ಹೈ-ಸ್ಪೀಡ್‌ ರೇಸಿಂಗ್‌ ಅಭ್ಯಾಸದ ವೇಳೆ ತಮಿಳು ನಟ ಅಜಿತ್ ರೇಸ್‌ ಕಾರು ಅಪಘಾತ!

0
Spread the love

ನವದೆಹಲಿ:- ರೇಸಿಂಗ್‌ ತರಬೇತಿ ವೇಳೆ ತಮಿಳು ನಟ ಅಜಿತ್‌ ಕುಮಾರ್‌ ಅವರ ಕಾರು ಅಪಘಾತಕ್ಕೀಡಾಗಿದ್ದು, ಇದರ ಭೀಕರ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

Advertisement

ದುಬೈಯ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಇಂದು ಕಾರು ರೇಸಿಂಗ್‌ ತರಬೇತಿ ನಡೆಸುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿದೆ ಅವರು ಪಾರಾಗಿದ್ದಾರೆ. ಮುಂಬರುವ ರೇಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದಕ್ಕಾಗಿ ಅವರು ದುಬೈನಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರು. ಈ ಸಮಯದಲ್ಲಿ ಅವರ ಕಾರು ಪಕ್ಕದಲ್ಲಿದ್ದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಆದರೆ ನಟನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಅಜಿತ್ ಅವರ ಕಾರು ನಿಲುಗಡೆಗೆ ಬರುವ ಮೊದಲು ನಿಯಂತ್ರಣ ಕಳೆದುಕೊಂಡು ಗೋಡೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಕ್ಷಿಸಲು ಕೆಲವರು ಧಾವಿಸಿದ್ದರು. ಯಾವುದೇ ಅಪಾಯವಾಗದೇ ನಟ ಕಾರಿನಿಂದ ಹೊರಬಂದಿದ್ದಾರೆ.

ಇನ್ನೂ ಇತ್ತೀಚೆಗೆ ಫಾರ್ಮುಲಾ ಬಿಎಂಡಬ್ಲ್ಯು ಏಷ್ಯಾ, ಬ್ರಿಟಿಷ್‌ ಫಾರ್ಮುಲಾ 3, ಹಾಗೂ ಎಫ್‌ಐಎ ಎಫ್‌ 2 ಚಾಂಪಿಯನ್‌ಶಿಪ್‌ ಹಾಗೂ ಮೋಟಾರು ಸ್ಪೋರ್ಟ್‌ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅಜಿತ್‌ ಕುಮಾರ್‌ ತನ್ನದೇ ಆದ ರೇಸಿಂಗ್‌ ತಂಡವನ್ನು ಹೊಂದಿದ್ದು, ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಅಜಿತ್‌ ಕುಮಾರ್‌ 90ದಶಕದಲ್ಲೇ ರಾಷ್ಟ್ರೀಯ ಮೋಟಾರ್‌ ಸೈಕಲ್‌ ರೇಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮವಾಗಿ ಭಾಗವಹಿಸಿದ್ದರು. 2025ರಲ್ಲಿ ಯುರೋಪ್‌ನ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಭಾಗಿಯಾಗಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.


Spread the love

LEAVE A REPLY

Please enter your comment!
Please enter your name here