ಬೆಂಗಳೂರು:- 2013-18ರ ಸಿದ್ದರಾಮಯ್ಯ ಬೇರೆ.. ಇವಾಗಿನ ಸಿದ್ದರಾಮಯ್ಯ ಎಂದು ಮಾಜಿ ಸಚಿವ ರಾಜಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಪವರ್ ಶೇರಿಂಗ್ ಚರ್ಚೆ ಆಗಿಲ್ಲ. ಪಕ್ಷದ ಯಾರೂ ಈ ಬಗ್ಗೆ ಮಾತಾಡುವಂತಿಲ್ಲ ಅಂತ ಹೈಕಮಾಂಡ್ ಸೂಚಿಸಿದರೂ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಇದೀಗ ರಾಜಣ್ಣ ಮಾತನಾಡಿ, 2013-18ರ ಸಿದ್ದರಾಮಯ್ಯ ಬೇರೆ.. ಇವಾಗಿನ ಸಿದ್ದರಾಮಯ್ಯ ಬೇರೆ. ಆಗ ಪಾದರಸದಂತೆ ಕೆಲಸ ಇರೋದು. ಈಗ ಅವರಿಗೆ ಬೇರೆ ಬೇರೆ ರೀತಿಯ ಒತ್ತಡ ಇದೆ. ಕೆಲವು ಹೇಳಲಾಗದೇ ಇರುವಂತಹ ಒತ್ತಡ ಇದೆ ಅಂದಿದ್ದಾರೆ. ಜೊತೆಗೆ, ನವೆಂಬರ್‌ನಲ್ಲಿ ಯಾವುದೇ ಬದಲಾವಣೆ ಆಗಲ್ಲ ಅಂದಿದ್ದಾರೆ.
ಇನ್ನೂ ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಜಮೀರ್ ಮಾತನಾಡಿ, ನವೆಂಬರ್‌ಗೆ ಯಾವ ಕ್ರಾಂತಿ ಇಲ್ಲ, 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರ್ತಾರೆ ಅಂದಿದ್ದಾರೆ. ಅದಾಗ್ಯೂ, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ ಬಯಸುತ್ತೇನೆ ಅಂತಲೂ ಹೇಳಿದ್ದಾರೆ.



