ಕೊಡಗು:- ಜಿಲ್ಲೆಯ ಮಡಿಕೇರಿ ತಾಲೂಕಿನ ಹೊಸ್ಕೇರಿ ಗ್ರಾಮದ ದೇವಯ್ಯನ ತೋಟದ ಮನೆಯಲ್ಲಿ ಕುಡಿದ ಮತ್ತಿನಲ್ಲಿ ಅಸ್ಸಾಂ ಕಾರ್ಮಿಕರ ಮಧ್ಯೆ ಹೊಡೆದಾಟ ನಡೆದಿದ್ದು, ಈ ವೇಳೆ ತಂದೆಯನ್ನೇ ಹೊಡೆದು ಪುತ್ರ ಕೊಲೆ ಮಾಡಿರುವಂತಹ ಘಟನೆ ಜರುಗಿದೆ.
ಡಿ.12 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೂನೋ (60) ಕೊಲೆಯಾದ ವ್ಯಕ್ತಿ. ಪ್ರಶಾಂತ್ (28) ಕೊಲೆ ಮಾಡಿದ ಪುತ್ರ. ಕೊಲೆ ಬಳಿಕ ಎಸ್ಟೇಟ್ ಮಾಲಿಕನಿಂದ ಮಡಿಕೇರಿಯ ಹಿಂದೂ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ಮಾಡಲಾಗಿದೆ. ಸದ್ಯ ಪೊಲೀಸರು ಪ್ರಶಾಂತ್ ಮತ್ತು ಎಸ್ಟೇಟ್ ಮಾಲಿಕ ಮಂಡಿ ದೇವಯ್ಯ(65)ರನ್ನು ಬಂಧಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



