Bigg Boss Kannada: ಫಿನಾಲೆ ವೇದಿಕೆಗೆ ಸುದೀಪ್ ಗ್ರ್ಯಾಂಡ್ ಎಂಟ್ರಿ: ಸಖತ್ ಸ್ಟೆಪ್ಸ್ ಹಾಕಿದ ಕಿಚ್ಚ!

0
Spread the love

ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಗ್ರ್ಯಾಂಡ್​ ಫಿನಾಲೆ ಇಂದು ನಡೆಯಲಿದೆ. ಹೀಗಾಗಿ ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಬಿಗ್​ಬಾಸ್​ ಮನೆಯಲ್ಲಿ 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಲವು ಡ್ಯಾನ್ಸ್ ಹಾಗೂ ಸಂಭಾಷಣೆಗಳ ಜೊತೆ ಬಿಗ್ ಬಾಸ್ ಫಿನಾಲೆ ಸಾಗಲಿದೆ. ಇದರ ಜೊತೆಗೆ ಇಂದಿನ ಎಪಿಸೋಡ್​ನಲ್ಲಿ ಮೂವರನ್ನು ಎಲಿಮಿನೇಟ್ ಕೂಡ ಮಾಡಲಾಗುತ್ತದೆ. ಈ ಮೂಲಕ ಟಾಪ್ 3ರಲ್ಲಿ ಯಾರು ಇರುತ್ತಾರೆ ಎಂಬುದು ಇಂದೇ ಗೊತ್ತಾಗಲಿದೆ.

Advertisement

ಇದರ ನಡುವೆ ವೇದಿಕೆಯಲ್ಲಿ ಬಾದಷಾ ಕಿಚ್ಚ ಸುದೀಪ್ ಸಖತ್ ಆಗಿಯೇ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡ ಮ್ಯಾಕ್ಸ್ ಸಿನಿಮಾದ ಸಾಂಗ್​ಗೆ ಕಿಚ್ಚ ಸೂಪರ್​ ಆಗಿಯೇ ಸ್ಟೆಪ್ಸ್ ಹಾಕಿದ್ದಾರೆ. ಅಷ್ಟು ಸುಲಭವಾಗಿ ಎಲ್ಲಿಯು ಸುದೀಪ್ ಅವರು ವೇದಿಕೆ ಮೇಲೆ ಡ್ಯಾನ್ಸ್ ಮಾಡಲ್ಲ. ಆದರೆ ಬಿಗ್​ಬಾಸ್​​ನ ಕಲರ್ ಫುಲ್ ಆಗಿ ಅದ್ಧೂರಿಯಾಗಿರುವ ಸ್ಟೇಜ್ ಮೇಲೆ ಸುದೀಪ್ ಒಂದೆರಡು ಹೆಜ್ಜೆಗಳನ್ನು ಹಾಕಿ ರಂಜಿಸಿದ್ದಾರೆ.

17ನೇ ವಾರದ ಬಿಗ್​ಬಾಸ್​ ಜರ್ನಿ ಇನ್ನೇನು ಮುಕ್ತಾಯ ಆಗುತ್ತಿದೆ. ಮೊದಲು 17 ಸ್ಪರ್ಧಿಗಳು ಮನೆಗೆ ನೇರವಾಗಿ ಎಂಟ್ರಿಕೊಟ್ಟಿದ್ದರು. ಇದಾದ ಮೇಲೆ ಹನಮಂತು, ರಜತ್ ಸೇರಿ ಮೂವರು ವೈಲ್ಡ್ ಕಾರ್ಡ್ ಮೂಲಕ ಮನೆಯೊಳಕ್ಕೆ ಬಂದಿದ್ದರು.

ಈ ರೀತಿ ವೈಲ್ಡ್ ಕಾರ್ಡ್​ನಲ್ಲಿ ಎಂಟ್ರಿ ಕೊಟ್ಟವರ ಪೈಕಿ ಇಬ್ಬರು ಈಗ ಫಿನಾಲೆ ಹಂತದಲ್ಲಿರುವುದು ವಿಶೇಷವಾಗಿದೆ. ಒಟ್ಟು 6 ಜನರಲ್ಲಿ ಒಬ್ಬರು ಮಾತ್ರ ಫೈನಲ್​ನಲ್ಲಿ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ.  ಸುದೀಪ್ ಅವರು ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ಇದರ ಪ್ರೋಮೋನ ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

 


Spread the love

LEAVE A REPLY

Please enter your comment!
Please enter your name here