ಕೋಲಾರ:- ಅನುಮಾನಾಸ್ಪದ ಸೂಟ್ಕೇಸ್ ಪತ್ತೆ ಆಗಿದ್ದು, ಅಲ್ಲಿ ಬರುತ್ತಿದ್ದ ವಿಚಿತ್ರ ಶಬ್ದ ಕೇಳಿ ಜನತೆ ಆತಂಕಗೊಂಡ ಘಟನೆ ಕೋಲಾರ ಹೊರವಲಯದ ಟಮಕ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜರುಗಿದೆ.
Advertisement
ಸೂಟ್ಕೇಸ್ನಿಂದ ಅಲಾರಾಂ ರೀತಿಯ ಶಬ್ದ ಬರುತ್ತಿದ್ದ ಹಿನ್ನೆಲೆಯಲ್ಲಿ ಬಾಂಬ್ ಇರಬಹುದು ಎಂದು ಹೆದರಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ವಿಚಾರ ತಿಳಿಯುತ್ತಿದ್ದಂತೆ ಗಲ್ಪೇಟೆ ಠಾಣೆ ಪೊಲೀಸರು, ಎಸ್ಪಿ ನಿಖಿಲ್, ಹೆಚ್ಚುವರಿ ಎಸ್ಪಿ ರವಿಶಂಕರ್ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದರು
ಬಳಿಕ, ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದಾಗ, ಅದು ಕ್ರೌನ್ ಕಂಪನಿಯ ಸೂಟ್ಕೇಸ್ ಎಂದು ತಿಳಿಯಿತು. ಸೆನ್ಸಾರ್ ಸೂಟ್ಕೇಸ್ ಆಗಿದ್ದು, ಯಾರೋ ಲಾಕರ್ ಪಾಸ್ವರ್ಡ್ ಅನ್ನು ತಪ್ಪಾಗಿ ಹಾಕಿದ್ದರಿಂದ ಶಬ್ದ ಬಂದಿದೆ ಎಂದು ಮಾಹಿತಿ ನೀಡಿದರು.