HomeGadag Newsಶಿಕ್ಷಕರಿಗೆ ಎಲ್ಲಾ ಕಾಲದಲ್ಲೂ ಗೌರವ : ಎ.ಎಂ. ಅಂಗಡಿ

ಶಿಕ್ಷಕರಿಗೆ ಎಲ್ಲಾ ಕಾಲದಲ್ಲೂ ಗೌರವ : ಎ.ಎಂ. ಅಂಗಡಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಸಮಾಜದಲ್ಲಿ ಬದಲಾವಣೆ ತರಬಲ್ಲ ಅದಮ್ಯ ಶಕ್ತಿ ಶಿಕ್ಷಕರಿಗಿದ್ದು, ಶಿಕ್ಷಕರ ವೃತ್ತಿಗೆ ಎಲ್ಲಾ ಕಾಲದಲ್ಲೂ ಗೌರವವಿದೆ ಎಂದು ಎಸ್‌ಜೆಜೆಎಂ ಸಂಯುಕ್ತ ಪದವಿಪೂರ್ವ ಮಾಹಾವಿದ್ಯಾಲಯದ ಪ್ರಾಚಾರ್ಯ ಎ.ಎಂ. ಅಂಗಡಿ ಹೇಳಿದರು.

ಅವರು ಪಟ್ಟಣದ ಎಸ್‌ಜೆಜೆಎಂ ಸಂಯುಕ್ತ ಪದವಿಪೂರ್ವ ಮಾಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ನಮಗೆ ಶಿಕ್ಷಕರ ವೃತ್ತಿ ಸಿಗುವುದೇ ಒಂದು ಪುಣ್ಯದ ಫಲದಿಂದ. ಯಾವ ವೃತ್ತಿಯಲ್ಲಿಯೂ ಸಿಗದ ಸಂತೃಪ್ತಿ ಶಿಕ್ಷಕರ ವೃತ್ತಿಯಲ್ಲಿದ್ದು, ನಮಗೆ ದೊರೆತ ಶಿಕ್ಷಕ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಿದಲ್ಲಿ ದೇಶದ ಅಭಿವೃದ್ಧಿಯ ಜೊತೆಯಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಶಿಕ್ಷಕರ ವೃತ್ತಿಗೆ ಎಲ್ಲಾ ಕಾಲದಲ್ಲಿಯೂ ಗೌರವವಿದೆ ಎಂದರು.

ಸಿ.ಎಚ್. ದೊಡ್ಡಮನಿ, ಮುತ್ತು ಕುರಬಗೌಳಿ, ಮಂಜುನಾಥ ಅಳಲಗೇರಿ, ಆರ್.ಆರ್. ಪಟ್ಟಣ ಇದ್ದರು.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img