ಬಿಗ್ಬಾಸ್ ಸೀಸನ್ 11 ಅದ್ಧೂರಿ ಗ್ರ್ಯಾಂಡ್ ಫಿನಾಲೆ ಇದೇ ವಾರದಲ್ಲಿದೆ. ಸದ್ಯ ಬಿಗ್ ಮನೆಯಲ್ಲಿ ಒಟ್ಟು 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಮೊದಲು ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟ ಸ್ಪರ್ಧಿ ಹನುಮಂತ. ಇದಾದ ಬಳಿಕ ಮೋಕ್ಷಿತಾ ಎಂಟ್ರಿ ಕೊಟ್ಟಿದ್ದರು. ನಂತರ ತ್ರಿವಿಕ್ರಮ್ ಆಯ್ಕೆಯಾದ್ರು.
ಭಾನುವಾರದ ಸಂಚಿಕೆಯಲ್ಲಿ ನಾಮಿನೇಷನ್ ಸ್ಥಾನದಲ್ಲಿ ಕುಳಿತುಕೊಂಡಿದ್ದ ಉಗ್ರಂ ಮಂಜು, ಭವ್ಯಾ ಗೌಡ ಹಾಗೂ ರಜತ್ ಸೇಫ್ ಆಗಿ ನೇರವಾಗಿ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದಲ್ಲದೆ ಮನೆಯಲ್ಲಿನ 6 ಸ್ಪರ್ಧಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.
ಇನ್ನೂ ಇದೀಗ ಒಬ್ಬರಾದ ಬಳಿಕ ಒಬ್ಬರಂತೆ ಅತಿಥಿಗಳು ಬರುತ್ತಿದ್ದಾರೆ. ದೊಡ್ಮನೆಯಲ್ಲಿ ಈಗ ‘ಮಜಾ ಟಾಕೀಸ್’ನ ಪಾತ್ರಧಾರಿಗಳು ಆಗಮಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಭರ್ಜರಿ ಮಜಾ ಕೊಟ್ಟಿದ್ದಾರೆ. ಡಬಲ್ ಮೀನಿಂಗ್ ಮೂಲಕ ಎಲ್ಲರಿಗೂ ಮಜಾ ಕೊಡಲಾಗಿದೆ. ಕುರಿ ಪ್ರತಾಪ್, ಪ್ರಿಯಾಂಕ, ಚಂದ್ರಪ್ರಭಾ,
ಗೊಬ್ಬರ ಸೇರಿ ಇನ್ನಷ್ಟು ಕಲಾವಿದರು ಮನೆಗೆ ಬಂದು ಎಲ್ಲರನ್ನು ನಕ್ಕು ನಗಿಸಿದ್ದಾರೆ. ಕಾಮಿಡಿಯ ಮಸ್ತ್ ಡೈಲಾಗ್ಸ್ ಹೊಡೆದು, ಮ್ಯೂಸಿಕ್ಗೆ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ. ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳ ಪೈಕಿ ಈಗ ಫಿನಾಲೆ ವಾರಕ್ಕೆ ಕೇವಲ 6 ಸ್ಪರ್ಧಿಗಳು ಮಾತ್ರ ಇದ್ದಾರೆ. ಇದರಲ್ಲಿ ಒಬ್ಬರು ಮಾತ್ರ ವಿನ್ನರ್ ಆಗಲಿದ್ದಾರೆ.