ಬೆಂಗಳೂರು: 2025–26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 23ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟಿಸಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ವಿವರಗಳನ್ನು ಹಂಚಿಕೊಂಡಿದ್ದಾರೆ.
ಈ ವರ್ಷ ಪರೀಕ್ಷೆಗೆ ಹಾಜರಾದ 7,70,209 ವಿದ್ಯಾರ್ಥಿಗಳ ಪೈಕಿ 7,24,794 ಮಂದಿ ಉತ್ತೀರ್ಣರಾಗಿದ್ದು, ಒಟ್ಟು ಪಾಸ್ ಪ್ರಮಾಣ ಶೇ. 94.1ಕ್ಕೆ ಏರಿಕೆಯಾಗಿದೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ರಾಜ್ಯದಾದ್ಯಂತ 2,870 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡೆದಿತ್ತು.
ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ. 98.40 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದು, ಶೇ. 98.18 ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಶೇ. 85.06 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.
ಜಿಲ್ಲಾವಾರು ಫಲಿತಾಂಶ
- ದಕ್ಷಿಣ ಕನ್ನಡ ಜಿಲ್ಲೆ- 98.40%
- ಉಡುಪಿ – 98.18%
- ಉತ್ತರ ಕನ್ನಡ- 98.09%
- ಹಾಸನ- 97.51%
- ಮಂಡ್ಯ- 97.45%
- ಶಿರಸಿ- 97.21%
- ಹಾವೇರಿ- 96.87%
- ಕೊಡಗು- 96.70%
- ಶಿವಮೊಗ್ಗ- 96.56%
- ವಿಜಯನಗರ- 96.39%
- ಬೆಂಗಳೂರು ಗ್ರಾಮಾಂತರ – 95.84%
- ಧಾರವಾಡ – 95.59%
- ಕೋಲಾರ- 95.50%
- ಬಾಗಲಕೋಟೆ- 95.42%
- ಬೆಂಗಳೂರು ಉತ್ತರ- 95.34%
- ಗದಗ- 95.24%
- ಚಿಕ್ಕಮಗಳೂರು- 94.99%
- ಬೆಳಗಾವಿ – 94.75%
- ದಾವಣಗೆರೆ- 94.64%
- ಮೈಸೂರು- 94.50%
- ರಾಯಚೂರು- 94.41%
- ವಿಜಯಪುರ- 94.17%
- ಚಿಕ್ಕೋಡಿ- 94.09%
- ಬಳ್ಳಾರಿ- 93.36%
- ಕೊಪ್ಪಳ- 93.10%
- ರಾಮನಗರ- 92.83%
- ಚಿತ್ರದುರ್ಗ- 92.25%
- ಬೀದರ್- 92.18%
- ತುಮಕೂರು- 92.04%
- ಚಾಮರಾಜನಗರ- 91.89%
- ಯಾದಗಿರಿ- 91.89%
- ಬೆಂಗಳೂರು ದಕ್ಷಿಣ- 91.65%
- ಚಿಕ್ಕಬಳ್ಳಾಪುರ- 90.88%
- ಮಧುಗಿರಿ- 90.26%
- ಕಲಬುರಗಿ-85.06%
ಇನ್ನೂ, ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಪರಿಪೂರ್ಣ ಸಾಧನೆ ಮಾಡಿದ್ದು, 625ರಲ್ಲಿ 625 ಅಂಕಗಳನ್ನು ಪಡೆದಿದ್ದಾರೆ. ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ ಹಾಗೂ ರಾಯಚೂರಿನ ಸುಖದೇವ್ ಸಂಪೂರ್ಣ ಅಂಕಗಳನ್ನು ಗಳಿಸಿದ್ದಾರೆ.



