ಕೊಡಗು:- ಇಬ್ಬರ ನಡುವೆ ಕುಡಿದ ಮತ್ತಿನಲ್ಲಿ ಗಲಾಟೆಯಾಗಿದ್ದು ಕತ್ತಿಯಿಂದ ಹೊಡೆದಾಡಿಕೊಂಡ ಘಟನೆ ವಿರಾಜಪೇಟೆ ತಾಲ್ಲೂಕಿನ ಕೊಳತ್ತೋಡು ಬೈಗೋಡು ಗ್ರಾಮದಲ್ಲಿ ಜರುಗಿದೆ.
Advertisement
ಕುಡಿದ ಮತ್ತಿನಲ್ಲಿ ಇಬ್ಬರು ನಡುವೆ ಗಲಾಟೆಯಾಗಿದ್ದು ಮೊಗೇರ ಗಣೇಶ ಎಂಬ ವ್ಯಕ್ತಿ 40 ವರ್ಷದ ಮೊಗೇರ ವಿಶ್ವ ಎನ್ನುವವನನ್ನು ಕತ್ತಿಯಿಂದ ಕಡಿದು ಹಾಕಿದ್ದಾನೆ.
ಇವರಿಬ್ಬರು ಗ್ರಾಮದ ಅಚ್ಚಯ್ಯ ಎಂಬುವವರ ಕಾಫಿತೋಟದ ಲೈನ್‌ಯಲ್ಲಿ ವಾಸವಿದ್ದ ಕಾರ್ಮಿಕರಾಗಿದ್ದು. ವಿರಾಜಪೇಟೆ ಗ್ರಾಮಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಈ ಪ್ರಕರಣ ನಡೆದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಿಸಿದ್ದಾರೆ. ವಿರಾಜಪೇಟೆ ಶವಗಾರಕ್ಕೆ ವಿಶ್ವನ ಮೃತದೇಹವನ್ನು ರವಾನೆಮಾಡಲಾಗಿದೆ.