ಬೆಳಗಾವಿಯಲ್ಲಿ ಮೈಸೂರು ಮೂಲದ ವಿವಾಹಿತೆ ಅನುಮಾನಾಸ್ಪದ ಸಾವು!

0
Spread the love

ಬೆಳಗಾವಿ: ಮೈಸೂರು ಮೂಲದ ವಿವಾಹಿತೆ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮಂಜುಳಾ (22) ಸಾವನ್ನಪ್ಪಿರುವ ದುರ್ದೈವಿಯಾಗಿದ್ದು, ಒಂದೂವರೆ ವರ್ಷದ ಹಿಂದೆ ಬೆಳಗಾವಿ ಮಚ್ಛೆ ಮೂಲದ ಬಾಳೇಶ ಜೊತೆಗೆ ಮಂಜುಳಾ ಲವ್ ಆಗಿದ್ದು, ಇನ್ಸ್ಟಾಗ್ರಾಂ ಮೂಲಕ ಆಗಿದ್ದ ಪ್ರೀತಿ ಬಳಿಕ ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದರು.

Advertisement

ಬಾಳೇಶ ಬೆಳಗಾವಿ ಉದ್ಯಮಭಾಗದ ಕೈಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡ್ತಿದ್ದನು. ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮಂಜುಳಾ ಶವ ಪತ್ತೆಯಾಗಿದ್ದು, ಮಂಜುಳಾ ಪೋಷಕರು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here