ಪ್ಯಾಂಟ್ ಬಿಚ್ಚಿ ಯುವತಿಗೆ ಖಾಸಗಿ ಅಂಗ ಪ್ರದರ್ಶನ: ಹಾಡಹಗಲೇ ಆಟೋ ಚಾಲಕನಿಂದ ಕೃತ್ಯ!

0
Spread the love

ಬೆಂಗಳೂರು:- ಪ್ಯಾಂಟ್ ಬಿಚ್ಚಿ ಯುವತಿಗೆ ಹಾಡಹಗಲೇ ಆಟೋ ಚಾಲಕ ತನ್ನ ಖಾಸಗಿ ಅಂಗ ತೋರಿಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.

Advertisement

ರಾಜಾಜಿನಗರದಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವ ಯುವತಿಯೊಬ್ಬಳಿಗೆ ಆಟೋ ಚಾಲಕ ತನ್ನ ಪ್ಯಾಂಟ್​ ಬಿಚ್ಚಿ ಖಾಸಗಿ ಭಾಗವನ್ನು ತೋರಿಸಿ ವಿಕೃತಿ ಮೆರೆದಿದ್ದಾನೆ. ಅದೂ ಕೂಡ ಹಾಡ ಹಗಲೇ ತೀರಾ ವಿಕೃತಿಯ ರೀತಿಯಲ್ಲಿ ಮಹಿಳೆ ಮುಂದೆ ಎರಡೆರೆಡು ಬಾರಿ ಪ್ಯಾಂಟ್ ಬಿಚ್ಚಿ ಅಂಗಾಂಗ ತೋರಿಸಿದ್ದಾನೆ.

ಇಂದು ಯುವತಿ ಮಧ್ಯಾಹ್ನ ಊಟಕ್ಕೆಂದು ಬ್ಯೂಟಿ ಪಾರ್ಲರ್ ನಿಂದ ಅನತಿ ದೂರದಲ್ಲಿದ್ದ ಮನೆಗೆ ಹೋಗುವಾಗ ಈಸ್ಟ್ ವೆಸ್ಟ್ ಕಾಲೇಜು ಬಳಿ ಫಾಲೋ ಮಾಡಿಕೊಂಡು ಬಂದ ಆಟೋ ಚಾಲಕ, ಯಾರೂ ಇಲ್ಲದ ಸಮಯ ನೋಡಿ ಪ್ಯಾಂಟ್ ಜಿಪ್ ಬಿಚ್ಚಿ ಖಾಸಗಿ ಅಂಗ ಪ್ರದರ್ಶಿಸಿದ್ದಾನೆ. ಆಟೋ ಚಾಲಕನ ಲೈಂಗಿಕ ಚೇಷ್ಟೆಗೆ ಬ್ಯೂಟಿಷಿಯನ್ ಯುವತಿ ಬೆಚ್ಚಿ ಬಿದ್ದಿದ್ದಾಳೆ. ಆ ವೇಳೆ ಭಯದಿಂದ ಯುವತಿ ತನ್ನ ಕಾಲಲ್ಲಿದ್ದ ಚಪ್ಪಲಿ ಕಿತ್ತುಕೊಂಡು ಎಸೆದಿದ್ದಾಳೆ. ಬಳಿಕ ಆಟೋ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.

ಇದಾದ ಬಳಿಕ ಸ್ವಲ್ಪ ಹೊತ್ತಿನಲ್ಲೇ ಸೈಕೋಪಾತ್ ಆಟೋ ಚಾಲಕ, ಮತ್ತೆ ಯುವತಿ ಮುಂದೆ ಬಂದು ಮತ್ತೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದಾನೆ. ಇದನ್ನ ಕಂಡ ಯುವತಿ ಬೊಬ್ಬೆ ಹಾಕಿದ್ದಾಳೆ. ಬಳಿಕ ಏನಾಯ್ತು ಎಂದು ಸ್ಥಳೀಯರು ಆಗಮಿಸುತ್ತಿದ್ದಂತೆಯೇ ಸೈಕೋ ಆಟೋ ಚಾಲಕ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here