HomeEntertainment‘ನಿನ್ನನ್ನು ಮತ್ತೆ ನೋಡುವವರೆಗೂ ನೆಮ್ಮದಿ ಇಲ್ಲ’: ದಿಲೀಪ್ ರಾಜ್ ಪತ್ನಿ ಭಾವುಕ ಪೋಸ್ಟ್

‘ನಿನ್ನನ್ನು ಮತ್ತೆ ನೋಡುವವರೆಗೂ ನೆಮ್ಮದಿ ಇಲ್ಲ’: ದಿಲೀಪ್ ರಾಜ್ ಪತ್ನಿ ಭಾವುಕ ಪೋಸ್ಟ್

For Dai;y Updates Join Our whatsapp Group

ನಟ ದಿಲೀಪ್ ರಾಜ್ ನಿಧನದ ಬಳಿಕ ಅವರ ಪತ್ನಿ ಶ್ರೀವಿದ್ಯಾ ಹಂಚಿಕೊಂಡ ಭಾವುಕ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 25 ವರ್ಷಗಳ ದಾಂಪತ್ಯ ಬದುಕಿನ ನೆನಪುಗಳ ನಡುವೆ ಪತಿಯನ್ನು ಕಳೆದುಕೊಂಡ ನೋವನ್ನು ಅವರು ಮನಮುಟ್ಟುವ ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ.

“ದಿಲೀಪ್ ಅವರು ನಮ್ಮೊಂದಿಗೇ ಇರುತ್ತಾರೆ. ಅವರ ಕಲೆ, ಸಿನಿಮಾ ಮತ್ತು ಒಳ್ಳೆಯತನದ ರೂಪದಲ್ಲಿ ಅವರು ಸದಾ ಜೀವಂತ” ಎಂದು ಶ್ರೀವಿದ್ಯಾ ಬರೆದುಕೊಂಡಿದ್ದಾರೆ.

ಇನ್ನೂ ಪತಿಯ ಅಗಲಿಕೆಯ ನೋವನ್ನು ಹೇಳಿಕೊಂಡ ಅವರು, “ಅವರ ಆತ್ಮಕ್ಕೆ ಶಾಂತಿ ಸಿಗಲಿ. ಆದರೆ ನಾನು ಅವರನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ” ಎಂದು ಬರೆದಿರುವುದು ಓದುಗರ ಕಣ್ಣೀರಾಗಿಸಿದೆ.

ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾ ಇಬ್ಬರೂ ಸೇರಿ ಹಲವು ಧಾರಾವಾಹಿಗಳನ್ನು ನಿರ್ಮಿಸಿದ್ದರು. ‘ಕೃಷ್ಣ ರುಕ್ಕು’ ಸೇರಿ ಅನೇಕ ಜನಪ್ರಿಯ ಧಾರಾವಾಹಿಗಳ ಯಶಸ್ಸಿನ ಹಿಂದೆ ಈ ಜೋಡಿಯ ಶ್ರಮ ಇತ್ತು.

ಶ್ರೀವಿದ್ಯಾ ಅವರ ಈ ಭಾವುಕ ಸಂದೇಶಕ್ಕೆ ಅಭಿಮಾನಿಗಳು ಮತ್ತು ಸಿನಿರಂಗದ ಗಣ್ಯರು ಸಾಂತ್ವನ ಸೂಚಿಸುತ್ತಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img