವಾರ ಸಂಜೆ ದೋಚಿರೋದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಿಂದ ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ.

ತಮ್ಮ ಸಹೋದರನ ಮಗನ ಮದುವೆಗೆ ಏಪ್ರಿಲ್ 18ರಂದು ಬೆಂಗಳೂರಿಗೆ ಬಂದಿದ್ದ ಶ್ರೀದೇವಿ ಅವರು, ಗಂಗಾನಗರದಲ್ಲಿರುವ ತಮ್ಮ ಸಹೋದರರ ಮನೆಯಲ್ಲಿ ತಂಗಿದ್ದರು. ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಬಿಡರಹಳ್ಳಿಯ ಓಲ್ಡ್ ಮದ್ರಾಸ್ ರಸ್ತೆಯ ಎಸ್‌ಡಿಪಿ ಪ್ಯಾಲೆಸ್ ಮಂಟಪಕ್ಕೆ ತೆರಳಿದ್ದರು. ಸಂಜೆ 6.30ರ ವೇಳೆಗೆ ಅವರ ಸಹೋದರರು ಚಿನ್ನಾಭರಣಗಳಿದ್ದ ಪೆಟ್ಟಿಗೆಯನ್ನು ಮಂಟಪದಲ್ಲೇ ನೀಡಿದ್ದಾರೆ. ಆ ಪೈಕಿ ಸ್ವಲ್ಪ ಆಭರಣಗಳನ್ನು ಧರಿಸಿ ಉಳಿದವುಗಳನ್ನು ಕೊಠಡಿಯಲ್ಲಿ ಇಟ್ಟು ಬಾಗಿಲು ಲಾಕ್ ಮಾಡಿ ಸ್ವಾಗತ ಕಾರ್ಯಕ್ರಮಕ್ಕೆ ಅವರು ಹೋಗಿದ್ದರು. ಕೊಠಡಿಗೆ ಲಾಕ್ ಮಾಡಿದ್ದರೂ ಈ ಆಭರಣಗಳು ಕಳವಾಗಿರೋದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇನ್ನು ಘಟನೆ ಸಂಬಂಧ ಸಿರುವೆಲ್ಲ ಶ್ರೀದೇವಿ ಅವರು ಗುರುವಾರ ಮಧ್ಯಾಹ್ನ ದೂರು ನೀಡಿದ್ದಾರೆ. ಕಳುವಾಗಿರೋದು ಸುಮಾರು 725 ಗ್ರಾಂ ಚಿನ್ನಾಭರಣಗಳು ಎನ್ನಲಾಗಿದ್ದು, ದೂರುದಾರರಿಗೆ ಪರಿಚಿತರಾದವರು ಅಥವಾ ಕುಟುಂಬದವರಲ್ಲಿ ಯಾರಾದರೂ ಕೃತ್ಯ ಎಸಗಿರಬಹುದೆಂಬ ಶಂಕೆಯೂ ಇದೆ. ಹೀಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಜೊತೆಗೆ ಕೊಠಡಿಗೆ ಪ್ರವೇಶ ಹೊಂದಿದ್ದವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!