ಹಾಸನ:- ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ತಂದೆಯನ್ನೇ ಮಗ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜರುಗಿದೆ.
60 ವರ್ಷದ ಸತೀಶ್ ಕೊಲೆಯಾದ ತಂದೆ. 28 ವರ್ಷದ ರಂಜಿತ್ ತಂದೆಯನ್ನು ಹತ್ಯೆಗೈದ ಆರೋಪಿ. ಸತೀಶ್ ಸರಿಯಾಗಿ ಕುಟುಂಬ ನಿರ್ವಹಣೆ ಮಾಡದ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ರಂಜಿತ್ ಹಾಗೂ ಆತನ ತಾಯಿ ನಿರ್ಮಲ ಕೆ.ಆರ್.ನಗರದಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ಇದೇ ವಿಚಾರಕ್ಕೆ ತಂದೆ ಜೊತೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ನಿನ್ನೆ ರಾತ್ರಿ ತಂದೆ-ಮಗನ ನಡುವೆ ಜಗಳ ಶುರುವಾಗಿದ್ದು, ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿ ಸ್ಟೀಲ್ ರಾಡ್‌ನಿಂದ ತಂದೆ ಸತೀಶ್ ತಲೆಗೆ ಹೊಡೆದು ರಂಜಿತ್ ಕೊಲೆಗೈದಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



