ಸಿಎಂ ಅವರೇ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತದೆ: ಬಿ.ಎಸ್. ಯಡಿಯೂರಪ್ಪ

0
Spread the love

ಶಿವಮೊಗ್ಗ: ಸಿಎಂ ಅವರೇ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಹೇಳಿದರು.  ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಈಗ ಸಿಎಂ ವಿರುದ್ಧ ನಾವು ಯಾವುದೇ ಹೋರಾಟ ಮಾಡುವುದಿಲ್ಲ. ನ್ಯಾಯಾಲಯದಲ್ಲಿನ ತೀರ್ಪು ಅಂತಿಮ ಹಂತಕ್ಕೆ ಬಂದಿರುವುದರಿಂದ ಸಹಜವಾಗಿ ಸಿಎಂ ಅವರೇ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು.

Advertisement

ಇನ್ನೂ ಎಲ್ಲಾ ಹಗರಣಗಳು ಸಾಬೀತಾಗಿರುವುದರಿಂದ ಅವರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಜಗಜ್ಜಾಹೀರಾಗಿರುವ ಸಂಗತಿ. ನೋಡೋಣ ನಾಳೆ ಏನಾಗುತ್ತದೆ ಎಂದರು.

ಕೋವಿಡ್​ ಹಗರಣ ಸಂಬಂಧ ಬಿಜೆಪಿ ನಾಯಕರ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ದಾಖಲಿಸಬೇಕೆಂದು ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತಿದೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಇದರಲ್ಲಿ ಅರ್ಥ ಇಲ್ಲ. ಸರ್ಕಾರ ಏನೂ ಬೇಕಾದರು ತೀರ್ಮಾನ ತೆಗೆದುಕೊಳ್ಳಲು ಸರ್ವ ಸ್ವತಂತ್ರವಾಗಿದೆ. ಅವರು ಏನು ಬೇಕಾದರೂ ಕ್ರಮ ಕೈಗೊಳ್ಳಲಿ. ಕಾನೂನು ರೀತಿಯಲ್ಲಿ ಎದುರಿಸೋಣ ಎಂದು ತಿಳಿಸಿದರು.

 

 


Spread the love

LEAVE A REPLY

Please enter your comment!
Please enter your name here