ಕಲಬುರಗಿ: ಸಿ.ಟಿ.ರವಿಗೆ ಜಾಮೀನು ಸಿಕ್ಕಿದ್ದರಿಂದ ಸರ್ಕಾರಕ್ಕೆ ಮುಖಭಂಗವಾಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ಸಿ.ಟಿ.ರವಿಗೆ ಜಾಮೀನು ನೀಡಿದೆ ಆದ್ರೆ ಈವರೆಗೂ ಅವಾಚ್ಯ ಪದಬಳಕೆ ಮಾಡಲೇ ಇಲ್ಲ ಎನ್ನುತ್ತಿದ್ದಾರೆ ಹಾಗಾದ್ರೆ ಮಾಧ್ಯಮದಲ್ಲಿ ಪ್ರಸಾರವಾಗಿದ್ದು ಸುಳ್ಳಾ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನೂ ಎಫ್‌ಎಸ್‌ಎಲ್ ವರದಿ ಬರಲಿ ಎಲ್ಲವೂ ಗೊತ್ತಾಗುತ್ತದೆ ಎಂದರು, ಈ ರೀತಿ ಘಟನೆಯಾದ್ರೂ ಬಿಜೆಪಿಯ ಒಬ್ಬ ನಾಯಕ ಖಂಡಿಸಿಲ್ಲ. ಬಿಜೆಪಿಯವರೆಲ್ಲಾ ದುಶ್ಯಾಸನರು, ಒಂದೇ ಶಾಖಾ ಮಠದ ಮಕ್ಕಳು ಯಾಕಂದ್ರೆ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ವಿರುದ್ಧ ಪೋಕೋ ಕೇಸ್ ಇದೆ. ಬಿಜೆಪಿ ಶಾಸಕ ಮುನಿರತ್ನ ವಿರುದ್ಧವೂ ಕೇಸ್ ಇದೆ ಎಂದು ಹೇಳಿದ್ದಾರೆ.



