ಶೀಘ್ರವೇ ಕೋಲ್ಡ್ ಸ್ಟೋರೇಜ್ ನಿರ್ಮಾಣ : ಜಿ.ಎಸ್. ಪಾಟೀಲ

0
Support Price Scheme Buying Center and Supply Program of Backsowing Seeds
Spread the love

ವಿಜಯಸಾಕ್ಷಿ ಸುದ್ದಿ, ರೋಣ : ಸರಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಈಗಾಗಲೇ ತಾಲೂಕಿನ ರೈತರು ತಮ್ಮ ಹೆಸರನ್ನು ನೋಂದಾಯಿಸಿದ್ದು, 26 ಸಾವಿರ ಕ್ವಿಂಟಲ್ ಹೆಸರು ಬೆಳೆ ಖರೀದಿ ಪ್ರಕ್ರೀಯೆ ನಡೆಯುತ್ತಿರುವುದು ಸ್ವಾಗತರ್ಹವಾಗಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.

Advertisement

ಅವರು ಶುಕ್ರವಾರ ಬೆಂಬಲ ಬೆಲೆ ಯೋಜನೆ ಖರೀದಿ ಕೇಂದ್ರ ಹಾಗೂ ಹಿಂಗಾರು ಬಿತ್ತನೆ ಬೀಜಗಳ ಪೂರೈಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರುವ ಮೂಲಕ ನಾಡಿನ ರೈತರಿಗೆ ಅನುಕೂಲ ಕಲ್ಪಿಸಿದ್ದು ಇತಿಹಾಸ ಸೃಷ್ಟಿಸಿದೆ. ಈಗ ಮತ್ತೆ ಯೋಜನೆಗೆ ಹೊಸ ರೂಪವನ್ನು ಕೊಡಲಾಗಿದೆ. ರೈತರು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂದರು.

ಸರಕಾರ ಸಕಾಲಕ್ಕೆ ರೈತರಿಗೆ ಬಿತ್ತನೆ ಬೀಜವನ್ನು ವಿತರಿಸುವ ಜೊತೆಗೆ ರೈತರ ಹಿತದೃಷ್ಟಿಯಿಂದ ಕಡಲೆ ಬೀಜಕ್ಕೆ 500 ರೂ.ಗಳ ಸಬ್ಸಿಡಿಯನ್ನು ಒದಗಿಸಲಾಗಿದ್ದು, ಓರ್ವ ರೈತನಿಗೆ 5 ಪ್ಯಾಕೆಟ್‌ಗಳವರೆಗೆ ಬಿತ್ತನೆ ಬೀಜಗಳನ್ನು ನೀಡಲಾಗುತ್ತದೆ. ಮುಖ್ಯವಾಗಿ ರೈತರು ಬೀಜೋತ್ಪಾದನೆಯನ್ನೂ ಮಾಡುವ ಮೂಲಕ ಅಧಿಕ ಇಳುವರಿಯನ್ನು ಪಡೆಯಬೇಕು ಎಂದರು.

ತಾಲೂಕಿನ ರೈತರು ಬೆಳೆದ ಬೆಳೆ ರಕ್ಷಣೆ ಸಲುವಾಗಿ ಕೆಲ ದಿನಗಳಲ್ಲಿ ಕೋಲ್ಡ್ ಸ್ಟೋರೇಜ್‌ನ್ನು ನಿರ್ಮಿಸಲು ಮುಂದಾಗಿದ್ದು, ಇದರಿಂದ ತಾಲೂಕಿನ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಅಧಿಕಾರಿಗಳು ಸಹ ರೈತರಿಗೆ ಸಮರ್ಪಕವಾಗಿ ಮಾಹಿತಿಯನ್ನು ನೀಡಬೇಕು. ಅಲ್ಲದೆ ಯಾವ ಬೆಳೆಗೆ ಎಷ್ಟು ಸಬ್ಸಿಡಿ ಸರಕಾರ ಕೊಡುತ್ತದೆ ಎಂಬ ವಿವರವನ್ನು ಸೂಚನಾ ಫಲಕದಲ್ಲಿ ಅಳವಡಿಸಿ ಪ್ರಾಮಾಣಿಕತೆಯನ್ನು ಮೆರೆಯಬೇಕು ಎಂದರು.

ವಿ.ಆರ್. ಗುಡಿಸಾಗರ, ಮುತ್ತಣ್ಣ ಸಂಗಳದ, ಬಸವರಾಜ ಜಗ್ಗಲ, ಶಿವಣ್ಣ ಅರಹುಣಸಿ, ಶಂಕರ ಕಳಗಣ್ಣವರ, ವೆಂಕಣ್ಣ ಬಂಗಾರಿ, ಯೂಸುಫ್ ಇಟಗಿ, ಬಸವರಾಜ ನವಲಗುಂದ, ಪರಶುರಾಮ ಅಳಗವಾಡಿ, ಪ್ರಭು ಮೇಟಿ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

ಪಟ್ಟಣದಲ್ಲಿರುವ ವ್ಯಾಪಾರಸ್ಥರು ಎಪಿಎಂಸಿಯಲ್ಲಿ ತಮ್ಮ ವಹಿವಾಟನ್ನು ನಡೆಸಬೇಕು. ಅಂದಾಗ ಪಟ್ಟಣ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಇದರಿಂದ ಇತರೆ ವಹಿವಾಟುಗಳಿಗೂ ಸಹಕಾರಿಯಾಗಲಿದೆ. ಯುವಕರು ವ್ಯಾಪಾರ ನಡೆಸುವ ಪರವಾನಿಗೆ ಪತ್ರ ಹೊಂದಬೇಕು. ಯುವಕರು ವ್ಯಾಪಾರ ನಡೆಸುವುದಕ್ಕೆ ಬಂದರೆ ಎಪಿಎಂಸಿ ಯಾರ್ಡ್ನಲ್ಲಿ ಕೊಠಡಿಗಳನ್ನು ನಿರ್ಮಿಸಿಕೊಡಲಾಗುವುದು.
– ಜಿ.ಎಸ್. ಪಾಟೀಲ.
ಶಾಸಕರು.


Spread the love

LEAVE A REPLY

Please enter your comment!
Please enter your name here