ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಕ್ರಾಸ್ ಬಳಿ ಧಗ- ಧಗನೇ ಕಬ್ಬಿನ ಗದ್ದೆಯು ಹೊತ್ತಿ ಉರಿದಿದೆ.
ಮಲಪನಗುಡಿಯ ರೈತರದಾರ ಮೈಲಾರಪ್ಪ, ಶಿವರಾಮಪ್ಪರಿಗೆ ಸೇರಿದ ಎರಡು ಎಕರೆ ಕಬ್ಬಿನ ಪೈರು ಸುಟ್ಟು ಭಸ್ಮವಾಗಿದೆ.
ಹೊಸಪೇಟೆಯ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕೆಲಸ ಮಾಡಲಾಯಿತು. ಹಂಪಿ ಪೊಲೀಸರು, ಕಬ್ಬಿನ ಗದ್ದೆಯ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ನಂದಿಸುವ ಕೆಲಸಕ್ಕೆ ಸಾಥ್ ನೀಡಿದರು.



